ಯಾದಗಿರಿ: ವಡಗೇರಾ ಪಟ್ಟಣದ ಆಂಜನೇಯ ದೇವಾಲಯದ ಆವರಣದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಬೇವು ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಪಟ್ಟಣದ ಎಲ್ಲಾ ಧರ್ಮದ ಮುಖಂಡರು ಹಾಗೂ ಸಾರ್ವಜನಿಕರು ಪಾಲ್ಗೊಂಡು ಪೂಜೆ ಸಲ್ಲಿಸುವ ಮೂಲಕ ಸೌಹಾರ್ದತೆ ಮೆರೆದರು.
ಈ ವೇಳೆ ಮಾತನಾಡಿದ ಅಲ್ಪಸಂಖ್ಯಾತರ ಹಿರಿಯ ಮುಖಂಡ ಬಾಷುಮಿಯಾ ವಡಗೇರಾ, ನಮ್ಮ ಭಾಗದಲ್ಲಿ ಧರ್ಮಗಳ ನಡುವೆ ಯಾವುದೇ ವಿವಾದವಿಲ್ಲ. ನಾವು ತುಂಬಾ ಆತ್ಮೀಯರಾಗಿದ್ದೇವೆ. ಸಂವಿಧಾನಕ್ಕೆ ಗೌರವ ಕೊಟ್ಟು ಅದರಡಿ ಬಾಳಿ ಬದುಕಬೇಕು ಎಂದರು.
ಜೆಡಿಎಸ್ ಹಿರಿಯ ಮುಖಂಡ ಹನುಮೇಗೌಡ ಬೀರನಕಲ್ ಮಾತನಾಡಿ, ಹಿಂದೂ-ಮುಸ್ಲಿಂ ಎಂದು ನಾವು ಯಾವತ್ತೂ ಭೇದಭಾವ ಮಾಡದೆ ಪರಸ್ಪರ ಅಣ್ಣ ತಮ್ಮಂದಿರಂತೆ ಬಾಳುತ್ತಿದ್ದೇವೆ. ನಮಗೆ ಎಲ್ಲಾ ಧರ್ಮದ ಆಚರಣೆಗಳು ತುಂಬ ಮುಖ್ಯ. ಹಾಗಾಗಿ, ಮುಂದಿನ ದಿನಗಳಲ್ಲಿ ಈ ರೀತಿಯ ಜಾತ್ಯತೀತ ತತ್ವದಿಂದ ಕೂಡಿದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳೋಣ ಎಂದರು.
ಇದನ್ನೂ ಓದಿ; ಪಾಕ್ ಸಂಸತ್ತಿನಲ್ಲಿಂದು ಅವಿಶ್ವಾಸ ನಿರ್ಣಯದ ಮತ: ಇಮ್ರಾನ್ ಹಣೆಬರಹ ನಿರ್ಧಾರ