ETV Bharat / state

ವಿಜಯಪುರದಲ್ಲಿ ಡಿಸಿಎಂ ಪುತ್ರ -ಶಾಸಕನ ನಡುವೆ ವಾಕ್ಸಮರ - ನಾಗಠಾಣ ಜೆಡಿಎಸ್ ಶಾಸಕ ದೇವಾನಂದ ಚವ್ಹಾಣ

ಕ್ಷೇತ್ರದ ಅಭಿವೃದ್ಧಿ ಕುರಿತು ನಾಗಠಾಣ ಶಾಸಕ ಚವ್ಹಾಣ ಮಾಡಿದ ಆರೋಪಕ್ಕೆ ಡಿಸಿಎಂ ಗೋವಿಂದ ಕಾರಜೋಳ ಪುತ್ರ ಗೋಪಾಲ ಕಾರಜೋಳ ತಿರುಗೇಟು ನೀಡಿದ್ದಾರೆ.

Vijapur
ವಿಜಪುರದಲ್ಲಿ ಡಿಸಿಎಂ ಪುತ್ರ ಹಾಗೂ ಶಾಸಕನ ನಡುವೆ ವಾಗ್ಸಮರ
author img

By

Published : Mar 9, 2020, 2:53 PM IST

ವಿಜಯಪುರ: ನನ್ನ ಮತ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ದಿ ಕಾಮಗಾರಿಯ ಹಣವನ್ನ ತಡೆ ಹಿಡಿಯಲಾಗಿದೆ. ಇದರಲ್ಲಿ ಡಿಸಿಎಂ ಕಾರಜೋಳ ಕೈವಾಡವಿದೆ ಎಂದು ನಾಗಠಾಣ ಜೆಡಿಎಸ್ ಶಾಸಕ ದೇವಾನಂದ ಚವ್ಹಾಣ ಆರೋಪಿಸಿದ್ದಾರೆ.

ವಿಜಪುರದಲ್ಲಿ ಡಿಸಿಎಂ ಪುತ್ರ ಹಾಗೂ ಶಾಸಕನ ನಡುವೆ ವಾಗ್ಸಮರ

ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರ ಮಗ ನನ್ನ ವಿರುದ್ದ ಚುನಾವಣೆಯಲ್ಲಿ ನಿಂತು ಸೋತಿದ್ದಾರೆ. ಹೀಗಾಗಿ‌ ಕಾರಜೋಳ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಇದು ನೀವು ಮತಕ್ಷೇತ್ರದ ಜನತೆಗೆ ಮಾಡುತ್ತಿರುವ ಹಿಂಸೆಯಾಗಿದೆ. ದ್ವೇಷದ ರಾಜಕಾರಣ ಮಾಡುವುದನ್ನ ಬಿಜೆಪಿ ಬಿಡಬೇಕು ಎಂದರು. ಇಂದು ಕೇಂದ್ರ ಹಾಗೂ ರಾಜ್ಯದಲ್ಲಿ ಎರಡೂ ಕಡೆ ಬಿಜೆಪಿ ಸರ್ಕಾರ ಆಡಳಿತದಲ್ಲಿದೆ. ರಾಮ ರಾಜ್ಯ ಆಗುತ್ತದೆ ಎಂದು ರಾಜ್ಯದ ಜನತೆ ಕನಸು ಕಂಡಿದ್ದರು. ಆದರೆ, ಬಿಜೆಪಿಗರು ಅದನ್ನು ರಾವಣ ರಾಜ್ಯ ಮಾಡಲು ಹೊರಟಿದ್ದಾರೆ ಎಂದು ಲೇವಡಿ ಮಾಡಿದರು.

ಎಂ.ಬಿ.ಪಾಟೀಲ್ ನೀರಾವರಿ ಸಚಿವರಾಗಿದ್ದಾಗ ಪಕ್ಷಬೇಧ ಮರೆತು ಜಿಲ್ಲೆಯಲ್ಲಿ ಸಾಕಷ್ಟು ಹಸಿರು ಕ್ರಾಂತಿ ಮಾಡಿದ್ದರು. ಆದರೆ, ಡಿಸಿಎಂ ಗೋವಿಂದ ಕಾರಜೋಳ‌ ಇದೇ ಜಿಲ್ಲೆಯವರು. ಅವರ ಚಿರಂಜೀವಿ ನನ್ನ ವಿರುದ್ದ ನಾಗಠಾಣ ಮತಕ್ಷೇತ್ರದಲ್ಲಿ ಚುನಾವಣೆಯಲ್ಲಿ ನಿಂತು ಸೋತಿದ್ದಾರೆ. ಆದರೆ, ಈಗ ನಾಗಠಾಣ ಮತಕ್ಷೇತ್ರದ ಕಾಮಗಾರಿಗಳಿಗೆ ತಡೆ ಹಿಡಿಯುವ ಕೆಲಸ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ನಿಮ್ಮ ಮಗನಿಗೂ 40-50 ಸಾವಿರ ಮತವನ್ನು ಕ್ಷೇತ್ರದ ಜನತೆ ಹಾಕಿದ್ದಾರೆ. ನಾಗಠಾಣ ಮತಕ್ಷೇತ್ರದಲ್ಲಿ ಕೇವಲ ಜೆಡಿಎಸ್​ನವರಿಲ್ಲ. ಅಭಿವದ್ಧಿ ವಿಚಾರದಲ್ಲಿ ರಾಜಕಾರಣ ಮಾಡುವುದನ್ನು ಬಿಡಬೇಕು ಎಂದ ಶಾಸಕ ದೇವಾನಂದ ಚವ್ಹಾಣ ಮನವಿ ಮಾಡಿದರು.

ಕಾರಜೋಳ ತಿರುಗೇಟು: ನಾಗಠಾಣ ಶಾಸಕ ಚವ್ಹಾಣ ಮಾಡಿದ ಆರೋಪಕ್ಕೆ ತಿರುಗೇಟು ನೀಡಿರುವ ಡಿಸಿಎಂ ಗೋವಿಂದ ಕಾರಜೋಳ ಪುತ್ರ ಗೋಪಾಲ ಕಾರಜೋಳ, ಶಾಸಕರ ಆರೋಪದಲ್ಲಿ ಹುರುಳಿಲ್ಲ ಎಂದಿದ್ದಾರೆ. ನಾನು ಅಭಿವೃದ್ದಿ ಕೆಲಸ ವಿಚಾರದಲ್ಲಿ ಯಾವುದೇ ಹಸ್ತ ಕ್ಷೇಪ ಮಾಡಿಲ್ಲ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ್ದಾರೆ.

ಶಾಸಕ ದೇವಾನಂದ ಚವ್ಹಾಣ ಸುಖಾ ಸುಮ್ಮನೆ‌ ಆರೋಪ ಮಾಡುತ್ತಿದ್ದಾರೆ. ಯಾವ ಮಂತ್ರಿಗಳ ಬಳಿ ಹೋಗಿ ಇವರು ಅನುದಾನ ಬಿಡುಗಡೆ ಮಾಡಿ ಎಂದು ಪತ್ರ ಕೊಟ್ಟಿದ್ದಾರಾ...? ಎಂದು ಮತಕ್ಷೇತ್ರದ ಜನತೆಗೆ ಉತ್ತರಿಸಲಿ ಎಂದು ಸವಾಲು ಹಾಕಿದ್ದಾರೆ. ನಾವೇ ಮತಕ್ಷೇತ್ರದಲ್ಲಿ ಅನುದಾನ ಬಿಡುಗಡೆ ಮಾಡಿ ಎಂದು ಪತ್ರ ಬರೆದಿದ್ದೇವೆ. ಇವರು ಯಾರಿಗೆ ಪತ್ರ ಬರೆದಿದ್ದಾರೆ ಮೊದಲು ತೊರಿಸಲಿ ಎಂದರು. ಇವರು ಯಾವುದೇ ಪ್ರಯತ್ನ ಮಾಡುತ್ತಿಲ್ಲ. ವಿರೋಧ ಪಕ್ಷದಲ್ಲಿದ್ದ ಕಾರಣ ಸುಖಾ ಸುಮ್ಮನೇ ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಅವರ ಆಡಳಿತ ಇದ್ದ ಸಮಯದಲ್ಲಿ ಕಾಮಗಾರಿ ಯಾಕೆ ಪೂರ್ಣ ಗೊಳಿಸಲಿಲ್ಲ. ಚಡಚಣ ರಸ್ತೆ ಕಾಮಗಾರಿ ಒಂದು ತಡೆ ಹಿಡಿದದ್ದನ್ನು ಪದೆ ಪದೇ ಹೇಳುತ್ತಾರೆ. ರಾಜ್ಯದಲ್ಲಿ ನೆರೆ ಬಂದಾಗ ಸರ್ಕಾರ ಎಲ್ಲ ಮತಕ್ಷೇತ್ರದ ಅನುದಾನ ಆಗ ವಾಪಸ್ ಪಡೆಯಿತು. ಆ ಕಾಮಗಾರಿಗೆ ಹಣ ಬಿಡುಗಡೆ ಮಾಡಿ ಎಂದು ಸ್ವತಃ ಡಿಸಿಎಂ ಕಾರಜೋಳ ಅವರೇ ಪತ್ರ ಬರೆದಿದ್ದಾರೆ. ಈ ರೀತಿಯ ಸುಳ್ಳು ಆರೋಪ ಮಾಡುವುದನ್ನು ಶಾಸಕ ದೇವಾನಂದ ಚವ್ಹಾಣ ಬಿಡಬೇಕು ಎಂದ ಗೋಪಾಲ ಕಾರಜೋಳ ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.