ETV Bharat / state

ಫೈನಾನ್ಸ್​ಗಳಿಂದ ಪಡೆದ ಹಣಕ್ಕೆ ಬಡ್ಡಿ ಮನ್ನಾ ಮಾಡುವಂತೆ ಮಹಿಳಾ ಸಂಘಗಳಿಂದ ಮನವಿ

ವಿವಿಧ ಮಹಿಳಾ ಸಂಘಗಳು ಫೈನಾನ್ಸ್​ಗಳಿಂದ ಪಡೆದ ಬಡ್ಡಿಯನ್ನು ಮನ್ನಾ ಮಾಡಬೇಕು ಎಂದು ತಹಶಿಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

author img

By

Published : Jun 14, 2020, 1:10 AM IST

Interest waived for money received finance women associations
ಫೈನಾನ್ಸ್ ಗಳಿಂದ ಪಡೆದ ಹಣಕ್ಕೆ ಬಡ್ಡಿ ಮನ್ನಾ ಮಾಡಬೇಕು, ಮಹಿಳಾ ಸಂಘಗಳಿಂದ ಮನವಿ

ಗುರುಮಠಕಲ್: ಕೋವಿಡ್-19 ಹಿನ್ನೆಲೆಯಲ್ಲಿ ಮಹಿಳಾ ಸಂಘಗಳು ವಿವಿಧ ಫೈನಾನ್ಸ್​​ಗಳಿಂದ ಪಡೆದ ಹಣಕ್ಕೆ ಆರು ತಿಂಗಳ ಬಡ್ಡಿಯ ಕಂತು ಮನ್ನಾ ಮಾಡಬೇಕು ಎಂದು ವಿವಿಧ ಮಹಿಳಾ ಸಂಘಗಳು ಆಗ್ರಹಿಸಿದ್ದಾರೆ.

ಕೊರೊನಾ ಹರಡುವುದನ್ನು ನಿಯಂತ್ರಿಸುವ ದೃಷ್ಟಿಯಿಂದ ಜಗತ್ತೆ ಲಾಕ್​​​ಡೌನ್ ಆಗಿದ್ದ ಸಮಯದಲ್ಲಿ ಆದಾಯವಿಲ್ಲದಂತಾಗಿದ್ದುದರಿಂದ, ವಿವಿಧ ಮಹಿಳಾ ಸಂಘಗಳು, ಫೈನಾನ್ಸ್ ಸಂಸ್ಥೆಗಳಲ್ಲಿ ಮಹಿಳೆಯರು ಪಡೆದಿದ್ದ ಸಾಲದ ಕಂತುಗಳು ಹಾಗೂ ಬಡ್ಡಿಯನ್ನು ಮನ್ನಾ ಮಾಡುವಂತೆ ಕೋರಿ ವಿವಿಧ ಮಹಿಳಾ ಸಂಘಟನೆಗಳು ಮನವಿ ಮಾಡಿವೆ.

ಮಹಿಳೆಯರಿಗೆ ಸಂಬಂಧಪಟ್ಟ ಮೈಕ್ರೋ ಫೈನಾನ್ಸ್, ಚೈತನ್ಯ ಫೈನಾನ್ಸ್, ಸ್ಪಂದನಾ ಫೈನಾನ್ಸ್, ಗ್ರಾಮ ಶಕ್ತಿ ಫೈನಾನ್ಸ್, ಧರ್ಮಸ್ಥಳ ಸಂಸ್ಥೆ ಸೇರಿದಂತೆ ವಿವಿಧ ಸಂಸ್ಥೆಗಳು ಕೊಟ್ಟಿರುವ ಸಾಲದ ಕಂತುಗಳನ್ನು ಸದ್ಯಕ್ಕೆ ಪಾವತಿಸಲು ಸಾಧ್ಯವಿಲ್ಲದ ಕಾರಣ ಮುಖ್ಯಮಂತ್ರಿಗಳು ನಮ್ಮ ಸಹಾಯಕ್ಕೆ ಬರಬೇಕು ಎಂದು ತಹಶಿಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.

ಕೊರೊನಾ ಲಾಕ್​ಡೌನ್ ಪರಿಣಾಮವಾಗಿ ಉದ್ಯೋಗವಿಲ್ಲದೆ ಆದಾಯ ಕುಂಠಿತಗೊಂಡಿದ್ದು, ಈ ಸಮಯದಲ್ಲಿ ಸರ್ಕಾರವು ನಮ್ಮ ಆರು ತಿಂಗಳವರೆಗಿನ ಕಂತುಗಳು ಹಾಗೂ ಬಡ್ಡಿಯನ್ನು ಮನ್ನಾ ಮಾಡಿ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುವಂತೆ ಕೋರಿದ್ದಾರೆ. ಯಾವುದೇ ಉದ್ಯೋಗವಿಲ್ಲದೆ ಬದುಕಲು ತೊಂದರೆಯಾಗುತ್ತಿದೆ. ಇಂತಹ ಸಮಯದಲ್ಲಿ ಮಹಿಳಾ ಸಂಘಗಳಿಗೆ ಬಡ್ಡಿ ಕಟ್ಟಲು ಒತ್ತಾಯಿಸುತ್ತಿದ್ದಾರೆ. ಇದರಿಂದ ಮಹಿಳೆಯರು ಆತ್ಮಹತ್ಯೆಗೆ ಗುರಿಯಾಗಬಹುದು, ಇದರಿಂದ ಸರ್ಕಾರ 6 ತಿಂಗಳ ಬಡ್ಡಿ ಮತ್ತು ಅಸಲನ್ನು ಭರಿಸಬೇಕು ಎಂದು ಮಹಿಳಾ ಸಂಘಟನೆಯವರು ಆಗ್ರಹಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.