ETV Bharat / state

ಕೊರೊನಾ ಕಂಟಕ ಕಳೆದು ಕಾರಹುಣ್ಣಿಮೆಯ ಕರಿಗೆ ಸಿದ್ಧರಾದ ರೈತರು - farmers preparing to celabrate

ಕಾರ ಹುಣ್ಣಿಮೆಯ ಸಿದ್ದತೆ ಈ ಬಾರಿ ಕೊರೊನಾ ವೈರಸ್ ಆರ್ಭಟದಿಂದಾಗಿ ಕಳೆಗುಂದಿದ್ದರೂ ಜನರ ಉತ್ಸಾಹಕ್ಕೆ ಬರವಿಲ್ಲ. ಲಾಕ್‌ಡೌನ್‌ನಿಂದಾಗಿ ರೈತರು ಹಾಗೂ ಕೃಷಿ ಸಾಮಗ್ರಿ ಮಾರಾಟ ಮಾಡುವವರು ಕಷ್ಟ ಅನುಭವಿಸಿದ್ದಾರೆ. ಕಳೆದ ವರ್ಷವೂ ಹಬ್ಬ ಅಷ್ಟಕ್ಕಷ್ಟೇ ಆಚರಣೆಯಾದರೆ ಈ ವರ್ಷವೂ ಎರಡು ತಿಂಗಳು ಲಾಕ್‌ಡೌನ್ ನಷ್ಟದ ನಡುವೆಯೂ ರೈತರು ವಸ್ತುಗಳನ್ನು ಖರೀದಿಸುತ್ತಿದ್ದಾರೆ.

ರೈತರು
ರೈತರು
author img

By

Published : Jun 24, 2021, 8:59 PM IST

ಮುದ್ದೇಬಿಹಾಳ: ಉತ್ತರ ಕರ್ನಾಟಕದ ಗ್ರಾಮೀಣ ಸೊಗಡಿನ ಕಾರ ಹುಣ್ಣಿಮೆಯನ್ನು ರೈತರು ಕೊರೊನಾ ಸಂಕಟದಿಂದ ಪಾರಾದ ಬಳಿಕ ಮೊದಲ ಬಾರಿಗೆ ಸಡಗರದಿಂದ ಆಚರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಹಬ್ಬದ ಅಂಗವಾಗಿ ತಾಲೂಕಿನಲ್ಲಿ ವಿವಿಧೆಡೆ ಎತ್ತುಗಳ ಕರಿ ಹರಿಯುವುದಕ್ಕಾಗಿ ವಿವಿಧ ವಸ್ತುಗಳ ದರ ಹೆಚ್ಚಳವಿದ್ದರೂ ಖರೀದಿ ಭರಾಟೆ ಜೋರಾಗಿದೆ. ರೈತರು ತಮ್ಮ ಎತ್ತುಗಳ ಮೈ ತೊಳೆದು, ಬಣ್ಣ ಹಚ್ಚಿ ಶೃಂಗರಿಸಿ ಕರಿ ಹರಿಯುವ ದೃಶ್ಯ ರೋಮಾಂಚನಗೊಳಿಸುತ್ತದೆ.

ಕಾರ ಹುಣ್ಣಿಮೆಯ ಸಿದ್ದತೆ ಈ ಬಾರಿ ಕೊರೊನಾ ವೈರಸ್ ಆರ್ಭಟದಿಂದಾಗಿ ಕಳೆಗುಂದಿದ್ದರೂ ಜನರ ಉತ್ಸಾಹಕ್ಕೆ ಬರವಿಲ್ಲ. ಲಾಕ್‌ಡೌನ್‌ನಿಂದಾಗಿ ರೈತರು ಹಾಗೂ ಕೃಷಿ ಸಾಮಗ್ರಿ ಮಾರಾಟ ಮಾಡುವವರು ಕಷ್ಟ ಅನುಭವಿಸಿದ್ದಾರೆ. ಕಳೆದ ವರ್ಷವೂ ಹಬ್ಬ ಅಷ್ಟಕ್ಕಷ್ಟೇ ಆಚರಣೆಯಾದರೆ ಈ ವರ್ಷವೂ ಎರಡು ತಿಂಗಳು ಲಾಕ್‌ಡೌನ್ ನಷ್ಟದ ನಡುವೆಯೂ ರೈತರು ವಸ್ತುಗಳ ಖರೀದಿಸುತ್ತಿದ್ದಾರೆ.

ಕಾರಹುಣ್ಣಿಮೆಯ ಕರಿಗೆ ಸಿದ್ಧರಾದ ರೈತರು

ಸಾಮಗ್ರಿಗಳ ದರ ಹೆಚ್ಚಳ: ರೈತರ ಬಳಿ ಹಣವಿಲ್ಲ. ಖರೀದಿದಾರರಲ್ಲಿ ಸಾಮಗ್ರಿಯೂ ಕಡಿಮೆ ಸಂಗ್ರಹವಾಗಿದ್ದು ಅದರ ಬೆಲೆಯೂ ಹೆಚ್ಚಳವಾಗಿದೆ ಎನ್ನುತ್ತಾರೆ ಮಾರಾಟಗಾರರು. ಬಣ್ಣದ ಡಬ್ಬಿಗಳು, ಗೆಜ್ಜೆ ಸರ, ಜೋಡ ಹಗ್ಗ, ಕೊಂಬು ಮತ್ತು ಹವಳ ಸರ, ಮಗಡ, ಮೂಗದಾಣಿ, ಗಂಟೆ, ರಿಬ್ಬನ್ ಮೊದಲಾದ ಸಾಮಗ್ರಿ ಬೆಲೆ ಹೆಚ್ಚಾಗಿದೆ.

ಕೊರೊನಾ ಹಾವಳಿಯಿಂದ ಈ ವರ್ಷದ 2 ತಿಂಗಳು ಲಾಕ್‌ಡೌನ್ ಆಗಿತ್ತು. ಈಗ ಸಡಿಲಿಕೆಯಿಂದ ಅಲ್ಪ ಸ್ವಲ್ಪ ವ್ಯಾಪಾರ ನಡೆಯುತ್ತಿದೆ. ರೈತರೇನೋ ಎರಡು ದಿನಗಳಿಂದ ಮಾರುಕಟ್ಟೆಗೆ ಬಂದು ವಸ್ತುಗಳ ಖರೀದಿಸಿದರೂ, ನಮಗೆ ಅಷ್ಟೇನು ವ್ಯಾಪಾರ ಆಗಿಲ್ಲ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.