ETV Bharat / state

ಉಪ ಚುನಾವಣೆ : ಸಿಂದಗಿ‌ಯಲ್ಲಿ ಶೇ. 64.54ರಷ್ಟು ಮತದಾನ.. ಯಾವುದೇ ಅಹಿತಕರ ಘಟನೆ ನಡೆದಿಲ್ಲ..

ಚಾಂದಕವಠೆ, ಗಣಿಹಾರ, ಆಲಮೇಲ, ಯಂಕಂಚಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಮತದಾನ ಮಾಡಲು ಜನ ಸಾಲಿನಲ್ಲಿ ನಿಂತಿದ್ದರು. ಆದರೆ, ಸಿಂದಗಿ ಪಟ್ಟಣದಲ್ಲಿ ಮಾತ್ರ ಮತದಾನವಿದೆ ಎನ್ನುವ ವಾತಾವರಣವೇ ಇರಲಿಲ್ಲ. ಪಟ್ಟಣದಲ್ಲಿ ಮತದಾನಕ್ಕೆ ಅಷ್ಟಾಗಿ ಆಸಕ್ತಿ ತೋರಲಿಲ್ಲ..

ಸಿಂದಗಿ‌ ಕ್ಷೇತ್ರದಲ್ಲಿ ಶಾಂತಿಯುತ ಮತದಾನ
ಸಿಂದಗಿ‌ ಕ್ಷೇತ್ರದಲ್ಲಿ ಶಾಂತಿಯುತ ಮತದಾನ
author img

By

Published : Oct 30, 2021, 7:30 PM IST

ವಿಜಯಪುರ : ಮಾಜಿ ಸಚಿವ ಎಂ ಸಿ ಮನಗೂಳಿ ಅವರ ನಿಧನದಿಂದ ತೆರವಾಗಿದ್ದ ಸಿಂದಗಿ ವಿಧಾನಸಭೆಗೆ ಇಂದು ನಡೆದ ಉಪಚುನಾವಣೆ ಮತದಾನ ಬಹುತೇಕ ಶಾಂತಿಯುತವಾಗಿ ನಡೆದಿದೆ. ಸಂಜೆ 6 ಗಂಟೆಯವರೆಗೆ ಶೇ. 64.54ರಷ್ಟು ಮತದಾನ ನಡೆದಿದೆ.‌

ಬೆಳಗ್ಗೆ 7 ಗಂಟೆಯಿಂದಲೇ ಆರಂಭವಾದ ಮತದಾನ ಬೆಳಗ್ಗೆ 11ಗಂಟೆ ವೇಳೆಗೆ ಬಿರುಸು ಪಡೆದುಕೊಂಡಿತು. ಬೆಳಗ್ಗೆ 9 ಗಂಟೆಯ ವೇಳೆ ಶೇ. 8.0ರಷ್ಟು ಮತದಾನವಾಗಿತ್ತು.

11ಗಂಟೆ ವೇಳೆಗೆ ಶೇ. 26.75ರಷ್ಟು ಮಧ್ಯಾಹ್ನ 1 ಗಂಟೆಗೆ 32.49 ಮತದಾನವಾಗಿದ್ರೆ, 3 ಗಂಟೆ ವೇಳೆಗೆ 51.60ರಷ್ಟು ಹಾಗೂ ಸಂಜೆ 6 ಗಂಟೆ ವೇಳೆಗೆ ಶೇ. 64.54ರಷ್ಟು ಮತದಾನವಾಗಿದೆ.

ಸಿಂದಗಿ‌ ಕ್ಷೇತ್ರದಲ್ಲಿ ಶಾಂತಿಯುತ ಮತದಾನ

ಪಟ್ಟಣದಲ್ಲಿ ನೀರಸ, ಗ್ರಾಮಗಳಲ್ಲಿ ಜೋರು : ಸಿಂದಗಿ ಮತಕ್ಷೇತ್ರದ ಗ್ರಾಮಗಳಾದ ಚಾಂದಕವಠೆ, ಗಣಿಹಾರ, ಆಲಮೇಲ, ಯಂಕಂಚಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಮತದಾನ ಮಾಡಲು ಜನ ಸಾಲಿನಲ್ಲಿ ನಿಂತಿದ್ದರು. ಆದರೆ, ಸಿಂದಗಿ ಪಟ್ಟಣದಲ್ಲಿ ಮಾತ್ರ ಮತದಾನವಿದೆ ಎನ್ನುವ ವಾತಾವರಣವೇ ಇರಲಿಲ್ಲ. ಪಟ್ಟಣದಲ್ಲಿ ಮತದಾನಕ್ಕೆ ಅಷ್ಟಾಗಿ ಆಸಕ್ತಿ ತೋರಲಿಲ್ಲ. ತಾಲೂಕಿನಾದ್ಯಂತ ಒಟ್ಟು 271 ಮತಗಟ್ಟೆ ಸ್ಥಾಪಿಸಲಾಗಿತ್ತು.

ಅಭ್ಯರ್ಥಿಗಳ ಮತದಾನ : ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ದೇವಣಗಾಂವ, ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ ಗಣಿಹಾರ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಸಿಂದಗಿ ಪಟ್ಟಣದಲ್ಲಿ ತಮ್ಮ ಹಕ್ಕು ಚಲಾಯಿಸಿದರು. ಇದರ ಜತೆ ಜೆಡಿಎಸ್‌ನ ನಾಗಠಾಣ ಶಾಸಕ ದೇವಾನಂದ ಚೌಹಾಣ್ ದಂಪತಿ ಮತ ಚಲಾಯಿಸಿದರು.‌

ಮತದಾರ ವಶಕ್ಕೆ : ಗಣಿಹಾರ ಗ್ರಾಮದ ಕನ್ನಡ ಗಂಡು ಮಕ್ಕಳ ಶಾಲೆಯ ಮತಗಟ್ಟೆ135ರಲ್ಲಿ ಮತದಾರನೊಬ್ಬ ತಾನು‌ ಜೆಡಿಎಸ್‌ಗೆ ಮತ ಚಲಾಯಿಸುವುದನ್ನು ವಿಡಿಯೋ ಮಾಡಿಕೊಂಡು ಅದನ್ನು ಬೇರ ಕಡೆಗೆ ಶೇರ್ ಮಾಡಿದ್ದ ಹಿನ್ನೆಲೆ ಆತನನ್ನು ಪೊಲೀಸರು ವಶಕ್ಕೆ ಪಡೆದು ಕೊಂಡಿದ್ದಾರೆ.

ವೃದ್ಧರಿಂದ ಮತದಾನ : ಸಿಂದಗಿ ಮತಕ್ಷೇತ್ರದ ಚಾಂದಕವಡೆ ಗ್ರಾಮದ ಮತಗಟ್ಟೆ ನಂ. 142ರಲ್ಲಿ 90ವರ್ಷದ ವೃದ್ಧೆ ಗುರುಬಾಯಿ ಉಡುಚಣ, ಕುರಬತಹಳ್ಳಿಯ ಮತಗಟ್ಟೆಯಲ್ಲಿ 78 ವರ್ಷದ ವೃದ್ಧ ಅಪ್ಪಾಸಾಹೇಬ್ ಬಿರಾದಾರ ಸೇರಿ ಹಲವರು ಮತದಾನ ಮಾಡಿದರು.

ಆಲಮೇಲದಲ್ಲಿ ವಿಕಲಚೇತನೆ ಬಸಮ್ಮ ಶಾಬಾದಿ ವ್ಹೀಲ್ ಚೇರನಲ್ಲಿ ಬಂದು ತಮ್ಮ ಹಕ್ಕು ಚಲಾಯಿಸಿದರು. ಇದರ ಜತೆ ಬಾಲ್ಯಾಳ, ಬಂಕಲಗಿಯಲ್ಲಿ ವೃದ್ಧರು ತಮ್ಮ ಕುಟುಂಬಸ್ಥರ ಸಹಾಯದಿಂದ ಬಂದು ಮತ ಚಲಾಯಿಸಿದರು.

ಮತ ಚೀಟಿಯಲ್ಲಿ ಅಭ್ಯರ್ಥಿ : ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಮತಯಾಚನೆಯ ಫೋಟೋ ಜತೆ, ಮತ ಚಲಾಯಿಸುವ ಮತದಾರರಿಗೆ ನೀಡುವ ಮತ ಚೀಟಿಯಲ್ಲಿ ಮುದ್ರೆಯಾಗಿದ್ದಕ್ಕೆ ಮತದಾರರು ಆಕ್ರೋಶ ವ್ಯಕ್ತಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.