ETV Bharat / state

ಸುರಪುರ: ತೈಲ ಬೆಲೆ ಏರಿಕೆ ಖಂಡಿಸಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ

ಪೆಟ್ರೋಲ್-ಡೀಸೆಲ್​​, ಎಲ್.ಪಿ.ಜಿ ಗ್ಯಾಸ್ ದರ ಹಾಗೂ ವಸ್ತುಗಳ ಬೆಲೆ ಹೆಚ್ಚಳವಲ್ಲದೇ, ಕೊರೊನಾ ವೈರಸ್ ನಿಯಂತ್ರಣದ ಕಿಟ್ ಖರೀದಿಯಲ್ಲಿಯೂ ಬಿಜೆಪಿ ಸರ್ಕಾರ ಅವ್ಯವಹಾರ ನಡೆಸಿದೆ ಎಂದು ಸುರಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗರಾಜ ಬಾಚಿಮಟ್ಟಿ ಆರೋಪಿಸಿದ್ದಾರೆ.

congress protest against  central govt at surapura
ತೈಲ ಬೆಲೆ ಏರಿಕೆ ಖಂಡಿಸಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ
author img

By

Published : Jul 9, 2020, 3:52 PM IST

ಸುರಪುರ: ಅಗತ್ಯ ವಸ್ತುಗಳು ಹಾಗೂ ತೈಲ ಬೆಲೆ ಏರಿಕೆ ಖಂಡಿಸಿ ನಗರದ ಬ್ಲಾಕ್ ಕಾಂಗ್ರೆಸ್ ವತಿಯಿಂದ ತಹಶೀಲ್ದಾರ್​​​ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತಹಶೀಲ್ದಾರ್​ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.

ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ
ಈ ಸಂದರ್ಭದಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗರಾಜ ಬಾಚಿಮಟ್ಟಿ, ಪೆಟ್ರೋಲ್- ಡೀಸೆಲ್​​, ಎಲ್.ಪಿ.ಜಿ ಗ್ಯಾಸ್ ದರ ಹಾಗೂ ವಸ್ತುಗಳ ಬೆಲೆ ಹೆಚ್ಚಳವಲ್ಲದೇ, ಕೊರೊನಾ ವೈರಸ್ ನಿಯಂತ್ರಣದ ಕಿಟ್ ಖರೀದಿಯಲ್ಲಿಯೂ ಅವ್ಯವಹಾರ ನಡೆದಿದೆ. ಈ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
ಮುಖಂಡ ಮಾಳಪ್ಪ ಕಿರದಳ್ಳಿ ಮಾತನಾಡಿ, ತೈಲ ಬೆಲೆ ಏರಿಕೆಯನ್ನ ತಡೆಯಲು ರಾಷ್ಟ್ರಪತಿಗಳು ಸರ್ಕಾರಕ್ಕೆ ಸೂಚಿಸಬೇಕು. ಕಿಸಾನ್ ಸಮ್ಮಾನ್ ಹಾಗೂ ಪ್ರಧಾನ ಮಂತ್ರಿ ಫಸಲ್​ ಭೀಮಾ ಯೋಜನೆಯ ವಿಮಾ ಹಣವು ರೈತರಿಗೆ ತಲುಪುತ್ತಿಲ್ಲ. ಇವುಗಳು ಬೋಗಸ್ ಕಂಪನಿಗಳಾಗಿವೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಭೀಮನಾಯಕ, ದಾವೂದ್​ ಪಠಾಣ್ ಮಹಮ್ಮದ್ ಮೌಲಾ, ಸಿದ್ದರಾಮು, ಮೈಬೂಸಾಬ್, ಶಕೀಲ್ ಅಹಮ್ಮದ್, ಶರಣು ತಳವಾರಗೇರಾ, ವೆಂಕಟೇಶ್ ಶುಕ್ಲಾ, ಶರಣು ಕಳ್ಳಿಮನಿ, ವೆಂಕಟೇಶ್ ದಳವಾಯಿ, ವೆಂಕಟೇಶ ರೆಡ್ಡಿ ಸೇರಿದಂತೆ ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿದ್ದರು. ನಂತರ ರಾಷ್ಟ್ರಪತಿಗಳಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್​​​ ನಿಂಗಣ್ಣ ಬಿರಾದಾರ್ ಅವರ ಸಲ್ಲಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.