ಯಾದಗಿರಿ : ಪತ್ರಕರ್ತೆ ಗೌರಿ ಲಂಕೇಶ್ ಕೂಡ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದರು, ಪೊಲೀಸ್ ಇಲಾಖೆ ಈ ಕುರಿತು ತನಿಖೆ ನಡೆಸಲಿ ಎಂದು ಆಂದೋಲಾ ಶ್ರೀ ಹಾಗೂ ಶ್ರೀರಾಮಸೇನೆ ರಾಜ್ಯಾಧ್ಯಕ್ಷರೂ ಆದ ಸಿದ್ಧಲಿಂಗ ಸ್ವಾಮೀಜಿ ಒತ್ತಾಯಿಸಿದ್ದಾರೆ.
ನಗರದಲ್ಲಿ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರ ಹೇಳಿಕೆಯನ್ನ ಸಮರ್ಥಿಸಿಕೊಂಡು ಮಾತನಾಡಿದ ಸಿದ್ಧಲಿಂಗ ಸ್ವಾಮೀಜಿ, ಮುತಾಲಿಕ್ ಅವರ ಹೇಳಿಕೆಯಲ್ಲಿ ಸತ್ಯಾಂಶವಿದೆ, ಅವರ ಹೇಳಿಕೆಯನ್ನು ನಾನು ಸ್ವಾಗತಿಸುತ್ತೇನೆ ಎಂದರು.
ರಾಜ್ಯಾದಲ್ಲಿ ಡ್ರಗ್ಸ್ ಹಾವಳಿ ಹೆಚ್ಚಾಗಿದೆ. ದೇಶದ ಯುವ ಸಮೂಹವನ್ನ ಹಾಳು ಮಾಡಲಾಗುತ್ತಿದೆ. ಯುವಕರಲ್ಲಿ ಡ್ರಗ್ಸ್ ಪಸರಿಸುವ ಕೆಸಲವಾಗುತ್ತಿದೆ. ಈ ಮೂಲಕ ಹಣ ಸಂಗ್ರಹಿಸಿ ನಮ್ಮ ರಾಷ್ಟ್ರದ ಮೇಲೆ ಯುದ್ಧ ಸಾರುವ ಕುತಂತ್ರದಿಂದ ಪಾಕಿಸ್ತಾನ ಮತ್ತು ಕೆಲ ಮುಸ್ಲಿಂ ಮತಾಂಧ ಸಂಘಟನೆಗಳು ಡ್ರಗ್ಸ್ ಜಿಹಾದ್ ಪ್ರಾರಂಭಿಸಿವೆ ಅಂತ ಆರೋಪಿಸಿದರು.
ಹಿಂದೂ ಸಮಾಜದ ಸಂಖ್ಯೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಹೇಗೆ ಲವ್ ಜಿಹಾದ್ ನಡೆಯುತ್ತಿದೆಯೋ ಹಾಗೆ ಯುವ ಸಮುದಾಯವನ್ನು ಹಾಳು ಮಾಡುವ ಸಲುವಾಗಿ ಡ್ರಗ್ ಜಿಹಾದ್ ಪ್ರಾರಂಭಿಸಲಾಗಿದೆ. ಸಿನಿಮಾ ಲೋಕವನ್ನ ನೋಡಿದ ಯುವಕರು ಈ ಮಾಯಾ ಕಾಲದಲ್ಲಿ ಸಿಲುಕಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಈ ಡ್ರಗ್ಸ್ ಜಿಹಾದ್ ಹತ್ತಾರು ವರ್ಷಗಳಿಂದ ನಡೆದುಕೊಂಡು ಬಂದಿದ್ದು, ಈಗ ಅದು ಬೆಳಕಿಗೆ ಬಂದಿದೆ. ಸರ್ಕಾರ ಈ ಡ್ರಗ್ಸ್ ಸೇವನೆ ಮತ್ತು ಸರಬರಾಜು ಮಾಡುವವರ ವಿರುದ್ಧ ಕಠಿಣ ಕ್ರಮ ಜರಗಿಸಿ ಅವರನ್ನ ಜೈಲಿಗಟ್ಟಬೇಕು ಅಂತ ಆಗ್ರಹಿಸಿದರು.
ಇನ್ನು ಎಸ್ಡಿಪಿಐ ಹಾಗೂ ಪಿಎಫ್ಐ ಸಂಘಟನೆಗಳು ಜೊತೆಗೂಡಿ ಭಾರತ ದೇಶವನ್ನು ಪಾಕಿಸ್ತಾನ ಮಾಡಬೇಕು ಹಾಗೂ ಇಸ್ಲಾಮಿಕ್ ರಾಷ್ಟ್ರವನ್ನಾಗಿಸುವ ದುರುದ್ದೇಶದಿಂದ ಹಿಂದೂ ಕಾರ್ಯಕರ್ತರನ್ನ ಟಾರ್ಗೆಟ್ ಮಾಡುವ ಮೂಲಕ ನಿರಂತರ ಕೊಲೆ ಸುಲಿಗೆ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ಎರಡು ಸಂಘಟನೆಗಳನ್ನ ನಿಷೇಧಿಸಬೇಕು ಎಂದು ಒತ್ತಾಯಿಸಿದರು.
ಇದೇ ಸೆ. 14 ರಂದು ಈ ಸಂಘಟನೆಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಉಗ್ರ ಹೊರಾಟ ನಡೆಸಲಾಗುವದು. ಇನ್ನು ಎಲ್ಲಿಯವರೆಗೆ ಎಸ್ಡಿಪಿಐ ಮತ್ತು ಪಿಎಫ್ಐ ಸಂಘಟನೆಗಳನ್ನು ಸರ್ಕಾರ ಬ್ಯಾನ್ ಮಾಡುವುದಿಲ್ಲವೋ ಅಲ್ಲಿಯವರೆಗೆ ನಮ್ಮ ಹೊರಾಟ ಮುಂದುವರೆಯುತ್ತದೆ ಎಂದು ಎಚ್ಚರಿಕೆ ನೀಡಿದರು. ಡ್ರಗ್ಸ್ ಜಿಹಾದ್ ವಿರುದ್ಧ ಶ್ರೀರಾಮ ಸೇನಾವತಿಯಿಂದ ನಾಳೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಇದೇ ವೇಳೆ ಹೇಳಿದರು.