ಯಾದಗಿರಿ: ಹಿಜಾಬ್ ಧರಿಸಿ ಬರಬೇಡಿ ಎಂದಿದ್ದಕ್ಕೆ ಶಿಕ್ಷಕರನ್ನ ವಿದ್ಯಾರ್ಥಿಗಳು ತರಾಟೆ ತೆಗೆದುಕೊಂಡ ಘಟನೆ ಗುರುಮಠಕಲ್ ಪಟ್ಟಣದ ಉರ್ದು ಪ್ರೌಢ ಶಾಲೆಯಲ್ಲಿ ನಡೆದಿದೆ. ನಾವು ಹಿಜಾಬ್ ಧರಿಸಿಯೇ ಶಾಲೆಗೆ ಬರುತ್ತೇವೆ ಎಂದು ಪಟ್ಟು ಹಿಡಿದು, ಹಿಜಾಬ್ ಧರಿಸಿಕೊಂಡೇ ವಿದ್ಯಾರ್ಥಿಗಳು ತರಗತಿಗೆ ಹಾಜರಾಗಿದ್ದರು. ಆದರೆ, ಶಾಲೆಯ ಮುಖ್ಯ ಶಿಕ್ಷಕರು ನೀವು ಹಿಜಾಬ್ ತೆಗೆದು ಕ್ಲಾಸ್ಗೆ ಬನ್ನಿ ಇಲ್ಲವೇ ಮನೆಗೆ ಹೋಗಿ ಎಂದು ಹೇಳಿದ್ದಾರೆ.
ಇದು ಉರ್ದು ಶಾಲೆ ನಾವು ಹಿಜಾಬ್ ಧರಿಸುತ್ತೇವೆ ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದು, ಕೋರ್ಟ್ ಆದೇಶವಿದ್ದು, ಅದನ್ನು ಪಾಲಿಸಬೇಕು. ನೀವು ಹಿಜಾಬ್ ಬಿಚ್ಚಿಟ್ಟು ಕ್ಲಾಸ್ಗೆ ಬನ್ನಿ ಎಂದು ಶಿಕ್ಷಕರು ಪದೇ ಪದೆ ಹೇಳಿದ್ದಾರೆ.
ಹಿಜಾಬ್ ಧರಿಸುವುದು ನಮ್ಮ ಹಕ್ಕಿದೇ, ನಾವು ಧರಿಸುತ್ತೇವೆ ಎಂದು ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ್ದಾರೆ. ಸ್ಥಳಕ್ಕೆ ಗುರುಮಠಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.