ETV Bharat / state

ಮುದ್ದೇಬಿಹಾಳದಲ್ಲಿ 20ಕ್ಕೂ ಹೆಚ್ಚು ಮಂದಿ ಮೇಲೆ ಹುಚ್ಚುನಾಯಿ ದಾಳಿ.. ರೊಚ್ಚಿಗೆದ್ದ ಜನ ಹೊಡೆದುಕೊಂದ್ರು - ಬೀದಿ ನಾಯಿಗಳಿಗೆ ರೋಗನಿರೋಧಕ ಚುಚ್ಚುಮದ್ದು

ಮುದ್ದೇಬಿಹಾಳ ಪಟ್ಟಣದ ಪುರಸಭೆಯ ವ್ಯಾಪ್ತಿಯಲ್ಲಿ ಭಾನುವಾರ 20ಕ್ಕೂ ಹೆಚ್ಚು ಜನರಿಗೆ ಹುಚ್ಚು ನಾಯಿ ಕಡಿದಿದೆ.

ಹುಚ್ಚು ನಾಯಿ ದಾಳಿ ನಡೆಸಿರುವುದು
ಹುಚ್ಚು ನಾಯಿ ದಾಳಿ ನಡೆಸಿರುವುದು
author img

By

Published : Feb 19, 2023, 8:51 PM IST

ಮುದ್ದೇಬಿಹಾಳ(ವಿಜಯಪುರ) : ಹುಚ್ಚು ನಾಯಿಯೊಂದು ಕಂಡ ಕಂಡವರ ಮೇಲೆ ದಾಳಿ ಮಾಡಿ 20ಕ್ಕೂ ಹೆಚ್ಚು ಜನರಿಗೆ ಕಚ್ಚಿ ಗಾಯಗೊಳಿಸಿದ ಘಟನೆ ಪಟ್ಟಣದಲ್ಲಿ ಭಾನುವಾರ ನಡೆದಿದೆ. ಪಟ್ಟಣದ ಮಹಾಂತೇಶ ನಗರ, ಹುಡ್ಕೋ ಕಾಲೋನಿ, ಬಸ್ ನಿಲ್ದಾಣದ ಪ್ರದೇಶದಲ್ಲಿ ಈ ಹುಚ್ಚು ನಾಯಿ ತಿರುಗಾಡಿ ಸಿಕ್ಕವರ ಮೇಲೆ ದಾಳಿ ಮಾಡಿದೆ. ವಿಷಯ ತಿಳಿದ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಹುಚ್ಚು ನಾಯಿ ಓಡಾಡುತ್ತಿರುವ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಕೆಲವು ಯುವಕರು ಹುಚ್ಚುನಾಯಿಯನ್ನು ಕೊಲ್ಲಲು ಕಾರ್ಯಾಚರಣೆ ಆರಂಭಿಸಿದ್ದಾರೆ. ಕೊನೆಗೆ ಹುಡ್ಕೋ ಕಾಲೋನಿಯಲ್ಲಿ ಪಟ್ಟಣದ ನಿವಾಸಿ ಸಮೀರ್​ ಬಾಗವಾನ್​ ತಂಡದವರು ಹುಚ್ಚು ಹಿಡಿದ ನಾಯಿಯನ್ನು ಕೊಂದು ಹಾಕಿದ್ದಾರೆ.

ಅಷ್ಟರಲ್ಲಾಗಲೇ ಪುರಸಭೆ ಮಾಜಿ ಸದಸ್ಯ ಬಸವರಾಜ ನಂದಿಕೇಶ್ವರಮಠ, ಸದ್ದಾಂ ಹುಸೇನ್​ ನಾಗೂರ, ಈರಮ್ಮ ಹಿಪ್ಪರಗಿ, ಜಾಹೀದ್ ನದಾಫ, ಶಾಂತಾಬಾಯಿ ತಾರನಾಳ, ಮುಕುಂದ ಪವಾರ, ಸುರೇಶ ಮಾದರ, ಮುಕ್ತುಂಸಾಬ ಚೌಧರಿ, ನಿರ್ಮಲಾ ಬಿರಾದಾರ, ಭರತ ಈರಗಾರ, ಶರಣಬಸ್ಸು ಹಡಪದ, ಸುರೇಶ ಮಹಾಂತಗೌಡ, ಹಣಮಂತ ಮ್ಯಾಗೇರಿ, ಮಹೇಶ ಕೊಳ್ಳಿ, ಮಲ್ಲನಗೌಡ ಲೇಬಗೇರಿ, ಮಲ್ಲಿಕಾರ್ಜುನ ಲಮಾಣಿ, ಶಿಲ್ಪಾ ವಡ್ಡರ ಮೊದಲಾದವರಿಗೆ ಹುಚ್ಚು ನಾಯಿ ಕಚ್ಚಿ ಗಾಯಗೊಳಿಸಿದೆ. ಕೂಡಲೇ ಇವರೆಲ್ಲರೂ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಇನ್ನುಳಿದವರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ : ಬಲವಂತದ ಮತಾಂತರ: ಆರೋಪಿಗಳ ವಿರುದ್ಧದ ಪ್ರಕರಣ ರದ್ದು ಮಾಡಲು ಹೈಕೋರ್ಟ್ ನಿರಾಕರಣೆ

ಹುಚ್ಚು ನಾಯಿ ಓಡಾಡುತ್ತಿರುವ ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಪುರಸಭೆ ನಾಮನಿರ್ದೇಶಿತ ಸದಸ್ಯ ರಾಜಶೇಖರ ಹೊಳಿ, ಪ್ರಶಾಂತ ರಾಂಪೂರ, ಆರೋಗ್ಯ ಇಲಾಖೆಯ ಎಂ.ಎಸ್ ಗೌಡರ ಮೊದಲಾದವರು ಬಿತ್ತರಿಸಿ ಮನೆಯ ಹೊರಗಡೆ ಪುಟ್ಟ ಮಕ್ಕಳನ್ನು ಬಿಡದಂತೆ ಜಾಗೃತಿ ಮೂಡಿಸಿದರು.

ಬೀದಿ ನಾಯಿಗಳಿಗೆ ಚುಚ್ಚುಮದ್ದು ಹಾಕಲು ಒತ್ತಾಯ: ಮುದ್ದೇಬಿಹಾಳ ಪಟ್ಟಣದ ಪುರಸಭೆಯ ವ್ಯಾಪ್ತಿಯಲ್ಲಿ ಭಾನುವಾರ 20ಕ್ಕೂ ಹೆಚ್ಚು ಜನರಿಗೆ ಹುಚ್ಚು ನಾಯಿ ಕಡಿದಿದ್ದು, ಬೀದಿ ನಾಯಿಗಳಿಗೂ ಕಚ್ಚಿರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಪಶು ಸಂಗೋಪನಾ ಇಲಾಖೆಯವರು ಪುರಸಭೆಯವರು ಜಂಟಿಯಾಗಿ ಬೀದಿ ನಾಯಿಗಳಿಗೆ ಹುಚ್ಚುನಾಯಿ ಕಡಿತದಿಂದ ಹರಡುವ ರೋಗದ ನಿರೋಧಕ ಚುಚ್ಚುಮದ್ದು ನೀಡುವ ಕಾರ್ಯ ಮಾಡಬೇಕು ಎಂದು ಜನಸೇವಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜಿ ವಾಯ್ ದಫೇದಾರ ಹಾಗೂ ಹುಚ್ಚುನಾಯಿಯಿಂದ ಕಚ್ಚಿಸಿಕೊಂಡಿರುವ ಪುರಸಭೆ ಮಾಜಿ ಸದಸ್ಯ ಬಸವರಾಜ ನಂದಿಕೇಶ್ವರಮಠ ಆಗ್ರಹಿಸಿದ್ದಾರೆ.

ಇದನ್ನೂ ಓದಿ : ಮದ್ಯ ಸೇವೆನೆಗೆ ಹಣ ನೀಡುವಂತೆ ಪೀಡಿಸಿದ್ದಕ್ಕೆ ಕೊಲೆ - ಆರೋಪಿ ಬಂಧನ

ಪುರಸಭೆ ವ್ಯಾಪ್ತಿಯಲ್ಲಿ ಹುಚ್ಚು ನಾಯಿ ಕಡಿತದ ಸುದ್ದಿ ನಮಗೂ ಬಂದಿತ್ತು. ಅದನ್ನು ಕೊಲ್ಲಲು ಸಿಬ್ಬಂದಿಯನ್ನು ಕಳುಹಿಸಲಾಗಿತ್ತು. ಕೊನೆಗೆ ಹುಡ್ಕೋದ ಬಳಿ ಹುಚ್ಚುನಾಯಿ ಹೊಡೆದು ಸಾಯಿಸಿರುವ ಸುದ್ದಿ ಬಂದ ನಂತರ ಅದನ್ನು ವಿಲೇವಾರಿ ಮಾಡಲಾಗಿದೆ. ಬೀದಿ ನಾಯಿಗಳಿಗೆ ರೋಗನಿರೋಧಕ ಚುಚ್ಚುಮದ್ದು ನೀಡುವ ಬಗ್ಗೆ ಮೇಲಾಧಿಕಾರಿಗಳ ಸಲಹೆ ಪಡೆದುಕೊಂಡು ಮುಂದುವರೆಯುತ್ತೇವೆ ಎಂದರು.

ಇದನ್ನೂ ಓದಿ: ಹಳೇ ದ್ವೇಷಕ್ಕೆ ಹುಬ್ಬಳ್ಳಿಯಲ್ಲಿ ಹರಿಯಿತು ನೆತ್ತರು.. ಯುವಕನನ್ನು ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.