ETV Bharat / state

ವಾಟ್ಸ್​​ಆ್ಯಪ್​ನಲ್ಲಿ ಸುಳ್ಳು ಮಾಹಿತಿ ಭಿತ್ತರಿಸಿದ ಆರೋಪ: ಸರ್ಕಾರಿ ನೌಕರ ಅಮಾನತು - corona lock down

ಸರ್ಕಾರಿ ನೌಕರರಾಗಿದ್ದರೂ ಸಮಾಜದಲ್ಲಿ ತಪ್ಪು-ಸುಳ್ಳು ಮಾಹಿತಿ ಭಿತ್ತರಿಸಿದ್ದರಿಂದ ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿಯೊಬ್ಬನನ್ನು ಸೇವೆಯಿಂದ ವಜಾಮಾಡಲಾಗಿದೆ.

wrong news spread
wrongwrong news spread news spread
author img

By

Published : Apr 20, 2020, 9:02 AM IST

ವಿಜಯಪುರ: ಸಮುದಾಯವೊಂದರ ವಿರುದ್ಧ ಸಾರ್ವಜನಿಕ ವಲಯದಲ್ಲಿ ವಾಟ್ಸ್​ಆ್ಯಪ್​​ ಮೂಲಕ ಸುಳ್ಳು ಮಾಹಿತಿಯನ್ನು ಹಂಚಿಕೊಂಡಿದ್ದರಿಂದ ಸರ್ಕಾರಿ ನೌಕರರೊಬ್ಬರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ಕೊವಿಡ್-19 ವಿಷಮ ಪರಿಸ್ಥಿತಿಯಲ್ಲಿ ಸಾರ್ವಜನಿಕರಲ್ಲಿ ತಪ್ಪು ಮಾಹಿತಿ ವಿನಿಮಯ ಮಾಡಿಕೊಳ್ಳದಂತೆ ಈಗಾಗಲೇ ಜಿಲ್ಲಾ ಆಡಳಿತ ವತಿಯಿಂದ ಹಲವು ಬಾರಿ ಎಚ್ಚರಿಕೆ ನೀಡಲಾಗಿದೆ. ಇಷ್ಟಾಗಿಯೂ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿಯೊಬ್ಬರು ಸಮಾಜವೊಂದರ ಬಗ್ಗೆ ವ್ಯಾಟ್ಸ್​​ಆ್ಯಪ್​ ಮೂಲಕ ಸಾರ್ವಜನಿಕರಲ್ಲಿ ತಪ್ಪು ತಿಳಿವಳಿಕೆ ಮೂಡುವ ಮಾಹಿತಿ ಭಿತ್ತರಿಸಿದ ಹಿನ್ನೆಲೆಯಲ್ಲಿ ಅವರನ್ನು ಸೇವೆಯಿಂದ ಅಮಾನತು ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದೆ.

ಸರ್ಕಾರಿ ನೌಕರರಾಗಿದ್ದರೂ ಸಮಾಜದಲ್ಲಿ ತಪ್ಪು-ಸುಳ್ಳು ಮಾಹಿತಿ ಭಿತ್ತರಿಸಿದ್ದರಿಂದ ಅವರನ್ನು ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆ ಹಾಗೂ ಕರ್ನಾಟಕ ನಾಗರಿಕ ಸೇವಾ ನಿಯಮ, ಕಾಯ್ದೆಯಡಿ ವಿಚಾರಣೆ ಕಾಯ್ದಿರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತ್ತುಗೊಳಿಸಿ ಜಿಲ್ಲಾಧಿಕಾರಿ ವೈ ಎಸ್ ಪಾಟೀಲ ಆದೇಶ ಹೊರಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.