ETV Bharat / state

ಅಂಬಿಗರ ಚೌಡಯ್ಯ ನಾಮಫಲಕ ತೆರವುಗೊಳಿಸುವಂತೆ ಆಗ್ರಹ, ದಸಂಸ ವತಿಯಿಂದ ಪ್ರತಿಭಟನೆ - Dalit Conflict Committee

ಅರಕೇರಾ (ಕೆ) ಗ್ರಾಮದ ಯಾದಗಿರಿ-ಹೈದ್ರಾಬಾದ್ ಮುಖ್ಯ ರಸ್ತೆಯ ವೃತ್ತದಲ್ಲಿ ಸುಮಾರು 10 ವರ್ಷದ ಹಿಂದೆ ಅಂಬೇಡ್ಕರ್ ನಾಮಫಲಕ ಅಳವಡಿಸಲಾಗಿದ್ದು, ಕೆಲ ಜನ ರಾತ್ರೊ ರಾತ್ರಿ ಅಂಬೇಡ್ಕರ್ ನಾಮಫಲಕದ ಪಕ್ಕದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ನಾಮಫಲಕ ಹಾಕುವ ಮೂಲಕ ಶಾಂತಿ ಭಂಗವನ್ನುಂಟು ಮಾಡುವಂತಾ ಕೆಲಸ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಂಬಿಗರ ಚೌಡಯ್ಯ ನಾಮಫಲಕ ತೆರವುಗೊಳಿಸುವಂತೆ ಆಗ್ರಹ, ದಸಂಸ ವತಿಯಿಂದ ಪ್ರತಿಭಟನೆ

author img

By

Published : Aug 6, 2020, 9:00 PM IST

Updated : Aug 6, 2020, 9:38 PM IST

ಯಾದಗಿರಿ: ಶಾಂತಿ ಭಂಗವನ್ನುಂಟು ಮಾಡಲು ರಾತ್ರೊ ರಾತ್ರಿ ಅಂಬೇಡ್ಕರ್ ನಾಮಫಲಕದ ಪಕ್ಕದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ನಾಮಫಲಕ ಹಾಕಲಾಗಿದೆ. ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಅಂಬಿಗರ ಚೌಡಯ್ಯ ನಾಮಫಲಕವನ್ನ ತೆರವುಗೊಳಿಸುವಂತೆ ಆಗ್ರಹಿಸಿ ಯಾದಗಿರಿಯಲ್ಲಿಂದು ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಅಂಬಿಗರ ಚೌಡಯ್ಯ ನಾಮಫಲಕ ತೆರವುಗೊಳಿಸುವಂತೆ ಆಗ್ರಹ, ದಸಂಸ ವತಿಯಿಂದ ಪ್ರತಿಭಟನೆ

ತಾಲ್ಲೂಕಿನ ಅರಕೇರಾ (ಕೆ) ಗ್ರಾಮದ ಯಾದಗಿರಿ-ಹೈದ್ರಾಬಾದ್ ಮುಖ್ಯ ರಸ್ತೆಯ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, ಅರ್ಧ ಗಂಟೆಗೂ ಅಧಿಕ ಕಾಲ ಮುಖ್ಯ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಈ ವೃತ್ತದಲ್ಲಿ ಸುಮಾರು 10 ವರ್ಷದ ಹಿಂದೆ ಅಂಬೇಡ್ಕರ್ ನಾಮಫಲಕ ಅಳವಡಿಸಲಾಗಿದ್ದು, ಕೆಲ ಜನ ರಾತ್ರೊ ರಾತ್ರಿ ಅಂಬೇಡ್ಕರ್ ನಾಮಫಲಕದ ಪಕ್ಕದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ನಾಮಫಲಕ ಹಾಕುವ ಮೂಲಕ ಶಾಂತಿ ಭಂಗವನ್ನುಂಟು ಮಾಡುವಂತಾ ಕೆಲಸ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ಅಂಬಿಗರ ಚೌಡಯ್ಯ ನಾಮಫಲಕ ತೆರವುಗೊಳಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು. ಅರ್ಧ ಗಂಟೆಗೂ ಅಧಿಕ ಕಾಲ ಯಾದಗಿರಿ ಹೈದ್ರಾಬಾದ್ ಮುಖ್ಯ ರಸ್ತೆ ಬಂದ್ ಮಾಡುವ ಮೂಲಕ ದಲಿತ ಸಂಘರ್ಷ ಸಮಿತಿ ಪ್ರತಿಭಟನೆಯಿಂದ ವಾಹನ ಸವಾರರು ಪರದಾಡುವಂತಾಯಿತು.

ಪ್ರತಿಭಟನಾ ಸ್ಥಳಕ್ಕೆ ತೆರಳಿದ ಯಾದಗಿರಿ ತಹಶೀಲ್ದಾರ್ ಚನ್ನಬಸಪ್ಪ ಘಂಟಿ ಒಂದು ವಾರದಲ್ಲಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದ ಹಿನ್ನೆಲೆ ದಲಿತ ಸಂಘರ್ಷ ಸಮಿತ ತನ್ನ ಪ್ರತಿಭಟನೆ ಕೈಬಿಡಲಾಯಿತು.

Last Updated : Aug 6, 2020, 9:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.