ETV Bharat / state

ಮೀಸಲಾತಿಗೆ ಆಗ್ರಹ: ತಲೆ ಮೇಲೆ ಕಲ್ಲು ಹೊತ್ತು ಪ್ರತಿಭಟನೆ

author img

By

Published : Feb 24, 2021, 2:29 PM IST

ಮೀಸಲಾತಿಗೆ ಆಗ್ರಹಿಸಿ ತಳವಾರ ಸಮಾಜದ ಮುಖಂಡರು ತಲೆಯ ಮೇಲೆ ಕಲ್ಲು ಹೊತ್ತು ಪ್ರತಿಭಟನೆ ನಡೆಸಿದರು.

protest in vijaypur
ಮೀಸಲಾತಿಗೆ ಆಗ್ರಹ: ತಲೆ ಮೇಲೆ ಕಲ್ಲು ಹೊತ್ತು ಪ್ರತಿಭಟನೆ

ವಿಜಯಪುರ: ತಳವಾರ ಸಮುದಾಯವನ್ನು ಎಸ್​​ಟಿಗೆ ಸೇರಿಸಬೇಕೆಂದು ಆಗ್ರಹಿಸಿ ಸಮುದಾಯದ ಮುಖಂಡರು ತಲೆಯ ಮೇಲೆ ಕಲ್ಲು ಹೊತ್ತು ಪ್ರತಿಭಟನೆ ನಡೆಸಿದರು.

ಮೀಸಲಾತಿಗೆ ಆಗ್ರಹಿಸಿ ತಲೆ ಮೇಲೆ ಕಲ್ಲು ಹೊತ್ತು ನಿಂತ ತಳವಾರ ಸಮುದಾಯದ ಮುಖಂಡರು

ಜಿಲ್ಲೆಯ ಸಿಂದಗಿ ಪಟ್ಟಣದ ಸಾತವೀರೇಶ್ವರ ಸಭಾಭವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಅಧ್ಯಕ್ಷತೆಯಲ್ಲಿ ಸಿಂದಗಿ ತಾಲೂಕು‌ ಕುಂದುಕೊರತೆಗಳ ಸಭೆ ನಡೆಯುತ್ತಿತ್ತು. ಈ ವೇಳೆ ಏಕಾಏಕಿ ಪ್ರತಿಭಟನೆ ನಡೆಸಿದ ತಳವಾರ ಸಮಾಜದ ಮುಖಂಡರು ಕಲ್ಯಾಣ ಮಂಟಪದ ಹೊರಗಡೆ ತಲೆ ಮೇಲೆ ಕಲ್ಲು ಹೊತ್ತು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಭೇಟಿ ನೀಡಿ ನಮ್ಮ ಬಹುವರ್ಷದ ಬೇಡಿಕೆಯನ್ನು ಈಡೇರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಸ್ಥಳಕ್ಕೆ ಭೇಟಿ ನೀಡಿದ ಸಿಂದಗಿ ತಾಲೂಕಿನ ಡಿವೈಎಸ್ ಪಿ ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು. ನಿಮ್ಮ ಮನವಿ ಪತ್ರ ನೀಡಿ, ಸಚಿವರಿಗೆ ತಲುಪಿಸುವುದಾಗಿ ಹೇಳಿದರೂ ಸಹ ಒಪ್ಪದ ಪ್ರತಿಭಟನಾಕಾರರು ಉರಿ ಬಿಸಿಲಿನಲ್ಲಿಯೇ ತಲೆಯ‌ ಮೇಲೆ ಕಲ್ಲು ಹೊತ್ತು ನಿಂತಿದ್ದರು. ಸರ್ಕಾರ ನಮ್ಮ ಬಹು ವರ್ಷದ ಬೇಡಿಕೆ ಈಡೇರಿಸದಿದ್ದರೆ, ಉತ್ತರ ಕರ್ನಾಟಕದಲ್ಲಿ ‌ನಮ್ಮ ಸಮಾಜದವರು ತಕ್ಕಪಾಠ ಕಲಿಸುತ್ತೇವೆ ಎಂದು ಎಚ್ಚರಿಕೆ ರವಾನಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.