ಸುರಪುರ: ಕೊರೊನಾ ಭೀತಿಯಿಂದ ಮರಳಿ ತಮ್ಮ ಗ್ರಾಮಗಳಿಗೆ ಆಗಮಿಸಿದ್ದ ವಲಸೆ ಕಾರ್ಮಿಕರು ಮತ್ತೆ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ.
ಇಂದು ಸುರಪುರ ಬಸ್ ನಿಲ್ದಾಣದಲ್ಲಿ ನೂರಾರು ಕಾರ್ಮಿಕರು ಬಸ್ಗಾಗಿ ಕಾಯುತ್ತಾ ಕುಳಿತಿದ್ದರು. ಗುಳೆ ಹೊರಟವರನ್ನು ಮಾತನಾಡಿಸಿದಾಗ ಇಲ್ಲಿ ಕೆಲಸವೇ ಇಲ್ಲ ಸರ್. ಬೆಂಗಳೂರನಲ್ಲಿ ಕೆಲಸ ಸಿಗುತ್ತದೆ. ಒಂದು ಮನೆಯಲ್ಲಿ ಹತ್ತಾರು ಜನರಿದ್ದೇವೆ. ಹಾಗಾಗಿ ಇಲ್ಲಿದ್ದರೆ ಮನೆಯ ಖರ್ಚು ನಿಭಾಯಿಸುವುದು ಕಷ್ಟ. ಆದ್ದರಿಂದ ಬೆಂಗಳೂರಿಗೆ ದುಡಿಯಲು ಹೋಗುತ್ತಿರುವುದಾಗಿ ತಿಳಿಸಿದರು.
ಜಿಲ್ಲಾ ಪಂಚಾಯತ್ ಸಿಇಒ ಸೇರಿದಂತೆ ಹಲವು ಅಧಿಕಾರಿಗಳು ಉದ್ಯೋಗ ಖಾತ್ರಿಯಡಿ ಕೆಲಸ ನೀಡುತ್ತಿರುವುದಾಗಿ ಹೇಳುತ್ತಿದ್ದಾರೆ. ಆದರೆ ಗುಳೆ ಹೋಗುವವರಿಗೆ ಯಾಕೆ ಕೆಲಸ ನೀಡಿಲ್ಲ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಜಿಲ್ಲಾಡಳಿತ ಕೂಡಲೇ ಎಚ್ಚೆತ್ತುಕೊಂಡು ಗುಳೆ ಹೋಗುವವರನ್ನು ತಡೆದು ಉದ್ಯೋಗ ನೀಡುಲು ಮುಂದಾಗಬೇಕಿದೆ.
ಲಾಕ್‌ಡೌನ್ ಸಡಿಲಿಕೆ: ನಗರಗಳತ್ತ ಮತ್ತೆ ಗುಳೆ ಹೊರಟ ಕಾರ್ಮಿಕರು! - ಸುರಪುರ
ಲಾಕ್‌ಡೌನ್ ಸಡಿಲಿಕೆ ಹಿನ್ನೆಲೆ ಕೆಲಸ ಅರಸಿ ಕಾರ್ಮಿಕರು ಪುನಃ ನಗರಗಳತ್ತ ಗುಳೆ ಹೊರಟಿದ್ದಾರೆ.