ETV Bharat / state

ಸಂಡೇ ಲಾಕ್‌ಡೌನ್​ ತೆರವು.. ಗುಮ್ಮಟನಗರಿಯಲ್ಲಿ ಜನ ಜೀವನ ಸಹಜ ಸ್ಥಿತಿ

author img

By

Published : Aug 2, 2020, 3:14 PM IST

ಕೊರೊನಾ ನಿಯಂತ್ರಣಕ್ಕಾಗಿ ಕಳೆದ ಮೂರು ಭಾನುವಾರಗಳಿಂದ ಸರ್ಕಾರ ಸಂಡೇ ಲಾಕ್‌ಡೌನ್ ಜಾರಿ ಮಾಡಿ ಸಾರ್ವಜನಿಕರ ಓಡಾಟಕ್ಕೆ ಬ್ರೇಕ್ ಹಾಕಿತ್ತು. ಇದರಿಂದ ವೀಕೆಂಡ್ ಮಸ್ತಿಗಾಗಿ ಕಾಯುತ್ತಿದ್ದ ಜನರು ಮನೆಯಲ್ಲೇ ಕಾಲ ಕಳೆಯುವಂತಾಗಿತ್ತು..

Sunday Lockdown relief: Vijayapura returned to same state
ಸಂಡೇ ಲಾಕ್‌ಡೌನ್​ ತೆರವು: ಮತ್ತೆ ಸಹಜ ಸ್ಥಿತಿಗೆ ಮರಳಿದ ಗುಮ್ಮಟನರಿ

ವಿಜಯಪುರ : ರಾಜ್ಯ ಸರ್ಕಾರ ಭಾನುವಾರದ ಲಾಕ್‌ಡೌನ್​ ತೆರವುಗೊಳಿಸುತ್ತಿದ್ದಂತೆ ಗುಮ್ಮಟನರಿ ಮತ್ತೆ ಸಹಜ ಸ್ಥಿತಿಗೆ ಮರಳಿದಂತಾಗಿದೆ. ನಗರದ ಬಹುತೇಕ ರಸ್ತೆಗಳಲ್ಲಿ ಆಟೋ, ಬೈಕ್ ಸೇರಿದಂತೆ ವಾಹನ ಓಡಾಟ ಜೋರಾಗಿದ್ದು, ಅಂಗಡಿ-ಮುಂಗಟ್ಟುಗಳು ತೆರೆದು ವ್ಯಾಪಾರ, ವಹಿವಾಟು ಸಾಗಿದೆ.

ಸಂಡೇ ಲಾಕ್‌ಡೌನ್​ ತೆರವು.. ಮತ್ತೆ ಸಹಜ ಸ್ಥಿತಿಗೆ ಮರಳಿದ ಗುಮ್ಮಟನಗರಿ

ಕೊರೊನಾ ನಿಯಂತ್ರಣಕ್ಕಾಗಿ ಕಳೆದ ಮೂರು ಭಾನುವಾರಗಳಿಂದ ಸರ್ಕಾರ ಸಂಡೇ ಲಾಕ್‌ಡೌನ್ ಜಾರಿ ಮಾಡಿ ಸಾರ್ವಜನಿಕರ ಓಡಾಟಕ್ಕೆ ಬ್ರೇಕ್ ಹಾಕಿತ್ತು. ಇದರಿಂದ ವೀಕೆಂಡ್ ಮಸ್ತಿಗಾಗಿ ಕಾಯುತ್ತಿದ್ದ ಜನರು ಮನೆಯಲ್ಲೇ ಕಾಲ ಕಳೆಯುವಂತಾಗಿತ್ತು. ‌ಇತ್ತ ಲಾಕ್‌ಡೌನ್ ತೆರವು ಮಾಡಿದ ಬಳಿಕ ಗುಮ್ಮಟನಗರಿ ಸಹಜ ಸ್ಥಿತಿಗೆ ಮರಳಿದ್ದು, ಎಲ್ಲಾ ಅಂಗಡಿ- ಮುಂಗಟ್ಟುಗಳು ತೆರೆದಿವೆ. ಇನ್ನೂ ಜನರು ಕೂಡ ಅಗತ್ಯ ಸಾಮಗ್ರಿಗಳ ಖರೀದಿಗೆಂದು ರಸ್ತೆಗಿಳಿಯುತ್ತಿದ್ದಾರೆ.

ಇತ್ತ ಸಂಡೇ ಲಾಕ್‌ಡೌನ್‌ನಿಂದಾಗಿ ಬೀದಿ ವ್ಯಾಪಾರಿಗಳು ಕೂಡ ನಷ್ಟ ಅನುಭವಿಸುವಂತಾಗಿತ್ತು. ಆದರೆ, ತರಕಾರಿ, ಹಣ್ಣು ಸೇರಿದಂತೆ ಇತರೆ ರಸ್ತೆ ಬದಿ ವ್ಯಾಪಾರಿಗಳು ವ್ಯಾಪಾರ, ವಹಿವಾಟಿನಲ್ಲಿ ತೊಡಗುವಂತಾಗಿದೆ. ಎಲ್‌ಬಿಎಸ್‌ ಮಾರುಕಟ್ಟೆ, ಸಿದ್ದೇಶ್ವರ ಮಂದಿರ ರಸ್ತೆ ಸೇರಿ ಹಲವು ಪ್ರದೇಶಗಳಲ್ಲಿ ಜನರು ಮುಖಕ್ಕೆ ಮಾಸ್ಕ್ ಧರಿಸದೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಓಡಾಡುತ್ತಿದ್ದ ದೃಶ್ಯ ಕಂಡು ಬಂತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.