ETV Bharat / state

ವಿಜಯಪುರ: ಎದುರಾಳಿಯ ಡಿಚ್ಚಿಗೆ ಕಾಳಗದ ಅಖಾಡದಲ್ಲೇ ಪ್ರಾಣ ಬಿಟ್ಟ ಎರಡು ಟಗರು - ವಿಜಯಪುರದ ಬಸವನ ಬಾಗೇವಾಡಿ ಜಾತ್ರೆ

ಟಗರು ಕಾಳಗದ ಅಖಾಡದಲ್ಲೇ ಎರಡು ಟಗರುಗಳು ಸಾವು ಕಂಡಿರುವ ಘಟನೆ ವಿಜಯಪುರದ ಬಸವನ ಬಾಗೇವಾಡಿ ಜಾತ್ರೆ ವೇಳೆ ನಡೆದಿದೆ.

Etv Bharattwo-sheeps-died-in-fight-competition-in-vijayapura
Etv Bharatಎದುರಾಳಿಯ ಡಿಚ್ಚಿಗೆ ಕಾಳಗದ ಅಖಾಡದಲ್ಲೇ ಪ್ರಾಣ ಬಿಟ್ಟ ಎರಡು ಟಗರು
author img

By

Published : Aug 21, 2022, 10:01 PM IST

Updated : Aug 21, 2022, 11:01 PM IST

ವಿಜಯಪುರ: ಟಗರು ಕಾಳಗದ ಅಖಾಡದಲ್ಲೇ ಎರಡು ಟಗರುಗಳು ಸಾವನ್ನಪ್ಪಿರುವ ಘಟನೆ ಬಸವನ ಬಾಗೇವಾಡಿ ಜಾತ್ರೆ ವೇಳೆ ನಡೆದಿದೆ. ಕಾಳಗದಲ್ಲಿ ಎದುರಾಳಿಯ ಒಂದೇ ಡಿಚ್ಚಿಗೆ ಸ್ಥಳದಲ್ಲೇ ಟಗರುಗಳು ಉಸಿರು ಚೆಲ್ಲಿವೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಎರಡು ದಿನಗಳ ಹಿಂದೆ ಬಸವನ ಬಾಗೇವಾಡಿ ಜಾತ್ರೆಯಲ್ಲಿ ಟಗರು ಕಾಳಗ ನಡೆದಿತ್ತು. ಈ ವೇಳೆ ಬಾಗೇವಾಡಿ ತಾಲೂಕಿನ ಮನಗೂಳಿ ಗ್ರಾಮ ಹಾಗೂ ನಿಡಗುಂದಿ ತಾಲೂಕಿನ ಬೇನಾಳ ಗ್ರಾಮದ ಟಗರುಗಳು ಸಾವಿಗೀಡಾಗಿವೆ. ಬಾಗಲಕೋಟೆ ಜಿಲ್ಲೆಯ ಬೆನಕಟ್ಟಿ ಗ್ರಾಮದ ಟಗರು ಗುದ್ದಿದ ಪರಿಣಾಮ ಈ ಎರಡು ಟಗರುಗಳು ಪ್ರಾಣಬಿಟ್ಟಿವೆ ಎಂದು ತಿಳಿದುಬಂದಿದೆ.

ಎದುರಾಳಿಯ ಡಿಚ್ಚಿಗೆ ಕಾಳಗದ ಅಖಾಡದಲ್ಲೇ ಪ್ರಾಣ ಬಿಟ್ಟ ಎರಡು ಟಗರು

ಟಗರು ಸಾವನ್ನಪ್ಪಿದ ಕಾರಣ ಮಾಲೀಕರು ಸಂಕಷ್ಟಕ್ಕೊಳಗಾಗಿದ್ದು, ಅವರಿಗೆ ಜಾತ್ರಾ ಕಮೀಟಿ ವತಿಯಿಂದ 35 ಸಾವಿರ ಹಾಗೂ 40 ಸಾವಿರ ರೂಪಾಯಿ ಪರಿಹಾರ ನೀಡಲಾಗಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ಭೀಕರ ಅಪಘಾತ: ಇಬ್ಬರು ಬೈಕ್​ ಸವಾರರಿಗೆ ಗಂಭೀರ ಗಾಯ

Last Updated : Aug 21, 2022, 11:01 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.