ETV Bharat / state

ಕಾವೇರಿ ಪೈಪ್‌ಲೈನ್‌ಗೆ ಸ್ಯಾನಿಟರಿ ಸಂಪರ್ಕ ನೀಡಿದ್ದ ಕಟ್ಟಡ ಮಾಲೀಕರ ವಿರುದ್ಧ ಕಠಿಣ ಕ್ರಮ: BWSSB

ಬೆಂಗಳೂರಿನ ಥಣಿಸಂದ್ರದ ಹೆಗಡೆ ನಗರದಲ್ಲಿ ಕಾವೇರಿ ಪೈಪ್‌ಲೈನ್​​ಗೆ ಒಳಚರಂಡಿ ಕೊಳವೆ ಸಂಪರ್ಕ ನೀಡಿದ್ದ ಕಟ್ಟಡ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜಲಮಂಡಳಿ ಅಧ್ಯಕ್ಷ ರಾಮ್‌ ಪ್ರಸಾತ್‌ ಮನೋಹರ್ ಅಧಿಕಾರಿಗಳಿಗೆ​ ಸೂಚಿಸಿದ್ದಾರೆ.

ಕಾವೇರಿ ಪೈಪ್‌ಲೈನ್​ಗೆ ಒಳಚರಂಡಿ ಸಂಪರ್ಕ ನೀಡಿದ್ದ ಕಟ್ಟಡ ಮಾಲೀಕರ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ
ಕಾವೇರಿ ಪೈಪ್‌ಲೈನ್​ಗೆ ಒಳಚರಂಡಿ ಸಂಪರ್ಕ ನೀಡಿದ್ದ ಕಟ್ಟಡ ಮಾಲೀಕರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾದ BWSSB (ETV Bharat)
author img

By ETV Bharat Karnataka Team

Published : Nov 14, 2024, 6:44 AM IST

Updated : Nov 14, 2024, 6:54 AM IST

ಬೆಂಗಳೂರು: "ಥಣಿಸಂದ್ರದ ಹೆಗಡೆ ನಗರದ ರಾಯಲ್‌ ಬ್ಲಿಸ್​ ಅಪಾರ್ಟ್‌ಮೆಂಟ್‌ನಿಂದ ಅನಧಿಕೃತವಾಗಿ ಕಾವೇರಿ 5ನೇ ಹಂತದ ಪೈಪ್‌ಲೈನ್​ಗೆ ಸ್ಯಾನಿಟರಿ ಕನೆಕ್ಷನ್​ ನೀಡಿದ್ದ ಕಟ್ಟಡ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು" ಎಂದು ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ(BWSSB) ಅಧ್ಯಕ್ಷ ಡಾ.ರಾಮ್​ ಪ್ರಸಾತ್​ ಮನೋಹರ್ ಅವರು ಅಧಿಕಾರಿಗಳಿಗೆ​​ ತಿಳಿಸಿದ್ದಾರೆ.

"ಬುಧವಾರ ಹೆಗಡೆ ನಗರದಲ್ಲಿ ಕಾವೇರಿ ಪೈಪ್‌ಲೈನ್​ನಿಂದ ನೀರು ರಭಸವಾಗಿ ಹೊರಬಂದು ಅಕ್ಕಪಕ್ಕದ ಮನೆಗಳಿಗೆ ಹಾನಿ ಉಂಟಾದ ಬಗ್ಗೆ ದೂರು ಬಂದಿತ್ತು. ಜಲಮಂಡಳಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ರಾಯಲ್‌ ಬ್ಲಿಸ್‌ ಅಪಾರ್ಟ್‌ಮೆಂಟ್​​ನ ಮಾಲೀಕರು ತಮ್ಮ ಕಟ್ಟಡದ ಸ್ಯಾನಿಟರಿ ಲೈನ್‌ ಕನೆಕ್ಷನ್​​ ಅನ್ನು ಅನಧಿಕೃತವಾಗಿ ಕಾವೇರಿ 5ನೇ ಹಂತದ ಪೈಪ್‌ಲೈನ್‌ಗೆ ನೀಡಿದ್ದರು. ಅದನ್ನು ಕಾಂಕ್ರಿಟ್‌ ಬಳಸಿ ಮುಚ್ಚಿ ಯಾರಿಗೂ ಗೊತ್ತಾಗದಂತೆ ಮರೆಮಾಚಿದ್ದರು. ಇದುವರೆಗೂ ಆ ಪೈಪ್‌ಲೈನ್‌ನಲ್ಲಿ ಕಾವೇರಿ ನೀರು ಸರಬರಾಜು ಪ್ರಾರಂಭವಾಗಿರಲಿಲ್ಲ. ನಿನ್ನೆ ರಾತ್ರಿ ಪೈಪ್ ಅ​ನ್ನು ಕಮಿಷನ್‌ ಮಾಡಿದ ಸಂದರ್ಭದಲ್ಲಿ, ಅನಧಿಕೃತವಾಗಿ ಹಾಕಿದ್ದ ಪೈಪ್‌ಲೈನ್‌ 12 ಕೆ.ಜಿ ಪರ್‌ ಸ್ಕ್ವಯರ್ ಸೆಂಟಿಮೀಟರ್‌ ಒತ್ತಡವನ್ನು ನಿಭಾಯಿಸದೇ ನೀರು ರಭಸವಾಗಿ ಹೊರಚೆಲ್ಲಿದೆ. ಇದರಿಂದ ನೀರು ಸರಬರಾಜು ಪೈಪ್‌ಲೈನ್‌ ಹಾಗೂ ಅಕ್ಕಪಕ್ಕದ ಮನೆಗಳಿಗೆ ಹಾನಿಯಾಗಿದೆ" ಎಂದು ರಾಮ್​ ಪ್ರಸಾತ್​ ಮನೋಹರ್ ತಿಳಿಸಿದರು.

"ಇದೀಗ ಈ ಪೈಪ್‌ಲೈನ್ ಅ​ನ್ನು ಸಮರ್ಪಕವಾಗಿ ಶುದ್ದೀಕರಿಸಲಾಗಿದ್ದು, ಡಿಸ್‌ಇನ್‌ಫೆಕ್ಟ್​​ ಮಾಡಿ 110 ಹಳ್ಳಿಗಳಿಗೆ ನೀರು ಸರಬರಾಜು ಮಾಡುವ ನಿರ್ವಹಣಾ ವಿಭಾಗಕ್ಕೆ ಹಸ್ತಾಂತರಿಸಲಾಗುವುದು. ಜಲಮಂಡಳಿ ವತಿಯಿಂದ ಸಾವಿರಾರು ಮಾನವ ಗಂಟೆಗಳ ಶ್ರಮ ವ್ಯಯಿಸುವ ಮೂಲಕ ಲಕ್ಷಾಂತರ ಜನರಿಗೆ ನೀರು ಒದಗಿಸುವ ಕಾರ್ಯಕ್ಕೆ ರಾಯಲ್‌ ಬ್ಲಿಸ್‌ ಕಟ್ಟಡ ಮಾಲೀಕರು ಹಾಗೂ ಇನ್ನಿತರರು ಅನಾದರ ತೋರಿಸಿದ್ದು ಇಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ" ಎಂದರು.

"ಜನರು ತಮ್ಮ ಸ್ವಾರ್ಥಕ್ಕೋಸ್ಕರ ಅಮೂಲ್ಯ ಸಾರ್ವಜನಿಕ ಸಂಪತ್ತಿಗೆ ಘಾಸಿ ಮಾಡುವುದು ಸರಿಯಲ್ಲ. ಈ ಪ್ರಕರಣವನ್ನು ಬೆಂಗಳೂರು ಜಲಮಂಡಳಿ ಗಂಭೀರವಾಗಿ ಪರಿಗಣಿಸಿದ್ದು, ಕಟ್ಟಡ ಮಾಲೀಕರ ಮೇಲೆ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಿದೆ. ಸಿವಿಲ್‌ ದಾವೆ ಹೂಡುವ ಮೂಲಕ ಈ ಪ್ರಕರಣದಿಂದ ಜಲಮಂಡಳಿಗೆ ಹಾಗೂ ಅಕ್ಕಪಕ್ಕದ ಜನರಿಗೆ ಆಗಿರುವ ಆರ್ಥಿಕ ನಷ್ಟವನ್ನು ಕಟ್ಟಡ ಮಾಲೀಕರಿಂದ ತುಂಬಿಸಿಕೊಳ್ಳಬೇಕು" ಎಂದು ಜಲಮಂಡಳಿ ಅಧ್ಯಕ್ಷರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

"ನಗರದ ಬೇರೆ ಪ್ರದೇಶಗಳಲ್ಲೂ ಅನಧಿಕೃತವಾಗಿ ಒಳಚರಂಡಿ ಸಂಪರ್ಕ ಪಡೆದಿರುವುದನ್ನು ಪತ್ತೆ ಹಚ್ಚುವ ಕಾರ್ಯವನ್ನು ಚುರುಕುಗೊಳಿಸಲಾಗುವುದು. ಒಂದೊಮ್ಮೆ ಈ ಪ್ರಕರಣಗಳು ಪತ್ತೆಯಾದಲ್ಲಿ ಅನಧಿಕೃತ ಸಂಪರ್ಕ ಪಡೆದಿರುವವರ ವಿರುದ್ಧ ಮುಲಾಜಿಲ್ಲದೆ ಕ್ರಿಮಿನಲ್‌ ಕೇಸು ದಾಖಲಿಸಲಾಗುವುದು" ಎಂದು ಅವರು ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ಪಶ್ಚಿಮ ಘಟ್ಟದ ನದಿಗಳ ನೀರಿಗೆ ಹಸಿರು ಸೆಸ್: ಸಚಿವ ಈಶ್ವರ್ ಖಂಡ್ರೆ

Last Updated : Nov 14, 2024, 6:54 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.