ETV Bharat / international

ಇಮ್ರಾನ್​ ಖಾನ್​ರೊಂದಿಗೆ ಮಾತುಕತೆ ಇಲ್ಲವೆಂದ ಸೇನೆ: ಪಾಕ್ ಮಾಜಿ ಪ್ರಧಾನಿಗೆ ಜೈಲೇ ಗತಿ - IMRAN KHAN

ಇಮ್ರಾನ್ ಖಾನ್​ರೊಂದಿಗೆ ಮಾತುಕತೆ ನಡೆಸಲ್ಲ ಎಂದು ಪಾಕಿಸ್ತಾನ ಮಿಲಿಟರಿ ಹೇಳಿದೆ.

ಸೇನಾಧಿಕಾರಿಯ ಕೈಕುಲುಕುತ್ತಿರುವ ಇಮ್ರಾನ್ ಖಾನ್ (ಸಂಗ್ರಹ ಚಿತ್ರ)
ಸೇನಾಧಿಕಾರಿಯ ಕೈಕುಲುಕುತ್ತಿರುವ ಇಮ್ರಾನ್ ಖಾನ್ (ಸಂಗ್ರಹ ಚಿತ್ರ) (IANS)
author img

By ETV Bharat Karnataka Team

Published : Nov 17, 2024, 4:12 PM IST

ರಾವಲ್ಪಿಂಡಿ: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರೊಂದಿಗೆ ಒಪ್ಪಂದ ಮಾಡಿಕೊಳ್ಳುವ ಯಾವುದೇ ಸಾಧ್ಯತೆಯನ್ನು ಪಾಕಿಸ್ತಾನ ಸೇನೆ ತಳ್ಳಿಹಾಕಿದ್ದು, ಅವರೊಂದಿಗೆ ಮಾತುಕತೆ ನಡೆಸುವ ಎಲ್ಲಾ ಬಾಗಿಲುಗಳು ಮುಚ್ಚಿವೆ ಎಂದು ಸ್ಪಷ್ಟಪಡಿಸಿದೆ. ಸೇನೆಯ ಈ ಹೇಳಿಕೆಯು ಇಮ್ರಾನ್ ಖಾನ್ ಅವರ ರಾಜಕೀಯ ಭವಿಷ್ಯವನ್ನು ಮತ್ತು ದೇಶದ ಪ್ರಬಲ ಮಿಲಿಟರಿ ವ್ಯವಸ್ಥೆಯೊಂದಿಗೆ ಹಿಂಬಾಗಿಲ ಮಾತುಕತೆ ನಡೆಸುವ ಅವರ ಭರವಸೆಗಳನ್ನು ಅಪಾಯಕ್ಕೆ ಸಿಲುಕಿಸಿದೆ.

ಬ್ರಿಟಿಷ್ ದೈನಿಕದ ವರದಿಯ ಪ್ರಕಾರ, ಹಿರಿಯ ಮಿಲಿಟರಿ ಅಧಿಕಾರಿಗಳು ಖಾನ್ ಅವರೊಂದಿಗೆ ಯಾವುದೇ ಮಟ್ಟದಲ್ಲಿ ಮಾತುಕತೆ ನಡೆಸುವ ಆಲೋಚನೆಯನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ಇತ್ತೀಚೆಗೆ ರಾವಲ್ಪಿಂಡಿಯ ಅಡಿಯಾಲಾ ಜೈಲಿನಲ್ಲಿ ಪಕ್ಷದ ಮುಖಂಡರೊಂದಿಗಿನ ಸಂವಾದದ ಸಂದರ್ಭದಲ್ಲಿ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಸಂಸ್ಥಾಪಕ ಇಮ್ರಾನ್ ಖಾನ್ ಸೇನೆಯ ಜೊತೆ ಮಾತುಕತೆ ನಡೆಸುವ ಇಂಗಿತ ವ್ಯಕ್ತಪಡಿಸಿದ್ದರು. ದೇಶದ ಮಿಲಿಟರಿ ನಾಯಕತ್ವದೊಂದಿಗೆ ಒಪ್ಪಂದ ಮಾಡಿಕೊಳ್ಳಲು ತಾವು ಈಗಲೂ ಸಿದ್ಧವಿರುವುದಾಗಿ ಖಾನ್ ತಿಳಿಸಿದ್ದರು.

ಕುತೂಹಲಕಾರಿ ಸಂಗತಿಯೆಂದರೆ, ತಾವು ಇಂದು ಬಂಧನದಲ್ಲಿರುವುದಕ್ಕೆ ಇದೇ ಮಿಲಿಟರಿ ವ್ಯವಸ್ಥೆ ಮತ್ತು ಅದರ ಸೇನಾ ಮುಖ್ಯಸ್ಥ ಜನರಲ್ ಸೈಯದ್ ಅಸಿಮ್ ಮುನೀರ್ ಅವರೇ ಕಾರಣ ಎಂದು ಖಾನ್ ಆರೋಪಿಸಿದ್ದರು. ಪಾಕಿಸ್ತಾನದಲ್ಲಿ ಯುಎಸ್ ನೇತೃತ್ವದಲ್ಲಿ ಆಡಳಿತ ಬದಲಾವಣೆಯ ಪಿತೂರಿಯ ಮೂಲಕ ಮಿಲಿಟರಿ ಆಡಳಿತವು ತನ್ನನ್ನು ಅಧಿಕಾರದಿಂದ ಹೊರಹಾಕಿದೆ ಮತ್ತು ತನ್ನ ಸರ್ಕಾರವನ್ನು ಉರುಳಿಸಿದೆ ಎಂದು ಖಾನ್ ಆರೋಪಿಸಿದ್ದರು.

"ಖಾನ್ ಅವರ ವಿರುದ್ಧದ ಪ್ರಕರಣಗಳ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ ಮತ್ತು ಈ ಸಂದರ್ಭದಲ್ಲಿ ಮಿಲಿಟರಿಯು ಅವರೊಂದಿಗೆ ಯಾವುದೇ ಒಪ್ಪಂದ ಮಾಡಿಕೊಳ್ಳುವುದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಪ್ರತಿಯೊಬ್ಬರೂ ಕಾನೂನಿನ ನಿಯಮವನ್ನು ಅನುಸರಿಸಬೇಕೆಂದು ಇಮ್ರಾನ್ ಖಾನ್ ಬಯಸುತ್ತಾರೆ, ಆದರೆ ಸ್ವತಃ ತಾವೇ ಅದನ್ನು ಪಾಲಿಸುವುದಿಲ್ಲ ಮತ್ತು ಮಿಲಿಟರಿಯೊಂದಿಗೆ ಚರ್ಚಿಸಲು ಒತ್ತಡ ಹೇರುತ್ತಿದ್ದಾರೆ. ತನ್ನನ್ನು ಜೈಲಿನಿಂದ ಬಿಡುಗಡೆ ಮಾಡುವುದಾದರೆ ಬೇಷರತ್ತಾಗಿ ಒಪ್ಪಂದಕ್ಕೆ ಬರುವುದಾಗಿಯೂ ಹೇಳಿದ್ದರು" ಎಂದು ಪಾಕಿಸ್ತಾನ ಮಿಲಿಟರಿ ಮೂಲಗಳು ತಿಳಿಸಿವೆ.

ಇಮ್ರಾನ್ ಮಿಲಿಟರಿ ವ್ಯವಸ್ಥೆಯೊಂದಿಗೆ ವ್ಯವಹರಿಸಲು ಬಯಸುತ್ತಾರೆಯೇ ಹೊರತು ಆಡಳಿತಾರೂಢ ಸರ್ಕಾರದೊಂದಿಗೆ ಅಲ್ಲ ಎಂದು ಖಾನ್ ಅವರ ಆಪ್ತರು ಹೇಳುತ್ತಾರೆ. ನಿಜವಾದ ಅಧಿಕಾರವು ಪ್ರಬಲ ಮಿಲಿಟರಿ ಬಳಿ ಇರುವುದೇ ಇದಕ್ಕೆ ಕಾರಣವಾಗಿದೆ.

ಖಾನ್ ನೂರಕ್ಕೂ ಹೆಚ್ಚು ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಮತ್ತು ಭ್ರಷ್ಟಾಚಾರದ ಆರೋಪದ ಮೇಲೆ ಈಗಾಗಲೇ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಜೈಲಿನಲ್ಲಿದ್ದಾರೆ. ಮೇ 2023 ರ ಗಲಭೆ ಮತ್ತು ದೇಶದ್ರೋಹಕ್ಕೆ ಸಂಬಂಧಿಸಿದ ಪ್ರಕರಣಗಳಿಗಾಗಿ ಅವರನ್ನು ಮಿಲಿಟರಿ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸುವ ನಿರೀಕ್ಷೆಯಿದೆ.

ಇದನ್ನೂ ಓದಿ : ನೈಜೀರಿಯಾಗೆ ಬಂದಿಳಿದ ಪ್ರಧಾನಿ ಮೋದಿ; ರಾಜಧಾನಿ ಅಬುಜಾದ 'ಕೀಲಿ ಕೈ' ಕೊಟ್ಟು ವಿಶೇಷ ಗೌರವ, ಭಾರತೀಯ ಸಮುದಾಯದಿಂದ ಅದ್ಧೂರಿ ಸ್ವಾಗತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.