ಗುರುಮಠಕಲ್(ಯಾದಗಿರಿ): ಪಟ್ಟಣದಲ್ಲಿ ಸೋಮವಾರದ ಸಂತೆಗೆಂದು ಖಾಸಗಿ ವಾಹನಗಳಲ್ಲಿ ಗುಂಪು ಗುಂಪಾಗಿ ಮತ್ತು ಮಾಸ್ಕ್ ಧರಿಸದೇ ಬಂದವರಿಗೆ ಪುರಸಭೆ ವತಿಯಿಂದ ದಂಡ ಹಾಕಲಾಯಿತು.
ಪಟ್ಟಣದಲ್ಲಿ ಪ್ರತಿ ಸೋಮವಾರ ಸಂತೆ ಜರುಗುತ್ತದೆ. ರಾಜ್ಯ ಸರ್ಕಾರ ಲಾಕ್‌ಡೌನ್ ಸಡಿಲಿಕೆ ಮಾಡಿದ ಹಿನ್ನೆಲೆಯಲ್ಲಿ ಜನರು ಸಂತೆ ಮಾಡಲು ಸುತ್ತಮುತ್ತಲಿನ ಗ್ರಾಮಗಳಿಂದ ಖಾಸಗಿ ವಾಹನಗಳಲ್ಲಿ ಗುಂಪು ಗುಂಪಾಗಿ ಆಗಮಿಸಿದ್ದರು.
ಪಟ್ಟಣಕ್ಕೆ ಪ್ರವೇಶಿಸುತ್ತಿದ್ದಂತೆ ಇಲ್ಲಿನ ಪುರಸಭೆಯ ಸಿಬ್ಬಂದಿ ಸಾರ್ವಜನಿಕರಿಗೆ ಕೋವಿಡ್-19 ಸುರಕ್ಷತೆಗಾಗಿ ಮಾಸ್ಕ್ ಧರಿಸುವಂತೆ ಜಾಗೃತಿ ಮೂಡಿಸುತ್ತಿದ್ದರು. ಆದ್ರೂ ಮಾಸ್ಕ್ ಧರಿಸದೇ ಆಗಮಿಸಿದವರಿಗೆ 100 ರೂಪಾಯಿ ದಂಡ ವಿಧಿಸಿದರು.
ಒಂದೇ ದಿನ ಸುಮಾರು 22 ಸಾವಿರ ರೂಪಾಯಿ ದಂಡ ಸಂಗ್ರಹಿಸಿಲಾಗಿದೆ ಎಂದು ಪುರಸಭೆ ನೈರ್ಮಲ್ಯ ನಿರೀಕ್ಷಕರಾದ ಪ್ರಶಾಂತ್ ಸೂರ್ಯವಂಶಿ, ರಾಮುಲು ಗೌಡ ತಿಳಿಸಿದ್ದಾರೆ.
ಒಂದುಕಡೆ ಪುರಸಭೆಯಿಂದ ದಂಡ ವಸೂಲಿ ಮಾಡಿದ್ರೆ, ಇನ್ನೊಂದೆಡೆ ಪೊಲೀಸ್ ಇಲಾಖೆಯ ಪಿಎಸ್‌ಐ ಶೀಲಾದೇವಿ ನ್ಯಾಮನ್ ಕೂಡ ದ್ವಿಚಕ್ರ ವಾಹನ ಸವಾರರಿಗೆ ಮತ್ತು ನಾಲ್ಕು ಚಕ್ರದ ವಾಹನಗಳಿಗೆ ದಂಡ ಹಾಕಿದ್ರು.