ವಿಜಯಪುರ: ಪರಿವಾರ ಮತ್ತು ತಳವಾರ ಸಮುದಾಯಗಳಿಗೆ ಎಸ್‌ಟಿ ಪ್ರಮಾಣಪತ್ರ ವಿತರಿಸುವಂತೆ ಒತ್ತಾಯಿಸಿ ಜಿಲ್ಲಾ ತಳವಾರ ಮತ್ತು ಪರಿವಾರ ಸೇವಾ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಗೇಟ್ ಮುಂಭಾಗದಲ್ಲಿ ಧರಣಿ ನಡೆಸಿದ ಪ್ರತಿಭಟನಾಕಾರರು, ರಾಜ್ಯ ಸರ್ಕಾರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪರಿವಾರ ಹಾಗೂ ತಳವಾರ ಸಮುದಾಯಗಳು ಎಸ್‌ಟಿ ಸೇರಲು ದಶಕದ ಕಾಲ ಹೋರಾಟ ನಡೆಸಿ, ಎಸ್‌ಟಿ ಪಟ್ಟಿಗೆ ಸೇರಿದ್ರು. ಇಂದಿನ ಬಿಜೆಪಿ ಸರ್ಕಾರ ಅಧಿಕೃತವಾಗಿ ಜಾರಿ ಮಾಡಿದೆ. ಜನಪ್ರತಿನಿಧಿಗಳ ಒಳ ಪಿತೂರಿಯಿಂದ ಫಲಾನುಭವಿಗಳಿಗೆ ಜಾತಿ ಪ್ರಮಾಣಪತ್ರ ನೀಡಲು ಹಿಂದೇಟು ಹಾಕಲಾಗುತ್ತಿದೆ. ಕಳೆದ ಹಲವು ದಿನಗಳಿಂದ ತಳವಾರ ಹಾಗೂ ಪರಿವಾರ ಸಮುದಾಯಗಳಿಗೆ ಪ್ರಮಾಣಪತ್ರ ನೀಡುವಂತೆ ರಾಜ್ಯಾದ್ಯಂತ ಹೋರಾಟ ನಡೆಸಿದ್ರು. ಸಂಬಂಧಿಸಿದ ಇಲಾಖೆ ಸಚಿವರು ಮಾತ್ರ ಕ್ಯಾರೆ ಎನ್ನುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಎಸ್‌ಟಿ ಪ್ರಮಾಣಪತ್ರ ವಿತರಣೆಯಿಂದ ತಳವಾರ ಹಾಗೂ ಪರಿವಾರ ಸಮುದಾಯಗಳ ಬಡ ವಿದ್ಯಾರ್ಥಿಗಳಿಗೆ ಶೈಕಣಿಕವಾಗಿ ಸಹಾಯಕವಾಗುತ್ತಿದೆ. ಜನರಿಗೆ ಸರ್ಕಾರಿ ಸೌಲಭ್ಯ ಪಡೆಯಲು ಸಹಾಕವಾಗಿದ್ದು, ತಕ್ಷಣವೇ ಸರ್ಕಾರ ಪ್ರಮಾಣ ಪತ್ರ ವಿತರಣೆಗೆ ಮುಂದಾಗುವಂತೆ ಒತ್ತಾಯಿಸಿದರು.