ಯಾದಗಿರಿ: ಮಾಜಿ ಸಚೇತಕ, ಕೋಲಿ ಸಮಾಜದ ಮುಖಂಡ ವಿಠಲ್ ಹೇರೂರ ಅವರ ಆರನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಯಾದಗಿರಿಯಲ್ಲಿ ಆಚರಿಸಲಾಯಿತು.
ನಗರದ ಟೋಕ್ರಿ ಕೋಲಿ ಸಮಾಜದ ಜಿಲ್ಲಾ ಕಾರ್ಯಾಲಯದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ವಿಠಲ್ ಹೇರೂರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಕೋಲಿ ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಲಾಯಿತು.
ವಿಠಲ್ ಹೇರೂರ ಅವರ ಜೀವನ ಆಧಾರಿತ ಕಿರು ಚಲನಚಿತ್ರ ನಿರ್ಮಾಣಕ್ಕೆ ಸಮಾಜದ ಮುಖಂಡರಿಂದ ಚಿಂತನೆ ನಡೆಸಲಾಯಿತು. ವಿಠಲ್ ಹೇರೂರ ಅವರ ಹೋರಾಟಗಳ ಬಗ್ಗೆ ಮಾಹಿತಿ ಪಡೆದು, ಭಾವಚಿತ್ರಗಳ ವಿಡಿಯೋ ಸಂಗ್ರಹಿಸಿ ಕಿರು ಚಲನಚಿತ್ರ ನಿರ್ಮಾಣ ಮಾಡಲು ಅವರ ಸಮಕಾಲೀನ ಹಿರಿಯರ ಮಾರ್ಗದರ್ಶನ ಪಡೆಯಲಾಗುವುದು ಎಂದು ಟೋಕ್ರಿ ಕೋಲಿ ಸಮಾಜದ ಜಿಲ್ಲಾಧ್ಯಕ್ಷ ಉಮೇಶ ಮುದ್ನಾಳ ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಠಲ್ ಹೇರೂರ ಅಭಿಮಾನಿಗಳು ಸೇರಿದಂತೆ ಕೋಲಿ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.