ಮುದ್ದೇಬಿಹಾಳ/ವಿಜಯಪುರ: ನಾಳೆ ವಿಶ್ವ ಪರಿಸರ ದಿನವಾದ ಹಿನ್ನೆಲೆಯಲ್ಲಿ ರೈತರಿಗೆ, ಗ್ರಾಮಸ್ಥರಿಗೆ 400 ಸಸಿಗಳನ್ನು ತಾಲೂಕಿನ ಸರೂರದಲ್ಲಿ ಆದಿಶಕ್ತಿ ಶೈಕ್ಷಣಿಕ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ನೇತೃತ್ವದಲ್ಲಿ ಉಚಿತವಾಗಿ ವಿತರಿಸಲಾಯಿತು.
ಗ್ರಾಮದ ಬಸ್ ನಿಲ್ದಾಣದ ಆವರಣದಲ್ಲಿ ಸಂಸ್ಥೆಯ ಅಧ್ಯಕ್ಷ ಬಸನಗೌಡ ಪಾಟೀಲ್ ಸಸಿಗಳನ್ನು ಖರೀದಿಸಿ ಗ್ರಾಮಸ್ಥರಿಗೆ, ರೈತರಿಗೆ ವಿತರಿಸಿದರು.
ಈ ವೇಳೆ ಡಾ.ಎಂ.ಎಂ.ಹಿರೇಮಠ, ತಾ.ಪಂ.ಸಹಾಯಕ ನಿರ್ದೇಶಕ ಪ್ರಕಾಶ ದೇಸಾಯಿ, ಕವಡಿಮಟ್ಟಿ ಪಿಡಿಒ ಪಿ.ಎಸ್. ಕಸನಕ್ಕಿ, ಕೈಗಾರಿಕಾ ವಿಸ್ತೀರ್ಣಾಧಿಕಾರಿ ಸಂತೋಷ ಸಜ್ಜನ, ಶಿಕ್ಷಕ ಎನ್.ಬಿ.ಸಜ್ಜನ, ಸಿದ್ಧನಗೌಡ ಬಿಜ್ಜೂರ, ಗ್ರಾ.ಪಂ. ಸದಸ್ಯ ಶ್ರೀಶೈಲ ಹೂಗಾರ, ಶರಣು ಪಡದಾಳಿ, ಮಾಜಿ ಸೈನಿಕ ಬಿ.ಆರ್.ಹುಲ್ಲೂರ, ವಿನಾಯಕ ಕಂಚ್ಯಾಣಿ ಮೊದಲಾದವರು ಉಪಸ್ಥಿತರಿದ್ದರು.