ETV Bharat / state

ಯುವತಿ ವಿಚಾರ: ಮಾಜಿ ಪ್ರಿಯಕರನ ಮೇಲೆ ಮಾರಣಾಂತಿಕ ಹಲ್ಲೆ, ಹಾಲಿ ಪ್ರಿಯಕರನ ಬಂಧನ - ASSAULT ON EX BOYFRIEND

ತನ್ನ ಮೊಬೈಲ್​, ಪರ್ಸ್​​​ ಹಿಂದಿರುಗಿಸುವಂತೆ ಕೇಳಿದ ಮಾಜಿ ಪ್ರಿಯಕರನ ಮೇಲೆ ಹಾಲಿ ಪ್ರಿಯಕರ ಮಾರಣಾಂತಿಕ ಹಲ್ಲೆ ಮಾಡಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

BENGALURU  ಮಾರಣಾಂತಿ ಹಲ್ಲೆ  FATALLY ASSAULTING  LOVERS FIGHT
ಯುವತಿ ವಿಚಾರ: ಮಾಜಿ ಪ್ರಿಯಕರನ ಮೇಲೆ ಮಾರಣಾಂತಿ ಹಲ್ಲೆ; ಹಾಲಿ ಪ್ರಿಯಕರನ ಬಂಧನ (ETV Bharat)
author img

By ETV Bharat Karnataka Team

Published : Jan 25, 2025, 10:31 AM IST

ಬೆಂಗಳೂರು: ಯುವತಿಗಾಗಿ ಆಕೆಯ ಮೊದಲ ಬಾಯ್​​ ಫ್ರೆಂಡ್​ ಮೇಲೆ ಮಾರಣಾಂತಿಕವಾಗಿ ಹಲ್ಲೆಗೈದಿದ್ದ ಆರೋಪಿಯನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನೇಪಾಳ ಮೂಲದ ಬಿಕಾಸ್ ಕುಮಾರ್​ ಬಂಧಿತ ಆರೋಪಿ. ಯುವತಿಯ ಮಾಜಿ ಪ್ರಿಯಕರ ನೇಪಾಳ ಮೂಲದ ಯುವಕ ಲೋಕೇಶ್​​ ಎಂಬಾತನ ಮೇಲೆ ನಡುರಸ್ತೆಯಲ್ಲಿ ಬಿಕಾಸ್​ ಕುಮಾರ್​​ ಹಲ್ಲೆಗೈದಿದ್ದ ಎಂದು ವರದಿಯಾಗಿದೆ.

ಹಲ್ಲೆಗೊಳಗಾದ ನೇಪಾಳ ಮೂಲದ ಲೋಕೇಶ್ ಹಾಗೂ ಯವತಿ ಪರಸ್ಪರ ಪ್ರೀತಿಸುತ್ತಿದ್ದು, ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡು ಲಿವ್ ಇನ್ ರಿಲೇಶನ್ ಶಿಪ್​ನಲ್ಲಿದ್ದರು. ಯುವತಿ ಮಾತ್ರವಲ್ಲದೆ ಆಕೆಯ ಕುಟುಂಬವನ್ನೂ ಸಹ ತನ್ನ ಆದಾಯದಿಂದಲೇ ಪೋಷಿಸುತ್ತಿದ್ದ ಲೋಕೇಶ್, ನಂತರ ಆಕೆಯನ್ನು ಮದುವೆಯಾಗಲು ಬಯಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಈ ನಡುವೆ ಇಬ್ಬರ ನಡುವೆ ಬಿಕಾಸ್ ಕುಮಾರ್ ಎಂಬ ನೇಪಾಳ ಮೂಲದ ಮತ್ತೋರ್ವ ಯುವಕ ಎಂಟ್ರಿಯಾಗಿದ್ದ. ಲೋಕೇಶ್‌ನನ್ನು ತೊರೆದ ಯುವತಿ ಬಿಕಾಸ್​​ ಕುಮಾರ್​​ ಜೊತೆ ಓಡಾಡಲಾರಂಭಿಸಿದ್ದಳು. ಹೋಗುವಾಗ ಲೋಕೇಶ್‌ನ ಪರ್ಸ್, ಮೊಬೈಲ್ ಫೋನ್‌ನ್ನು ತಾನೇ ಕೊಂಡೊಯ್ದಿದ್ದಳು. ಪ್ರೇಯಸಿಯ ನಿರ್ಧಾರದಿಂದ ನೊಂದಿದ್ದ ಲೋಕೇಶ್ ತನ್ನ ಬಳಿಯಿಂದ ತೆಗೆದುಕೊಂಡು ಹೋಗಿದ್ದ ಮೊಬೈಲ್​ ಫೋನ್​ಅನ್ನು ವಾಪಸ್​ ಕೇಳಿದ್ದ ತಿಳಿದುಬಂದಿದೆ.

ಜನವರಿ 14ರಂದು ಮೊಬೈಲ್​ ಹಿಂದಿರುಗಿಸುವುದಾಗಿ ಹೇಳಿದ್ದ ಯುವತಿ, ಲೋಕೇಶ್​ನನ್ನು ಜಕ್ಕೂರು ಬಳಿ ಕರೆಸಿಕೊಂಡಿದ್ದಳು. ಈ ವೇಳೆ ಆರೋಪಿ ಬಿಕಾಸ್​ ಕುಮಾರ್​ ಸ್ಕ್ರೂ ಡ್ರೈವರ್‌ನಿಂದ ಲೋಕೇಶ್‌ನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ. ಗಾಯಗೊಂಡ ಲೋಕೇಶ್​ ಚಿಕಿತ್ಸೆ ಪಡೆದುಕೊಂಡ ಬಳಿಕ ಅಮೃತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.

ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡ ಅಮೃತಹಳ್ಳಿ ಠಾಣೆ ಪೊಲೀಸರು ಬಿಕಾಸ್ ಕುಮಾರ್‌ನನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಹಾವೇರಿಯಲ್ಲಿ ಕಿರಾಣಿ ಅಂಗಡಿ ಮಾಲೀಕ ಆತ್ಮಹತ್ಯೆ: ಮೈಕ್ರೋ ಫೈನಾನ್ಸ್​ ಕಿರುಕುಳ ಆರೋಪ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.