ವಿಜಯಪುರ: ಕೊರೊನಾ ಆತಂಕದ ನಡುವೆ ಹೊಟ್ಟೆ ಪಾಡಿಗಾಗಿ ಸಲೂನ್‌ಗಳಲ್ಲಿ ಕೆಲಸ ಮಾಡುವತ್ತಿರುವ ಕ್ಷೌರಿಕರಿಗೆ ಉಚಿತವಾಗಿ ಆರೋಗ್ಯ ರಕ್ಷಕ ಕಿಟ್ ನೀಡುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಜಿಲ್ಲೆಯಲ್ಲಿ ವಲಸೆ ಕಾರ್ಮಿಕರು ದಿನದಿಂದ ದಿನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಎರಡು ತಿಂಗಳ ಬಳಿಕ ಕ್ಷೌರಿಕರು ಅಂಗಡಿಗಳನ್ನ ಆರಂಭಿಸಿದ್ದಾರೆ. ನಿತ್ಯ ನೂರಾರು ಜನರು ಸಲೂನ್‌ಗಳಿಗೆ ಬಂದು ಕೂದಲು ಕಟ್ ಮಾಡಿಸಿಕೊಳ್ಳುವುದರಿಂದ ಜನರ ನೇರ ಸಂಪರ್ಕಕ್ಕೆ ಒಳಗಾಗಬೇಕಾಗುತ್ತದೆ. ಹೀಗಾಗಿ ಸೋಂಕು ಹರಡುವ ಭೀತಿ ಸಹ ಎದುರಾಗಿದೆ.
ಈ ಹಿನ್ನೆಲೆ ಕ್ಷೌರಿಕರಿಗೆ ಅಗತ್ಯ ವೈದ್ಯಕೀಯ ಕಿಟ್ ನೀಡುವಂತೆ ಮನವಿ ಮಾಡಲಾಗಿದೆ. ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವುದರಿಂದ ಕ್ಷೌರಿಕರಿಗೆ ಮೆಡಿಕಲ್ ಕಿಟ್ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.