ETV Bharat / state

ರಾಜ್ಯದ 25 ಸಂಸದರು ಪ್ರಧಾನಿಯವರಿಗೆ ಒತ್ತಡ ಹಾಕ್ಬೇಕು: ಶಾಸಕ ಯತ್ನಾಳ್​​

author img

By

Published : Oct 3, 2019, 5:14 PM IST

ರಾಜ್ಯದಲ್ಲಿ ಭೀಕರ ಪ್ರವಾಹ ಉಂಟಾಗಿದ್ದರೂ ಸಹ ಕೇಂದ್ರ ಸರ್ಕಾರ ಯಾವುದೇ ಪರಿಹಾರ ನೀಡದ ಹಿನ್ನೆಲೆ ನಮ್ಮ 25 ಸಂಸದರು ಪ್ರಧಾನಿ ಬಳಿ ಹೋಗಿ ಪರಿಹಾರ ಕೇಳಬೇಕು. ಅದರಲ್ಲಿ ಹೆದರುವ ಅವಶ್ಯಕತೆ ಏನಿದೆ? ನಾವಿರುವುದು ಜನರಿಗಾಗಿ ಎಂದು ಶಾಸಕ ಯತ್ನಾಳ್​​ ಗುಡುಗಿದ್ದಾರೆ.

ಶಾಸಕ ಬಸನಗೌಡ ಯತ್ನಾಳ

ವಿಜಯಪುರ: ಜನರು ನಮ್ಮ ‌ಮೇಲೆ ವಿಶ್ವಾಸವಿಟ್ಟು ನಮ್ಮನ್ನು ಆಯ್ಕೆ ಮಾಡಿ ಕಳುಹಿಸಿದ್ದಾರೆ. ಸಂತ್ರಸ್ತರಿಗೆ ನೋವಾಗಿದೆ‌. ಕಷ್ಟದಲ್ಲಿ ಇದ್ದಾರೆ. ರಾಜ್ಯದ 25 ಜನ ಸಂಸದರು ಪ್ರಧಾನಿ ಮೋದಿಯವರಿಗೆ ಒತ್ತಡ ಹಾಕಬೇಕು ಎಂದು ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​​ ರಾಜ್ಯದ ಸಂಸದರ ವಿರುದ್ಧ ಸಿಡಿಮಿಡಿಗೊಂಡರು.

ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ರಸ್ತೆ ಹಾಗೂ ಪೇವಿಂಗ್ ಅಳವಡಿಕೆಗೆ ಶಂಕುಸ್ಥಾಪನೆಗೆ ಪೂಜೆ ನೆರವೇರಿಸಿ‌ ಮಾಧ್ಯಮದೊಂದಿಗೆ ಮಾತನಾಡಿದ ಶಾಸಕ ಯತ್ನಾಳ್​​, ಇದು ಪ್ರಜಾತಂತ್ರ ದೇಶ. ಯಾರಿಗೂ ಅಂಜಿ ಜೀವನ ಮಾಡುವುದಿಲ್ಲ. ಅಂತಿಮವಾಗಿ ತಿರ್ಮಾನ‌ ಮಾಡುವವರು‌ ಜನರು‌ ಎಂದಿದ್ದಾರೆ.

ಶಾಸಕ ಬಸನಗೌಡ ಯತ್ನಾಳ

ಆಲಮಟ್ಟಿ ವಿಚಾರವಾಗಿ ನಾನು ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಅಷ್ಟೇ ಖಡಕ್ಕಾಗಿ ಮಾತಾಡಿದ್ದೆ. ಆಗ ನನಗೂ ಹೇಳಿದ್ರು. ನಿನ್ನ ಭವಿಷ್ಯ ಮುಗಿಯಿತು ಅಂತಾ. ಆದರೆ ನಾನು ಕೇಂದ್ರದ ಮಂತ್ರಿಯಾದೆ. ಬರಿ ಮಂತ್ರಿಯಾಗುವುದರ ಸಲುವಾಗಿ, ಮುಂದಿನ ಟಿಕೆಟ್‌ಗೊಸ್ಕರ ಜನರ ಹಿತ ಕಾಪಾಡದೇ ಇರುವುದು ತಪ್ಪು ಎಂದು ಕಳವಳ ವ್ಯಕ್ತಪಡಿಸಿದರು.

ಚಕ್ರವರ್ತಿ ಸೂಲೆಬೆಲೆಯವರು ಕಳೆದ ಎರಡು ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ‌ ನರೇಂದ್ರ ಮೋದಿಯವರು‌ ಪ್ರಧಾನಿಯಾಗಬೇಕು ಅಂತಾ ಹಗಲು‌ ರಾತ್ರಿ ತಪಸ್ಸು ಮಾಡಿದ್ದಾರೆ. ಸಂತ್ರಸ್ತರ ಪರಿಹಾರದ ಬಗ್ಗೆ ಕೇಳೋದು ತಪ್ಪಲ್ಲ. ಅವರು ಯಾವುದೇ ಪಾರ್ಟಿಯ ಪರವಾಗಿಲ್ಲ. ಬದಲಾಗಿ ಚಕ್ರವರ್ತಿ ಒಬ್ಬ ಸಾಮಾಜಿಕ ಕಾರ್ಯಕರ್ತ ಎಂದರು.

Intro:ರಾಜ್ಯದ 25 ಸಂಸದರು ಪ್ರಧಾನಿಯವರಿಗೆ ಒತ್ತಡ ಹಾಕ್ಬೇಕು ಶಾಸಕ ಬಸನಗೌಡ ಯತ್ನಾಳ

ವಿಜಯಪುರ: ಜನರು ನಮ್ಮ ‌ಮೇಲೆ ವಿಶ್ವಾಸವಿಟ್ಟು ಆಯ್ಕೆ ಮಾಡಿ ಕಳಸಿದ್ದಾರೆ ಇವತ್ತು ಸಂತ್ರಸ್ತರಿಗೆ ನೋವಾಗಿದೆ‌ ಕಷ್ಟದಲ್ಲಿ ಇದ್ದಾರೆ. ರಾಜ್ಯದ 25 ಜನ ಸಂಸದರು ಪ್ರಧಾನಿ ಮೋದಿಯವರಿಗೆ ಒತ್ತಡ ಹಾಕಬೇಕು ಎಂದು ಶಾಸಕ ಬಸನಗೌಡ ಯತ್ನಾಳ ರಾಜ್ಯದ ಸಂಸದರ ವಿರುದ್ಧ ಸಿಡಿಮಿಡಿಗೊಂಡರು.

Body:ನಗರದ ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿ ರಸ್ತೆ ಹಾಗೂ ಪೇವಿಂಗ್ ಅಳವಡಿಕೆಗೆ ಶಂಕು ಸ್ಥಾಪನೆಗೆ ಪೂಜೆ ನೇರವೇರಿಸಿ‌ ಮಾಧ್ಯಮದೊಂದಿಗೆ ಮಾತನಾಡಿದ ಶಾಸಕ ಯತ್ನಾಳ ಇದು ಪ್ರಜಾತಂತ್ರ ದೇಶ ಯಾರಿಗೂ ಅಂಜಿ ಜೀವನ ಮಾಡೋದಿಲ್ಲ ಅಂತಿಮವಾಗಿ ತಿರ್ಮಾನ‌ ಮಾಡುವವರು‌ ಜನರು‌ ಅವರ ಪರವಾಗಿ ಜನರು‌‌ ಮಾತನಾಡುವುದಿಲ್ಲ ಮಾರ್ಮಿಕವಾಗಿ‌ ಪ್ರಕ್ರಿಯಿಸಿದರು

ಆಲಮಟ್ಟಿ ವಿಚಾರವಾಗಿ ನಾನು ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಅಷ್ಟೇ ಖಡಕಕ್ಕಾಗಿ ಮಾತಾಡಿದೆ, ಅವಾಗ ನನಗೂ ಹೇಳಿದ್ರು ನಿನ್ನ ಭವಿಷ್ಯ ಮುಗಿಯಿತು ಅಂತಾ ಆದರೆ ನಾನು ಕೇಂದ್ರದ ಮಂತ್ರಿಯಾದೆ ಬರಿ ಮಂತ್ರಿಯಾಗುವುದರ ಸಲುವಾಗಿ, ಮುಂದಿನ ಟಿಕೆಟ್‌ಗೊಸ್ಕರ ಜನರ ಹಿತ ಕಾಪಾಡಬಾರದು. ಕೇಲವೂಂದು ಜನರನ್ನ ವಿರೋಧವಾಗಿ ಕಟಿಕೊಂಡು ಬೇಜವಾಬ್ದಾರಿ ಹೇಳಿಕೆಗಳನ್ನ ಕೆಲವೂಂದು ಜನಾ ಕೊಡ್ತಾಯಿದ್ದಾರೆ ಒಳ್ಳೆಯ ಬೆಳವಣಿಯಲ್ಲ ಎಂದು ಕಳವಳ ವ್ಯಕ್ತಪಡಿಸಿದರು

Conclusion:ಚಕ್ರವರ್ತಿ ಸೂಲೆಬೆಲೆಯವರು ಕಳೆದ ಎರಡು ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ‌ ನರೇಂದ್ರ ಮೋದಿಯವರು‌ ಪ್ರಧಾನಿಯಾಗಬೇಕು ಅಂತಾ ಹಗಲು‌ ರಾತ್ರಿ ತಪ್ಪಸು ಮಾಡಿದ್ದಾರೆ ಸಂತ್ರಸ್ತರ ಪರಿಹಾರ ಬಗ್ಗೆ ಕೇಳೋದು ತಪ್ಪಲ್ಲ ಅವರು ಯಾವುದೆ ಪಾರ್ಟಿಯ ಪರವಾಗಿಲ್ಲ ಬದಲಾಗಿ ಚಕ್ರವರ್ತಿ ಒಬ್ಬ ಸಾಮಾಜಿಕ ಕಾರ್ಯಕರ್ತರು ನಿಮ್ಮ ವೈಪಲ್ಯಗಳನ್ನು ಅವರ ಮೇಲೆ ಹಾಕುತ್ತೆರಿ ಎಂದು ಶಾಸಕ‌ ಯತ್ನಾಳ ಹೇಳಿಕೆ ನೀಡಿದರು

ಶಿವಾನಂದ‌ ಮದಿಹಳ್ಳಿ
ವಿಜಯಪುರ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.