ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ 'ಕಾಂತಾರ ಅಧ್ಯಾಯ-1' ಬಿಡುಗಡೆ ದಿನಾಂಕ ಘೋಷಣೆ ಆಗಿದೆ. ದಕ್ಷಿಣ ಭಾರತ ಚಿತ್ರರಂಗದಲ್ಲಿ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆಗಳಲ್ಲೊಂದಾದ ಹೊಂಬಾಳೆ ಫಿಲ್ಮ್ಸ್ ಈ ಬಹುನಿರೀಕ್ಷಿತ ಚಿತ್ರವನ್ನು ನಿರ್ಮಿಸುತ್ತಿದ್ದು, ಅಭಿಮಾನಿಗಳಿಗೆ ಹೊಸ ಅಪ್ಡೇಟ್ ನೀಡಿದೆ.
ಕಾಂತಾರ ಅಧ್ಯಾಯ 1 ವಿಶ್ವದಾದ್ಯಂತ 2025ರ ಅಕ್ಟೋಬರ್ 2ರಂದು ಗ್ರ್ಯಾಂಡ್ ರಿಲೀಸ್ ಆಗಲಿದೆ. ಈ ಬಗ್ಗೆ ಹೊಂಬಾಳೆ ಫಿಲ್ಮ್ಸ್ ತನ್ನ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಮಾಹಿತಿ ಹಂಚಿಕೊಂಡಿದೆ.
ಇದನ್ನೂ ಓದಿ: ಕಾಂತಾರ ಸೆಟ್ನಲ್ಲಿ ರಿಷಬ್ ಶೆಟ್ಟಿ: 60 ದಿನಗಳ ನಿರಂತರ ಶೂಟಿಂಗ್; 2 ಶೆಡ್ಯೂಲ್ ಕಂಪ್ಲೀಟ್, ಬಜೆಟ್ ಮಾಹಿತಿ ಇಲ್ಲಿದೆ
'ಕಾಂತಾರ: ಎ ಲೆಜೆಂಡ್'' 2022ರ ಸೆಪ್ಟೆಂಬರ್ ಕೊನೆಗೆ ತೆರೆಕಂಡು ನಿರೀಕ್ಷೆಗೂ ಮೀರಿ ಅಭೂತಪೂರ್ವ ಯಶಸ್ಸು ಕಂಡಿತ್ತು. ಮುಂದಿನ ಭಾಗಕ್ಕಾಗಿ ಉತ್ಸುಕರಾಗುವಂತೆ ಮಾಡಿದೆ. ರಿಷಬ್ ಶೆಟ್ಟಿ ರಚನೆಯ ವಿಭಿನ್ನ ಲೋಕಕ್ಕೆ ಮತ್ತೆ ಧುಮುಕುವ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ.
ಹೊಂಬಾಳೆ ಫಿಲಂಸ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿದ, ರಿಷಬ್ ಶೆಟ್ಟಿ ಬರೆದು ನಿರ್ದೇಶಿಸಿದ ಚಿತ್ರ ಈ ‘ಕಾಂತಾರ’. ರಿಷಬ್ ಶೆಟ್ಟಿ ದ್ವಿಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಲನಚಿತ್ರವನ್ನು ಕರಾವಳಿ ಕರ್ನಾಟಕದ ಕೆರಾಡಿಯಲ್ಲಿ ಚಿತ್ರೀಕರಿಸಲಾಗಿದೆ, ಪ್ರಧಾನ ಛಾಯಾಗ್ರಹಣ ಆಗಸ್ಟ್ 2021 ರಲ್ಲಿ ಪ್ರಾರಂಭವಾಗಿತ್ತು.
ಚಲನಚಿತ್ರವು ಯಶಸ್ಸನ್ನು ಗಳಿಸಿತು ಮತ್ತು 'ಕೆ.ಜಿ.ಎಫ್: ಅಧ್ಯಾಯ 2' ನಂತರ ಸಾರ್ವಕಾಲಿಕ ಎರಡನೇ ಅತಿ ಹೆಚ್ಚು ಗಳಿಕೆಯ ಕನ್ನಡ ಚಲನಚಿತ್ರವಾಗಿ ಹೊರಹೊಮ್ಮಿತ್ತು. ಚಿತ್ರದ ಮತ್ತೊಂದು ಭಾಗ ತಿಂಗಳ ಅಂತರದಲ್ಲಿ ಅದೇ ವರ್ಷದಲ್ಲಿ ಬಿಡುಗಡೆ ಆಗಿತ್ತು.
ಇದು 2022 ರ ಭಾರತದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ನಾಲ್ಕನೇ ಚಲನಚಿತ್ರವಾಗಿದೆ. ಚಲನಚಿತ್ರವು ಕೇವಲ ಪ್ರೇಕ್ಷಕರಿಗೆ ಮಾತ್ರವಲ್ಲದೆ ಎಲ್ಲಾ ವರ್ಗದ ಜನರಿಗೆ ಅಚ್ಚುಮೆಚ್ಚಿನದ್ದಾಗಿದೆ. ಏಕೆಂದರೆ ಇದು 54ನೇ IFFI ಭಾರತೀಯ ಪನೋರಮಾ ವಿಭಾಗದಲ್ಲಿ ಕಾಣಿಸಿಕೊಂಡು, ಅಲ್ಲಿ ಸಿಲ್ವರ್ ಪೀಕಾಕ್ - ವಿಶೇಷ ತೀರ್ಪುಗಾರರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು.
ಮುಂಬರುವ ಚಿತ್ರಕ್ಕಾಗಿ, ಕೇರಳದ ಅತ್ಯಂತ ಹಳೆಯ ಸಮರ ಕಲೆಗಳಲ್ಲಿ ಒಂದಾದ ಕಳರಿಪಯಟ್ಟುನಲ್ಲಿ ನಾಯಕ ನಟ ರಿಷಬ್ ಕಠಿಣ ತರಬೇತಿಯನ್ನು ಸಹ ಪಡೆದಿದ್ದಾರೆ.
ಕಾಂತಾರ: ಅಧ್ಯಾಯ 1 ಕೊಂಕಣ ಜಾನಪದದ ಶ್ರೀಮಂತಿಕೆಯನ್ನು ಜಗತ್ತಿಗೆ ಪರಿಚಯಿಸಿದ ಚಿತ್ರವಾಗಿದೆ. ಕಾಂತಾರ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡ ರಿಷಬ್ ಶೆಟ್ಟಿ, ಈ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟ ರಾಷ್ಟ್ರೀಯ ಪ್ರಶಸ್ತಿಯನ್ನು ಇತ್ತೀಚೆಗಷ್ಟೇ ಪಡೆದುಕೊಂಡಿದ್ದಾರೆ. ಸದ್ಯ ರಿಷಬ್ ಶೆಟ್ಟಿ ಕಾಂತಾರ ಅಧ್ಯಾಯ 1 ಚಿತ್ರದ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಕುಂದಾಪುರದಲ್ಲಿ ಅದ್ಧೂರಿ ಸೆಟ್ಗಳನ್ನ ಹಾಕಿ ಚಿತ್ರೀಕರಣ ಮಾಡುತ್ತಿದ್ದಾರೆ. ಇದೀಗ ಕಾಂತಾರ ಅಧ್ಯಾಯ 1 ಸಿನಿಮಾ ಟೀಮ್ಗೆ RRR ಚಿತ್ರದ ಆಕ್ಷನ್ ಡೈರೆಕ್ಟರ್ ಸೇರಿದ್ದಾರೆ.
ಕಾಂತಾರ ಅಧ್ಯಾಯ 1 ಚಿತ್ರದ ಮೋಷನ್ ಪಿಕ್ಚರ್ ಜೊತೆ ರಿಷಬ್ ಶೆಟ್ಟಿ ಫಸ್ಟ್ ಲುಕ್ ಭಾರತೀಯ ಸಿನಿಮಾದಲ್ಲಿ ಈ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿಸಿತ್ತು. ಇದಕ್ಕಾಗಿ ರಿಷಬ್ ಶೆಟ್ಟಿ ಆರು ತಿಂಗಳ ಕಾಲ ಕಥೆ ಮಾಡಿ ಸರಳವಾಗಿ ಮುಹೂರ್ತ ಮಾಡಿ ಶೂಟಿಂಗ್ ಆರಂಭಿಸಿದ್ದರು. ಈ ಚಿತ್ರಕ್ಕೆ 10ಕೆಜಿ ತೂಕ ಹೆಚ್ಚಿಸಿಕೊಂಡಿರುವ ರಿಷಬ್ ಶೆಟ್ಟಿ ಈ ಚಿತ್ರದಲ್ಲಿ ಭರ್ಜರಿ ಆಕ್ಷನ್ ಮಾಡಲಿದ್ದಾರೆ. ಅದಕ್ಕಾಗಿಯೇ ಶೆಟ್ರು ಕಲರಿಪಯಟ್ಟು ಕಲಿಯುತ್ತಿರುವ ಫೋಟೋವನ್ನ ರಿವೀಲ್ ಮಾಡಿದ್ದರು.
RRR ಸಿನಿಮಾದ ಆಕ್ಷನ್ ಡೈರೆಕ್ಟರ್ ಟೊಡರ್ ಲ್ಯಾಜರೋವ್, ಇದೀಗ ಕಾಂತಾರ ಚಿತ್ರಕ್ಕೂ ಸಾಹಸ ನಿರ್ದೇಶನ ಮಾಡಲಿದ್ದಾರೆ. ರಿಷಬ್ ಶೆಟ್ಟಿ ಜೊತೆ ಆಕ್ಷನ್ ಸೀಕ್ವೆನ್ಸ್ ಬಗ್ಗೆ ಸಿದ್ಧತೆ ಮಾಡಿಕೊಂಡಿರುವ ಆರ್ ಆರ್ ಆರ್ ಚಿತ್ರದ ಸ್ಟಂಟ್ ಮಾಸ್ಟರ್ ಟೊಡರ್ ಲ್ಯಾಜರೋವ್ ಕಲರಿಪಯಟ್ಟು ಆಕ್ಷನ್ ಕಂಪೋಜ್ ಮಾಡಲಿದ್ದಾರೆ.
ಇದನ್ನೂ ಓದಿ: 'ಅಧಿಕಾರ ಬೇಡ, ಆದರೆ ರಾಜಕೀಯಕ್ಕೆ ಸಿದ್ಧತೆ ನಡೆಯುತ್ತಿದೆ': ಬೆದರಿಕೆಗಳು ಬಂದಿವೆ ಎಂದ ನಟ ಚೇತನ್ ಅಹಿಂಸಾ