ಯಾದಗಿರಿ: ಭೀಮಾ ನದಿ ಪ್ರವಾಹ ಪೀಡಿತ ಪ್ರದೇಶಗಳ ವೀಕ್ಷಣೆ ಮಾಡಲು ಯಾದಗಿರಿ ಜಿಲ್ಲೆಗೆ ಇಂದು ಕಂದಾಯ ಸಚಿವ ಆರ್ ಅಶೋಕ್ ಭೇಟಿ ನೀಡಿ, ಬೋಟ್ ಸಹಾಯದ ಮೂಲಕ ನೀರಿನಲ್ಲಿ ಜಲಾವೃತಗೊಂಡ ಗ್ರಾಮಗಳಿಗೆ ತೆರಳಿ ಅಲ್ಲಿನ ವಾಸ್ತವ ಸ್ಥಿತಿಗತಿ ಬಗ್ಗೆ ಪರಿಶೀಲನೆ ನಡೆಸಿದರು.
ಜಿಲ್ಲೆಯ ಶಹಪುರ ತಾಲ್ಲೂಕಿನ ಪ್ರವಾಹ ಪೀಡಿತ ಪ್ರದೇಶಗಳ ವೀಕ್ಷಣೆಗೆ ಭೇಟಿ ನೀಡಿದ ಸಚಿವ ಅಶೋಕ್, ಎನ್ಡಿಆರ್ಎಫ್ ತಂಡದ ಬೋಟ್ ಮೂಲಕ ಸಂಪೂರ್ಣವಾಗಿ ಜಲಾವೃತಗೊಂಡ ರೋಜಾ ಗ್ರಾಮಕ್ಕೆ ತೆರಳಿ ಅಲ್ಲಿನ ಸ್ಥಿತಿಗತಿ ಅವಲೋಕಿಸಿದರು. ನಂತರ ಹುಸರಗುಂಡಗಿ, ನಾಯ್ಕಲ್ ಸೇರಿದಂತೆ ಹಲವು ಗ್ರಾಮಗಳಲ್ಲಾದ ಹಾನಿ ವೀಕ್ಷಣೆ ಮಾಡಿದರು.
ಇದೇ ವೇಳೆ ಸಚಿವ ಆರ್ ಅಶೋಕ್ಗೆ ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರ, ರಾಜುಗೌಡ ಸೇರಿದಂತೆ ಹಲವರು ಸಾಥ್ ನೀಡಿದರು.