ETV Bharat / state

ದೆಹಲಿ ಹಿಂಸಚಾರಕ್ಕೆ ಕಾಂಗ್ರೆಸ್​​​​ ನೇರ ಹೊಣೆ: ಮುತಾಲಿಕ್​ ಆರೋಪ

ದೆಹಲಿ ಹಿಂಸಚಾರಕ್ಕೆ ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್​​ ಪಕ್ಷಗಳೇ ಕಾರಣ ಎಂದು ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆರೋಪಿಸಿದ್ದಾರೆ.

Pramod Muthalik
ಪ್ರಮೋದ್ ಮುತಾಲಿಕ್
author img

By

Published : Feb 29, 2020, 9:38 PM IST

ಯಾದಗಿರಿ: ದೆಹಲಿ ಹಿಂಸಚಾರಕ್ಕೆ ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್​​ ಪಕ್ಷಗಳೇ ಕಾರಣ ಎಂದು ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆರೋಪಿಸಿದ್ದಾರೆ.

ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್

ಪ್ರಕರಣವೊಂದರ ವಿಚಾರಣೆಗೆ ಹಾಜರಾಗಲು ಜಿಲ್ಲಾ ನ್ಯಾಯಾಲಯಕ್ಕೆ ಆಗಮಿಸಿದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಎ, ಎನ್​ಆರ್​ಸಿ, ಎನ್​ಪಿಆರ್ ಕಾಯ್ದೆಗಳು ಪ್ರತಿ ದೇಶದಲ್ಲಿ ಇವೆ. ಇದನ್ನು ವಿರೋಧಿಸಿ ಭಾರತೀಯ ಮುಸ್ಲಿಮರನ್ನು ಪ್ರಚೋದಿಸಿ ಅವರನ್ನ ಬಲಿ ಕುಡುವಂತಹ ದೊಡ್ಡ ಷಡ್ಯಂತ್ರ ಈ ಪಕ್ಷಗಳು ಮಾಡಿವೆ ಎಂದು ವಾಗ್ದಾಳಿ ನಡೆಸಿದರು.

ದೆಹಲಿಯಲ್ಲಿ ನಡೆದ ಗಲಭೆ ದುರದೃಷ್ಟಕರ. ಗಲಭೆ ಪೂರ್ವನಿಯೋಜಿತವಾದದ್ದು, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಬಂದಾಗ ವ್ಯವಸ್ಥಿತವಾಗಿ ಗಲಭೆ ನಡೆಸಿ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತಕ್ಕೆ ಕೆಟ್ಟ ಹೆಸರು ತರಬೇಕೆಂಬುದು ಇದರ ಉದ್ದೇಶವಾಗಿತ್ತು. ಇದರ ಹಿಂದೆ ಕಾಂಗ್ರೆಸ್ ಪಕ್ಷ ಇದೆ. ಗಲಭೆಯಲ್ಲಿ 42 ಜನರ ಸಾವಿಗೆ ಕಾಂಗ್ರೆಸ್ ಪಕ್ಷವೇ ಕಾರಣ ಎಂದು ಕಿಡಿಕಾರಿದರು.

ಬಿಜೆಪಿ ನಾಯಕರುಗಳ ಪ್ರಚೋದನಕಾರಿ ಹೇಳಿಕೆ ಸಮರ್ಥಿಸಿಕೊಂಡ ಮುತಾಲಿಕ್, ಈ ಹಿಂದೆ ಕೂಡ ಹಲವು ನಾಯಕರು ಹೇಳಿಕೆ ನೀಡಿದ್ದಾರೆ. ಗಲಭೆಗೆ ಅವರ ಹೇಳಿಕೆ ಕಾರಣ ಅನ್ನುವುದನ್ನು ನಾನು ಒಪ್ಪುವುದಿಲ್ಲ ಎಂದರು.

ಶ್ರೀಶೈಲ ಸಾರಂಗಧರ ಸ್ವಾಮೀಜಿ ಹೇಳಿಕೆಗೆ ಖಂಡಿಸಿದ ಮುತಾಲಿಕ್, ಸ್ವಾಮೀಜಿಗಳ ರಾಜಕೀಯ ಪ್ರವೇಶ ಸರಿಯಲ್ಲ. ಮಠಗಳು, ಮಠಾಧೀಶರು ಎಲ್ಲರನ್ನೂ ಒಗ್ಗೂಡಿಸುವ ಮೂಲಕ ಸಮಾನತೆ ಸಾರುವಂತಹ ಕೆಲಸ ಮಾಡಬೇಕು. ಒಬ್ಬ ವ್ಯಕ್ತಿಗೆ, ಜಾತಿಗೆ ಸ್ವಾಮೀಜಿಗಳು ಸೀಮಿತವಾಗಬಾರದು. ಸ್ವಾಮೀಜಿಗಳು ರಾಜಕೀಯ ಪ್ರವೇಶ ಮಾಡುವುದಾದರೆ ಮಠಗಳನ್ನು ತೊರೆದು ಕಾವಿ ಬಟ್ಟೆ ತೆಗೆದು ರಾಜಕೀಯಕ್ಕೆ ಬರಲಿ. ಅದನ್ನ ಬಿಟ್ಟು ಸ್ವಾಮೀಜಿಗಳ ಅತಿಯಾದ ರಾಜಕೀಯ ಪ್ರವೇಶದಿಂದ ಸಮಾಜಕ್ಕೆ ಒಳ್ಳೆಯ ಸಂದೇಶ ಹೋಗಲ್ಲ ಎಂದು ಪ್ರತಿಕ್ರಿಯಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.