ETV Bharat / state

ಗಿರಿನಾಡಿನಲ್ಲಿ ಬರದ ಛಾಯೆ... ರೈತರು ಕಂಗಾಲು,ಗುಳೆ ಹೋಗುವ ಸ್ಥಿತಿ ನಿರ್ಮಾಣ

ರಣ ಬಿಸಿಲಿಗೆ ಹೆದರಿ ಜನರು ಜಿಲ್ಲೆಯಿಂದ ಹೊರ ಹೋಗುತ್ತಿದ್ದಾರೆ. ಇದರ ಮಧ್ಯೆ ರೈತರ ಗೋಳು ಕೇಳುವವರಿಲ್ಲದಂತಾಗಿದ್ದು, ಸಾಲ ಮಾಡಿ ಕುಟುಂಬ ನಿಭಾಯಿಸುವಂತಹ ಪರಿಸ್ಥಿರಿ ನಿರ್ಮಾಣವಾಗಿದೆ.

ಗಿರಿನಾಡಿನಲ್ಲಿ ಬರದ ಛಾಯೆ
author img

By

Published : May 11, 2019, 2:06 AM IST

ಯಾದಗಿರಿ : ಭೀಕರ ಬರಗಾಲವನ್ನು ಎದುರಿಸುತ್ತಿರುವ ಗಿರಿನಾಡು ಯಾದಗಿರಿ ಜಿಲ್ಲೆ ಬರಗಾಲದ ಛಾಯೆಗೆ ತುತ್ತಾಗಿದೆ‌. ಜಿಲ್ಲೆಯಲ್ಲಿ ಕುಡಿಯಲು ನೀರಿಲ್ಲದೆ ಜನ ಜಾನುವಾರು ಪ್ರಾಣ ಸಂಕಟ ಅನುಭವಿಸುವಂತಾಗಿದೆ. ಇದರ ಮಧ್ಯೆ ಜನರು ಗುಳೆ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಜಿಲ್ಲೆಯಲ್ಲಿ ಈ ಭಾರಿ ಭೀಕರ ಬರಗಾಲ ತಾಂಡವವಾಡುತ್ತಿದೆ. ಎಲ್ಲಿ ನೋಡಿದ್ರೂ ಕೆರೆ, ಬಾವಿ, ನಾಲೆ, ಕಾಲುವೆ, ನದಿಗಳು ಬತ್ತಿ ಹೋಗಿದ್ದು, ಭೂಮಿ ಬಾಯಿ ತೆರೆದುಕೊಂಡು ಭೂಗರ್ಭದ ಉಷ್ಣತೆಯನ್ನ ಹೊರಚಾಚುತ್ತಿದೆ. ಜಿಲ್ಲೆಯಲ್ಲಿ ಸುಮಾರು 45 ಡಿಗ್ರಿ ಸೆಲ್ಸಿಯಸ್ ತಾಪಮಾನ ಆವರಿಸಿದ ಪರಿಣಾಮ ಜಾನುವಾರುಗಳು ಸಾವಿಗೀಡಾಗುತ್ತಿವೆ. ಕುಡಿಯುವ ನೀರಿಲ್ಲದೆ ಜನ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಗಿರಿನಾಡಿನಲ್ಲಿ ಬರದ ಛಾಯೆ

ಬಿಸಿಲಿನ ಬೆಗೆಗೆ ಜನರು ಅನಾರೋಗ್ಯಕ್ಕಿಡಾಗುತ್ತಿದ್ದು ಜಿಲ್ಲಾ ಆಸ್ಪತ್ರೆಗಳು ತುಂಬಿ ತುಳುಕುತ್ತಿವೆ. ರಣ ಬಿಸಿಲಿಗೆ ಹೆದರಿ ಜನರು ಜಿಲ್ಲೆಯಿಂದ ಹೊರ ನಡೆದಿದ್ದಾರೆ. ಇನ್ನೂ ರೈತರ ಗೋಳು ಕೇಳುವವರಿಲ್ಲದಂತಾಗಿದ್ದು, ಸಾಲ ಮಾಡಿ ಕುಟುಂಬ ನಿಭಾಯಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೈ ಹಿಡಿಯಬೇಕಿದ್ದ ಬೇಸಿಗೆ ಬೆಳೆ ಶೆಂಗಾ, ಸಜ್ಜಿ ನೀರಿಲ್ಲದೆ ಒಣಗಿ ಹೋಗಿವೆ. ಹಿಂಗಾರು ಬೆಳೆಗಳು ಸಾಕಷ್ಟು ಲಾಭ ನೀಡದಿರುವುದು ರೈತನನ್ನ ಆರ್ಥಿಕ ಸಂಕಷ್ಟಕ್ಕೆ ಗುರಿಮಾಡಿದೆ.

ಇನ್ನೂ ಮುಂಗಾರು ಬೆಳೆಗಳಾಗದ ತೊಗರಿ, ಜೋಳ, ಸಜ್ಜಿ ಬೆಳೆಗಳಿಗೆ ಸಕಾಲಕ್ಕೆ ಮಳೆಯಾದ್ರೆ ಮಾತ್ರ ರೈತ ಸ್ವಲ್ಪ ನೆಮ್ಮದಿಯಾಗಿ ನಿಟ್ಟುಸಿರು ಬಿಡಬಹುದು. ಜಿಲ್ಲೆಯಲ್ಲಿ ಕೃಷ್ಣ ನದಿ ಬತ್ತಿಹೋಗಿರುವುದರಿಂದ ಈ ಬಾರಿ ಭತ್ತ ಬೆಳೆಯುವ ರೈತರ ಜೀವನ ಆರ್ಥಿಕ ಸಂಕಷ್ಟದಿಂದ ಕೂಡಿದೆ.

ಜಿಲ್ಲೆಯಲ್ಲಿ ಸುಮಾರು ಕೆರೆಗಳು ಹೂಳು ತುಂಬಿಕೊಂಡಿವೆ. ಒಂದು ವೇಳೆ ಸರಕಾರ ಹೂಳು ತೆಗೆಯುವ ಕಾರ್ಯದಲ್ಲಿ ಶೀಘ್ರವಾಗಿ ಕಾರ್ಯಪ್ರವೃತ್ತರಾದ್ರೆ ಕೆರೆಗಳಿಗೆ ಜೀನೋದ್ಧಾರ ನೀಡಿದಂತಾಗುತ್ತದೆ.

Intro:ಸ್ಥಳ : ಯಾದಗಿರಿ
ಫಾರ್ಮೆಟ : ಎ ವಿ
ಸ್ಲಗ್ : ಬರದ ಚಾಯೆ. ! ರೈತ ಕಂಗಾಲು .

ನಿರೂಪಕ : ಭೀಕರ ಬರಗಾಲವನ್ನು ಎದುರಿಸುತ್ತಿರುವ ಗಿರಿನಾಡು ಯಾದಗಿರಿ ಜಿಲ್ಲೆಯು ಬರಗಾಲದ ಸಮಸ್ಯೆಗೆ ತುತ್ತಾಗಿದೆ‌. ಜಿಲ್ಲೆಯಲ್ಲಿ ಕುಡಿಯುವ ನೀರಿಲ್ಲದೆ ಜನ ಜಾನುವಾರಗಳು ಪ್ರಾಣ ಸಂಕಷ್ಟ ಅನುಭವಿಸುತ್ತಿವೆ. ಜನರು ಗುಳೆ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಯಾದಗಿರಿ ಜಿಲ್ಲೆಯು ಈ ಬಾರಿ ಭೀಕರ ಬರಗಾಲದ ದಾಳಿಗೆ ತುತ್ತಾಗಿದೆ. ಎಲ್ಲಿ ನೋಡಿದ್ರೂ ಕೆರೆ ,ಬಾವಿ ,ನಾಲೆ, ಕಾಲುವೆ, ನದಿಗಳು ಭತ್ತಿ ಹೋಗಿವೆ. . ಭೂಮಿ ಬಾಯಿ ತೆರೆದುಕೊಂಡು ಭೂಗರ್ಭದ ಉಷ್ಣತೆಯನ್ನು ಹೊರಚಾಚುತ್ತಿದೆ.

ಜಿಲ್ಲೆಯಲ್ಲಿ ಈ ಬಾರಿ ೪೫ ಡಿಗ್ರಿ ಸೆಲ್ಸಿಯಸ್ ತಾಪಮಾನ ಆವರಿಸಿದ ಪರಿಣಾಮ ಜಾನವಾರಗಳ ಪ್ರಾಣ ಹಾನಿಯಾಗಿವೆ.ಕುಡಿಯುವ ನೀರಿಲ್ಲದೆ ಜನ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಬಿಸಿಯಾದ ತಾಪಮಾನಕ್ಕೆ ಜನರು ಆರೋಗ್ಯ ಕಳೆದುಕೊಂಡಿದ್ದಾರೆ. ಈ ಬಾರಿ ಜಿಲ್ಲಾ ಆಸ್ಪತ್ರೆಗಳು ತುಂಬು ತುಳುಕಿತ್ತಿವೆ. ಹೊಸ ವಾತಾವಾರಣವನ್ನು ಪಡೆಯಲು ಜನರು ಜಿಲ್ಲೆಯಿಂದ ಹೊರ ನಡೆದಿದ್ದಾರೆ.

ರೈತನು ತನ್ನ ಗೋಳನ್ನು ಯಾರು ಹೇಳದಂತಹ ಪರಿಸ್ಥಿತಿಯಲ್ಲಿ ಮುಮ್ಮಲಿಸುತ್ತಿದ್ದಾನೆ. ಆರ್ಥಿಕ ಪರಿಸ್ಥಿತಿಯು ಕುಂಠಿತವಾಗಿದೆ.
ಸಾಲ ಸೂಲದಾರೂ ಮಾಡಿ ಕುಟಂಬವನ್ನು ನಿಭಾಯಿಸುತ್ತಿದ್ದಾನೆ.

ಈ ವರ್ಷ ರೈತನಿಗೆ ಕೈ ಹಿಡಿಯಬೇಕಾದ , ಬೇಸಿಗೆ ಬೆಳೆಗಳಾದ ಶೆಂಗಾ , ಸಜ್ಜಿ ಬೆಳೆ ನೀರಿಲ್ಲದೆ ಒಣಗಿ ಹೋಗಿವೆ. . ಹಿಂಗಾರು ಬೇಳೆಗಳು ಈ ಬಾರಿ ಸಾಕಷ್ಟು ಲಾಭವನ್ನು ನೀಡದೆಯಿರುವುದರಿಂದ ಆರ್ಥಿಕ ಸಂಕಷ್ಟ ರೈತ ಅನುಭವಿಸುವಂತಾಯಿತ್ತು.

ಮುಂಗಾರು ಬೇಳೆಗಳಾಗದ ತೊಗರಿ, ಜೋಳ, ಸಜ್ಜಿ ಬೇಳಗಳಿಗೆ ಸಕಾಲಕ್ಕೆ ಮಳೆಯಾದ್ರೆ ಸ್ವಲ್ಪ ನೆಮ್ಮದಿಯಾಗಿ ರೈತ ಬದುಕುವನು .

ನಮ್ಮ ಜಿಲ್ಲೆಯಲ್ಲಿ ಕೃಷ್ಣ ನದಿಯಿಂದ ಈ ಬಾರಿ ಭತ್ತಕ್ಕೆ ನೀರು ಬೀಡದೆರುವುದರಿಂದ ಪ್ರತಿಯೊಬ್ಬ ದೊಡ್ಡ ರೈತ ,ಸಣ್ಣ ರೈತ ಆರ್ಥಕ ಸಂಕಷ್ಟಕ್ಕೆ ಕುಸಿದಿದೆ.

Body:ಯಾದಗಿರಿ ಜಿಲ್ಲೆಯಲ್ಲಿ ಸುಮಾರು ಕೆರೆಗಳು ಹೂಳು ತುಂಬಿಕೊಂಡಿವೆ. ಒಂದು ವೇಳೆ ಸರಕಾರ ಹೂಳು ತೆಗೆಯುವ ಕಾರ್ಯದಲ್ಲಿ ಶೀಘ್ರವಾಗಿ ಕಾರ್ಯಪ್ರವೃತ್ತರಾದ್ರೆ ಕೆರೆಗಳಿಗೆ ಜೀನೋದ್ಧಾರ ನೀಡದಂತಾಗುತ್ತದೆ.

Conclusion:ಈ ಬಾರಿ ಜಿಲ್ಲಾಡಳಿತ ಕುಡಿಯುವ ನೀರಿನ ಸಮಸ್ಯೆವನ್ನು ಸರಿದೊಗಿಸಲು ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಗ್ರಾಮಗಳಿಗೆ ಕುಡಿಯುವ ನೀರಿನ ಸರಬರಾಜು ಮಾಡಲಾಗುತ್ತಿದೆ. ಜಿಲ್ಲೆಯ 19ಗ್ರಾಮಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಜಿಲ್ಲಾಡಳಿತ ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.