ಮುದ್ದೇಬಿಹಾಳ (ವಿಜಯಪುರ): ಬಂಗಾರಪೇಟೆ ತಹಶೀಲ್ದಾರ್ ಹತ್ಯೆ ಖಂಡಿಸಿ ಕಂದಾಯ ಇಲಾಖೆ ನೌಕರರ ಸಂಘ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳ ಸಂಘ ಮುದ್ದೇಬಿಹಾಳ ವತಿಯಿಂದ ತಹಶೀಲ್ದಾರ್ ಮೂಲಕ ಸಿಎಂಗೆ ಮನವಿ ಪತ್ರ ಸಲ್ಲಿಸಲಾಯಿತು.
ಗ್ರಾಮ ಲೆಕ್ಕಾಧಿಕಾರಿ ರಿಯಾಜ್ ನಾಯ್ಕೋಡಿ ಮಾತನಾಡಿ, ತಾಲೂಕಿನ ಒಬ್ಬ ದಂಡಾಧಿಕಾರಿಯ ಹತ್ಯೆಯಾಗುತ್ತದೆ ಎಂದರೆ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಹತ್ಯೆ ಮಾಡಿದ ವ್ಯಕ್ತಿ ನಿವೃತ್ತ ಶಿಕ್ಷಕನಾಗಿದ್ದನೋ ಅಥವಾ ಬೇರೆ ಇನ್ನೇನಾಗಿದ್ದಾನೋ ಗೊತ್ತಿಲ್ಲ. ಕೂಡಲೇ ಆತನನ್ನು ಬಂಧಿಸಿ ಕಠಿಣ ಕ್ರಮ ಜರುಗಿಸಬೇಕು. ಹತ್ಯೆಯಾದ ತಹಶೀಲ್ದಾರ್ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ತಹಶೀಲ್ದಾರ್ ಜಿ.ಎಸ್.ಮಳಗಿ ಮನವಿ ಪತ್ರ ಸ್ವೀಕರಿಸಿದರು. ಪಟ್ಟಣದ ತಹಶೀಲ್ದಾರ್ ಕಚೇರಿಗೆ ಆಗಮಿಸಿದ ತಾಲೂಕು ಕಂದಾಯ ನೌಕರರ ಸಂಘದ ಪದಾಧಿಕಾರಿಗಳು, ಈ ಹತ್ಯೆಯನ್ನು ತೀವ್ರವಾಗಿ ಖಂಡಿಸಿದರು.