ವಿಜಯಪುರ: ಉತ್ತರ ಕರ್ನಾಟಕ ಭಾಗದಲ್ಲಿ ವೀರಭದ್ರೇಶ್ವರ ಜಾತ್ರೆ ಎಂದರೆ ಕೆಂಡದ ಜಾತ್ರೆ ಅಂತಲೇ ಕರೆಯುತ್ತಾರೆ. ಸಂತಾನ ಭಾಗ್ಯ, ಉದ್ಯೋಗ ಸೇರಿ ತಮ್ಮ ಹಲವು ಬೇಡಿಕೆಗಳ ಹರಕೆ ಕಟ್ಟಿಕೊಂಡು ಕೆಂಡ ಹಾಯುತ್ತಾರೆ. ಈ ಜಾತ್ರೆಯಲ್ಲಿ ಕೆಂಡ ಹಾಯಲು ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕರ್ನಾಟಕದ ವಿವಿ ಕಡೆಯಿಂದ ಭಕ್ತರು ಆಗಮಿಸುವುದು ವಿಶೇಷವಾಗಿದೆ.
ಯುಗಾದಿ ಹಬ್ಬದ ನಂತರ ಮೂರು ದಿನಗಳ ಕಾಲ ಈ ಜಾತ್ರೆ ನಡೆಯುತ್ತದೆ. ಕೊನೆ ದಿನ ಕೆಂಡ ಹಾಯುವ ದಿನವಾಗಿರುತ್ತದೆ. ಅಂದು ಅಸಂಖ್ಯಾ ಭಕ್ತರು ಕೆಂಡ ಹಾಯ್ದು ಭಕ್ತಿ ಪ್ರದರ್ಶಿಸುತ್ತಾರೆ.
ಮೂರು ವರ್ಷ ಕೆಂಡ ಹಾಯಬೇಕು: ದೇವರಿಗೆ ತಮ್ಮ ಬೇಡಿಕೆಯ ಹರಕೆ ಕಟ್ಟಿಕೊಂಡರೆ ಇಷ್ಟಾರ್ಥ ಸಿದ್ಧಿಸಿದ ಸತತ ಮೂರು ವರ್ಷ ಕೆಂಡ ಹಾಯಬೇಕು. ಇದು ಹಲವಾರು ವರ್ಷಗಳಿಂದ ನಡೆದುಕೊಂಡು ಬಂದ ವಾಡಿಕೆ. ಜಾತ್ರೆಯಲ್ಲಿ ಕೆಂಡ ಹಾಯಲು ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗುತ್ತದೆ. ಯಾವುದೇ ನೂಕುನುಗ್ಗಲು, ಗೊಂದಲಗಳು ಆಗದಂತೆ ತಯಾರಿ ನಡೆಸಲಾಗುತ್ತದೆ.
ಇದನ್ನೂ ಓದಿ: ಪ್ರೇತಾತ್ಮಗಳು ಮೈಮೇಲೆ ಬರ್ತವೆ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ ಯುವಕ!