ETV Bharat / state

ಸೀಮೆಎಣ್ಣೆ ಸುರಿದು ವ್ಯಕ್ತಿಯ ಬರ್ಬರ ಹತ್ಯೆ ಪ್ರಕರಣ: ಮೂವರ ಬಂಧನ

ಆಸ್ತಿ ವಿಚಾರವಾಗಿ ವ್ಯಕ್ತಿವೋರ್ವವನನ್ನು ಸಂಬಂಧಿಕರೇ ಸೇರಿ ಅಪಹರಿಸಿ, ಸೀಮೆಎಣ್ಣೆ ಸುರಿದು ಹತ್ಯೆಗೈದಿದ್ದ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುದ್ದೇಬಿಹಾಳ ತಾಲೂಕಲ್ಲಿ ಅವರ ಮೂವರು ಸೋದರ ಸಂಬಂಧಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Muddebihal
ಕೊಲೆ‌
author img

By

Published : Feb 13, 2021, 7:06 AM IST

ಮುದ್ದೇಬಿಹಾಳ(ವಿಜಯಪುರ): ಆಸ್ತಿ ವಿಚಾರವಾಗಿ ವ್ಯಕ್ತಿಯನ್ನು ಆತನ ಸಂಬಂಧಿಕರೇ ಅಪಹರಿಸಿ ಕೊಲೆ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳನ್ನು ಶಂಕರಗೌಡ, ಶಿಖರೇಶ್ವರ ಹಾಗೂ ಶಿವಸಂಗಪ್ಪ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪ್ರಕರಣದಲ್ಲಿ ಇನ್ನೂ ಮೂವರು ತಲೆಮರೆಸಿಕೊಂಡಿದ್ದು, ಅವರ ಪತ್ತೆಗೆ ಸಹ ಜಾಲ ಬೀಸಲಾಗಿದೆ.

ಘಟನೆ ವಿವರ:

ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಚೊಂಡಿ ಗ್ರಾಮದ ಬಸಣ್ಣ ಶಂಕರಪ್ಪ ಪಡೆಕನೂರ (55) ಎಂಬವರನ್ನು ಆತನ ಸೋದರ ಸಂಬಂಧಿಗಳು ಕೊಲೆ ಮಾಡಿದ್ದರು. ಆರೋಪಿಗಳು 10 ಎಕರೆ ಜಮೀನು ವಿಚಾರವಾಗಿ ಕಾರಿನಲ್ಲಿ ಅಪಹರಿಸಿ ರಾಯಚೂರು ಜಿಲ್ಲೆಯ ಲಿಂಗಸೂರು ತಾಲೂಕಿನ ಗೌಡೂರು ಬಳಿ ಸೀಮೆಎಣ್ಣೆ ಸುರಿದು ಸುಟ್ಟು ಹಾಕಿದ್ದರು. ಜ. 20ರಂದು ಬಸಣ್ಣನ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅದು ಯಾರ ಶವ ಎನ್ನುವುದು ಗೊತ್ತಾಗದಷ್ಟು ಶವ ಸುಟ್ಟು ಹೋಗಿತ್ತು. ಆದರೆ ಬಸಣ್ಣನ ಕೊರಳಲ್ಲಿದ್ದ ರುದ್ರಾಕ್ಷಿ ಮಣಿಯಿಂದ ಆತನ ಕುಟುಂಬದವರು ಬಸಣ್ಣ ಅವರ ಶವ ಪತ್ತೆ ಹಚ್ಚಿದ್ದರು.

ಈ ಸಂಬಂಧ ರಾಯಚೂರ ಜಿಲ್ಲೆಯ ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಆರಂಭಿಸಿದ ಪೊಲೀಸರು ಇದೊಂದು ಆಸ್ತಿ ವಿಚಾರವಾಗಿ ನಡೆದ ಘಟನೆ ಎಂದು ತಿಳಿದು ಬಂದಿತ್ತು. ಕೊಲೆಯಾದ ಬಸಣ್ಣ ಪಡೇಕನೂರ ಅವರ ಸೋದರ ಸಂಬಂಧಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿದಾಗ ಬಸಣ್ಣ ಕೊಲೆ ವಿಷಯವನ್ನು ಬಾಯ್ಬಿಟ್ಟಿದ್ದಾರೆ.

ಪ್ರಕರಣದ ಮೂವರು ಆರೋಪಿಗಳನ್ನು ಸೆರೆ ಹಿಡಿದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.