ಯಾದಗಿರಿ: ಜಿಲ್ಲೆಯ ವಡಗೇರಾ ತಾಲೂಕಿನ ನಾಯ್ಕಲ್ ಗ್ರಾಮದ ಬಳಿ ಶವಸಂಸ್ಕಾರ ಮುಗಿಸಿಕೊಂಡು ಜಲಾವೃತಗೊಂಡ ಸೇತುವೆ ದಾಟಲಾರದೆ ಪರದಾಡುತ್ತಿದ್ದ ಜನರನ್ನು ಸ್ಥಳದಲ್ಲಿದ್ದ ಸೇನಾ ಪಡೆ ಸುರಕ್ಷಿತವಾಗಿ ದಡಕ್ಕೆ ತಲುಪಿಸಿದೆ.
ಭೀಮಾ ನದಿ ಪ್ರವಾಹದಿಂದಾಗಿ ಇಬ್ರಾಹಿಂಪುರ-ನಾಯ್ಕಲ್ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಸಂಪೂರ್ಣ ಜಲಾವೃತಗೊಂಡಿತ್ತು. ಹೀಗಾಗಿ, ನಾಯ್ಕಲ್ ಗ್ರಾಮಸ್ಥರು ಶವಸಂಸ್ಕಾರಕ್ಕಾಗಿ ಇಬ್ರಾಹಿಂಪುರಕ್ಕೆ ತೆರಳಿದ್ದರು. ಅಂತ್ಯಕ್ರಿಯೆ ಮುಗಿಸಿ ವಾಪಸ್ ತಮ್ಮ ಗ್ರಾಮಕ್ಕೆ ತೆರಳುತ್ತಿದ್ದಾಗ ಸೇತುವೆ ದಾಟಲಾಗದೆ ಪರದಾಡುತ್ತಿದ್ದರು. ಇದೇ ವೇಳೆ ಸ್ಥಳದಲ್ಲಿದ್ದ ಸೇನಾ ಪಡೆ ಗ್ರಾಮಸ್ಥರನ್ನ ಸುರಕ್ಷಿತವಾಗಿ ಸೇತುವೆ ದಾಟಿಸಿದ್ದಾರೆ.
ಭೀಮಾ ನದಿ ಪ್ರವಾಹ ಮುಂಜಾಗ್ರತಾ ಕ್ರಮವಾಗಿ ನಿಯೋಜಿಸಲಾದ ಸೇನಾ ಪಡೆಯ ಕಾರ್ಯಕ್ಕೆ ಎಲ್ಲೆಡೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.