ಮುದ್ದೇಬಿಹಾಳ : ಜಪಾನ್ ಪ್ರಧಾನಮಂತ್ರಿಗಳ ಪ್ರತಿಷ್ಠಿತ ಏಷಿಯಾ ಕಾಕೇಹಾಶಿ ಶಿಷ್ಯವೇತನಕ್ಕೆ ಕರ್ನಾಟಕದಿಂದ ವಿಜಯಪುರ ಜಿಲ್ಲೆಯ ಗೌರಿ ಸಂಕೇತ ಬಗಲಿ ಎಂಬ ವಿದ್ಯಾರ್ಥಿನಿ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿನಿ ಗೌರಿ ಸದ್ಯಕ್ಕೆ ಕೊಲ್ಹಾಪುರದ ಸಂಜಯ ಘೋಡಾವತ್ ಶಾಲೆಯಲ್ಲಿ ಅಧ್ಯಯನ ಮಾಡುತ್ತಿದ್ದಾರೆ.
![ಗೌರಿ ಸಂಕೇತ ಬಗಲಿ](https://etvbharatimages.akamaized.net/etvbharat/prod-images/kn-muddebihal-1strankindai-13-1-kac10030_13102021172814_1310f_1634126294_390.jpg)
ಶಿಷ್ಯ ವೇತನಕ್ಕೆ ಆಯ್ಕೆ ಮಾಡಲು ಭಾರತದಾದ್ಯಂತ ಲಿಖಿತ ಹಾಗೂ ಮೌಖಿಕ ಪರೀಕ್ಷೆ ನಡಸಲಾಗುತ್ತಿದೆ. ಅದರಲ್ಲಿ ಸ್ಥಾನ ಪಡೆದಿರುವ 21 ವಿದ್ಯಾರ್ಥಿಗಳಲ್ಲಿ ಗೌರಿ ಬಗಲಿ ಇಡೀ ದೇಶಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿರುವುದು ಹೆಮ್ಮೆಯ ವಿಷಯ. ವಿದ್ಯಾರ್ಥಿನಿ ಗೌರಿ ಎಸ್‌ಜಿವಿಸಿ ವಿದ್ಯಾಪ್ರಸಾರಕ ಟ್ರಸ್ಟ್ನ ಸದಸ್ಯರಾದ ಸಂಕೇತ ಹಾಗೂ ಜಯಲಕ್ಷ್ಮಿ ಬಗಲಿ ಅವರ ಪುತ್ರಿ.
![ಜಪಾನ್ ಪ್ರಧಾನ ಮಂತ್ರಿಗಳ ಶಿಷ್ಯವೇತನಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ಪಟ್ಟಿ](https://etvbharatimages.akamaized.net/etvbharat/prod-images/kn-muddebihal-1strankindai-13-1-kac10030_13102021172814_1310f_1634126294_118.jpg)
ವಿದ್ಯಾರ್ಥಿನಿಯ ಸಾಧನೆಗೆ ಅವರ ಅಜ್ಜ ಮುದ್ದೇಬಿಹಾಳ ಎಸ್.ಜಿ.ವಿ.ಸಿ ವಿದ್ಯಾಪ್ರಸಾರಕ ಟ್ರಸ್ಟ್ ಅಧ್ಯಕ್ಷ ಸತೀಶ ಜಿಗಜಿನ್ನಿ, ಕಾರ್ಯದರ್ಶಿ ಅಶೋಕ ತಡಸದ, ಆಡಳಿತಾಧಿಕಾರಿ ಎ.ಬಿ.ಕುಲಕರ್ಣಿ, ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಎಸ್.ಎನ್.ಪೊಲೇಶಿ, ಪಪೂ ಕಾಲೇಜಿನ ಪ್ರಾಚಾರ್ಯ ಪ್ರೊ.ಐ.ಎಸ್.ತಳವಾರ, ಬಿ.ಎಡ್ ಕಾಲೇಜಿನ ಪ್ರಾಚಾರ್ಯ ಡಾ.ಆರ್.ಕೆ.ಕುಲಕರ್ಣಿ ವಿದ್ಯಾರ್ಥಿನಿಯ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.