ಮುದ್ದೇಬಿಹಾಳ: ಕೋವಿಡ್ ಎರಡನೇ ಅಲೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಶಾಮಿಯಾನ, ಮಂಟಪ, ಡೆಕೋರೇಟರ್ಸ್ ಹಾಗೂ ಫೋಟೋಗ್ರಾಫರ್ಸ್ಗಳಿಗೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಕುಂಟೋಜಿಯ ಫ್ಲವರ್ಸ್ & ಡೆಕೋರೇಟರ್ಸ್ ಮಾಲೀಕ ಸಿದ್ದು ಹೆಬ್ಬಾಳ ಒತ್ತಾಯಿಸಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, ಸದ್ಯ ಮದುವೆ, ಶುಭ ಸಮಾರಂಭ ಹಾಗೂ ರಾಜಕೀಯ ಸಮಾವೇಶಗಳು ಸ್ಥಗಿತಗೊಂಡಿವೆ. ಇದರಿಂದ ನಮ್ಮ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಕಳೆದ ಬಾರಿಯೂ ನಮಗೆ ಪರಿಹಾರ ಸಿಗಲಿಲ್ಲ. ಈ ಬಾರಿಯಾದರೂ ಸರ್ಕಾರ ನಮ್ಮ ಕುಟುಂಬಗಳ ನೆರವಿಗೆ ಬರಬೇಕು ಎಂದು ಆಗ್ರಹಿಸಿದರು.
ಆರ್ಥಿಕ ಸಂಕಷ್ಷದ ಸುಳಿಗೆ ಸಿಲುಕಿರುವ ಕಾರ್ಮಿಕರು, ಮಾಲೀಕರಿಗೆ ಆರ್ಥಿಕ ಪ್ಯಾಕೇಜ್ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.