ETV Bharat / state

ವಿಜಯಪುರ ಡಿಸಿ ಸಂಧಾನ ಯಶಸ್ವಿ: ಬಂದ್​ ಕರೆ ಹಿಂಪಡೆದ ಬೀದಿಬದಿ ವ್ಯಾಪಾರಿಗಳು

ಬಂದ್​ ನಡೆಸಲು ಮುಂದಾಗಿದ್ದ ನಗರದ ಲಾಲ್ ಬಹಾದ್ದೂರ್ ಶಾಸ್ತ್ರಿ ಮಾರುಕಟ್ಟೆ, ನೆಹರು ಮಾರುಕಟ್ಟೆ ವ್ಯಾಪಾಸ್ಥರ ಮನವೊಲಿಸುವಲ್ಲಿ ಜಿಲ್ಲಾಧಿಕಾರಿ ವೈ.ಎಸ್​. ಪಾಟೀಲ್​ ಯಶಸ್ವಿಯಾಗಿದ್ದಾರೆ.

DC made a meeting with street side merchants
author img

By

Published : Nov 25, 2019, 8:30 PM IST

ವಿಜಯಪುರ: ಅಭಿವೃದ್ಧಿ ಕಾಮಗಾರಿಗಳನ್ನು ನಡೆಸುವ ಉದ್ದೇಶದಿಂದ ನಗರದ ಲಾಲ್ ಬಹಾದ್ದೂರ್ ಶಾಸ್ತ್ರಿ ಮಾರುಕಟ್ಟೆ, ನೆಹರೂ ಮಾರುಕಟ್ಟೆಯ ರಸ್ತೆಗಳನ್ನು ತೆರವುಗೊಳಿಸಲಾಗಿತ್ತು. ಇದನ್ನು ಖಂಡಿಸಿ ರಸ್ತೆ ಬದಿಯ ವ್ಯಾಪಾರಿಗಳು ನಾಳೆ ಸ್ವಯಂ ಘೋಷಿತ ಬಂದ್​ಗೆ ಕರೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಜಿಲ್ಲಾಧಿಕಾರಿಗಳು ಸಭೆ ನಡೆಸಿ ವ್ಯಾಪಾರಿಗಳ ಮನವೊಲಿಸಿದರು.

ಬೀದಿ ವ್ಯಾಪಾರಿಗಳ ಜೊತೆ ಸಭೆ ನಡೆಸಿದ ಜಿಲ್ಲಾಧಿಕಾರಿಗಳು

ಅಭಿವೃದ್ಧಿ ಕಾಮಗಾರಿಗಳನ್ನು ನಡೆಸುವ ಉದ್ದೇಶದಿಂದ ನಗರದ ಹೃದಯ ಭಾಗವಾದ ಗಾಂಧಿವೃತ್ತದ ಲಾಲ್ ಬಹದ್ದೂರ್ ಶಾಸ್ತ್ರಿ ಮಾರುಕಟ್ಟೆ ಹಾಗೂ ನೆಹರೂ ಮಾರುಕಟ್ಟೆಯ ರಸ್ತೆ ಬದಿಯಿದ್ದ ಅಂಗಡಿ ಮುಂಗ್ಗಟ್ಟುಗಳನ್ನು ತೆರವುಗೊಳಿಸಲಾಗಿತ್ತು. ನ.21ರಂದು ಮಹಾನಗರ ಪಾಲಿಕೆ ಆಯುಕ್ತ ಹರ್ಷಾ ಶೆಟ್ಟಿ ಹಾಗೂ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಪ್ರಕಾಶ್​ ನಿಕ್ಕಂ ನೇತೃತ್ವದಲ್ಲಿ ಈ ಕಾರ್ಯವನ್ನು ಕೈಗೊಳ್ಳಲಾಗಿತ್ತು. ಇದನ್ನು ಖಂಡಿಸಿ ರಸ್ತೆ ಬೀದಿಯ ವ್ಯಾಪಾರಿಗಳು ಖಾಗ ಬಿಟ್ಟು ಕೊಡುವುದಿಲ್ಲ ಎಂದು ಪಟ್ಟು ಹಿಡಿದು ಅಂಗಡಿ ಮುಂಗಟ್ಟು ಬಂದ್​ ಮಾಡಿ ಮಾರುಕಟ್ಟೆಯಲ್ಲಿ ಧರಣಿ ಮಾಡುತ್ತಿದ್ದರು.

ಈ ಸಂಬಂಧ ನಾಳೆ ವ್ಯಾಪಾರಸ್ಥರು ವಿಜಯಪುರ ನಗರದ ಸ್ವಯಂ ಪ್ರೇರಿತ ಬಂದ್​ಗೆ ಕರೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಜಿಲ್ಲಾಧಿಕಾರಿ ವೈ .ಎಸ್. ಪಾಟೀಲ್​ ಹಾಗೂ ಪೊಲೀಸ್​ ಇಲಾಖೆ‌ ನೇತೃತ್ವದಲ್ಲಿ ಬೀದಿ ವ್ಯಾಪಾರಿಗಳ ಮುಖಂಡರ ಜೊತೆಗೆ ಸಭೆ ನಡೆಸಿ ಪರ್ಯಾಯ ಜಾಗ ನೀಡುವುದಾಗಿ ಹೇಳಿ ವ್ಯಾಪಾರಿಗಳ ಮನವೊಲಿಸಿದ್ದು, ಬಂದ್​ ಹಿಂಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಇಂದು ಜಿಲ್ಲಾಧಿಕಾರಿಗಳು ಸಭೆ ಕರೆದು ಮಾತನಾಡಿ ಸುಮಾರು ಅಂಗಡಿಗಳನ್ನು ತೆರವು ಮಾಡಲಾಗಿದೆ. ಅವರ ಪೈಕಿ 100 ವ್ಯಾಪಾರಸ್ಥರಿಗೆ ಶಾಸ್ತ್ರೀ ಮಾರುಕಟ್ಟೆ ಪಕ್ಕದಲ್ಲಿ ಪರ್ಯಾಯ ವ್ಯಾಪಾರ ಮಾಡಲು ಖಾಗ ಗುರುತಿಸಿದ್ದಾರೆ. ಅಲ್ಲಿ ವ್ಯಾಪಾರ ಮಾಡಲು ಹೊಂದಾಣಿಕೆಯಾಗದಿದ್ದರೆ ಬೇರೆ ಜಾಗ ಕೊಡುವುದಾಗಿ ಜಿಲ್ಲಾಧಿಕಾರಿಗಳು ಹೇಳಿದ್ದಾರೆ. ಸದ್ಯಕ್ಕೆ ನಾಳೆ ನಡೆಯುವ ಸ್ವಯಂ ಪ್ರೇರಿತ ಬಂದ್​ ಕರೆ‌‌ಯನ್ನು ಹಿಂಪಡೆಯಲಾಗಿದೆ. ಆದರೆ ಮಾರುಕಟ್ಟೆಯಲ್ಲಿ ಪರ್ಯಾಯ ಜಾಗ ಸಿಗುವವರೆಗೆ ಧರಣಿ ಮಾತ್ರ ಮುಂದುವರೆಲಿದೆ ಎಂದು ಮಾಜಿ‌ ಕಾರ್ಪೋರೆಟರ್ ಮೈನುದ್ದೀನ್ ಬಿಳಗಿ ಈಟಿವಿ ಭಾರತ್​​ಗೆ ಮಾಹಿತಿ ನೀಡಿದರು.

Intro:ವಿಜಯಪುರ: ಅಭಿವೃದ್ಧಿ ಕಾಮಗಾರಿಗಳನ್ನು ಮಾಡುವ ಉದ್ದೇಶದಿಂದ ನಗರದ ಹೃದಯ ಭಾಗವಾದ ಗಾಂಧಿ ವೃತ್ತದ ಲಾಲ್ ಬಹಾದ್ದೂರ್ ಶಾಸ್ತ್ರಿ ಮಾರುಕಟ್ಟೆ ಹಾಗೂ ನೆಹರೂ ಮಾರುಕಟ್ಟೆಯ ರಸ್ತೆಗಳ ಮೇಲೆ ಹಣ್ಣು ಹಾಗೂ ತರಕಾರಿ ವ್ಯಾಪಾರ ಮಾಡುತ್ತಿದ್ದ ಬೀದಿ ವ್ಯಾಪಾರಿಗಳನ್ನು ಅಂಗಡಿ ಮುಂಗಟ್ಟುಗಳನ್ನು ನವೆಂಬರ್ 21 ರಂದು ಮಹಾನಗರ ಪಾಲಿಕೆ ಆಯುಕ್ತ ಹರ್ಷಾ ಶಟ್ಟಿ ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ ನೇತೃತ್ವದಲ್ಲಿ ಬೀದಿ ವ್ಯಾಪಾರಿಗಳ ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸಲಾಗಿತು. ತೆರವಿಗೆ ಬೀದಿ ವ್ಯಾಪಾರಸ್ಥರಿದಂದ ವಿರೋಧ ವ್ಯಕ್ತವಡಿಸಿ ಬೀದಿ ವ್ಯಾಪಾರಿಗಳು ಖಾಗ ಬಿಟ್ಟು ಕೊಡುವುದಿಲ್ಲ ಎಂದು ಪಟ್ಟು ಹಿಡಿದು ಅಂಗಡಿ ಮುಂಗಟ್ಟು ಬಂದ ಮಾಡಿ ಮಾರುಕಟ್ಟೆಯಲ್ಲಿ ಧರಣಿ ಮಾಡುತ್ತಿದ್ದರು.

Body:
ನಾಳೆ 26 ರಂದು ಬೀದಿ ವ್ಯಾಪಾರಸ್ಥರು ವಿಜಯಪುರ ನಗರದಕ್ಕೆ ಸ್ವಯಂ ಪ್ರೇರಿತ ಬಂದಗೆ ಕರೆ ನೀಡಿದ ಬೆನ್ನಲೆ ಇಂದು ಜಿ್ಳಾಲ್ಲಾಧಿಕಾರಿ ವೈ ಎಸ್ ಪಾಟೀಲ ಹಾಗೂ ಪೋಲಿಸ್ ಇಲಾಖೆ‌ ನೇತೃತ್ವದಲ್ಲಿ ಬೀದಿ ವ್ಯಾಪಾರಿಗಳ ಮುಖಂಡರ ಜೊತೆಗೆ ಜಿ್ಳಾಲ್ಲಾಧಿಕಾರಿ ಸಭೆ ನಡೆಸಿ ಪರ್ಯಾಯ ಜಾಗ ನೀಡುವುದಾಗಿ ಹೇಳಿ ವ್ಯಾಪಾರಿಗಳ ಮನವೊಲಿಸಿದರು. ಸ್ವತಃ ಹೆಚ್ಚುವರಿ ಜಿ್ಳಾಲ್ಲಾಧಿಕಾರಿ ಎಚ್ ಪ್ರಸನ್ ಹಾಗೂ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ‌ ಬಿ ಎಸ್ ನ್ಯಾಮಗೌಡ ಧರಣಿಗೆ ಕುಳಿತ ಬೀದಿ ವ್ಯಾಪಾರಿಗಳ ಮನವರಿಕೆ ಮಾಡಿ ಬಂದ ಹಿಂಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕೆಲ ಕಾಲ ಬೀದಿ ವ್ಯಾಪಾರಿಗಳ ನಡುವೆ ಮಿಶ್ರ ಪ್ರತಿಕ್ರಿಯೆ ಕೇಳಿ ಬಂದ‌ ಹಿನ್ನಲೆಯಲ್ಲಿ ಹಣ್ಣು ತರಕಾರಿ ವ್ಯಾಪಾರಿಗಳ ಸಂಘದ ಮುಖಂಡರು ಸಭೆ ನಡೆಸಿ 230 ಬೀದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯಾಪಾರ ಮಾಡಲು ಜಾಗ ಕಲ್ಪಸಲಾಗುವುದು ಆಶ್ವಾಸನೆ ನೀಡಿದ್ದಾರೆ ಎಂದು ಧರಣಿ ನಿರತ ವ್ಯಾಪಾರಿಗಳಿಗೆ ತಿಳಿ ಹೇಳಿದರು..

Conclusion:ಇನ್ನೂ‌ ಈ ಟಿವಿ ಭಾರತ ಮಾಹಿತಿ ನೀಡಿದ ಮಾಜಿ‌ ಕಾರ್ಪೋರೆಟರ್ ಮೈನುದ್ದೀನ್ ಬಿಳಗಿ ಇಂದು ಜಿಲ್ಲಾಧಿಕಾರಿಗಳು ಸಭೆ ಕರೆದು 230 ಬೀದಿ ವ್ಯಾಪಾರಿಗಳನ್ನು ತೆರವು ಮಾಡಲಾಗಿತು. ಅವರ ಪೈಕಿ ತಕ್ಷಣವೇ ಜಿಲ್ಲಾಡಳಿತ 100 ಶಾಸ್ತ್ರೀ ಮಾರುಕಟ್ಟೆ ಪಕ್ಕದಲ್ಲಿ ಪರ್ಯಾಯ ವ್ಯಾಪಾರ ಮಾಡಲು ಖಾಗ ಗುರುತಿಸಿದ್ದಾರೆ ಇನ್ನೂ ಕೆಲವರಿಗೆ ಅಲ್ಲಿ ವ್ಯಾಪಾರದ ಮಾಡಲು ಹೊಂದಾಣಿಕೆಯಾಗದಿದ್ದರೆ ಬೇರೆ ಜಾಗ ನೀಡುತ್ತವೆ ಎಂದು ಜಿ್ಳಾಲ್ಲಾಧಿಕಾರಿಗಳು‌ ಹೇಳಿದ್ದಾರೆ. ಸದ್ಯಕ್ಕೆ ನಾಳೆ ನಡೆಯುವ ಸ್ವಯಂ ಪ್ರೇರಿತ ಬಂದ ಕರೆ‌‌ ನೀಡಿರುವುದು ಮುಂದುಡಲಾಗಿದೆ. ಧರಣಿ ಮಾತ್ರ ಮಾರುಕಟ್ಟೆಯಲ್ಲಿ ಪರ್ಯಾಯ ಜಾಗ ಸಿಗುವರಿಗೆ ಮುಂದುವರೆಲಿದೆ ಎಂದು ಮಾಹಿತಿ ನೀಡಿದ್ದರು..

ಬೈಟ್ : ಮೈನುದ್ದೀನ್ ( ಮಾಜಿ‌ ಕಾರ್ಪೊರೇಟ್‌ರ್)

ಶಿವಾನಂದ ಮದಿಹಳ್ಳಿ
ವಿಜಯಪುರ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.