ETV Bharat / state

ಮುದ್ದೇಬಿಹಾಳ: ಸ್ವಯಂ ಲಾಕ್‌ಡೌನ್‌ಗೆ ಅಂಗಡಿ ಮಾಲೀಕರಿಂದ ಉತ್ತಮ ಪ್ರತಿಕ್ರಿಯೆ - ಸ್ವಯಂ ಲಾಕ್‌ಡೌನ್‌ಗೆ ಅಂಗಡಿ ಮಾಲೀಕರಿಂದ ಉತ್ತಮ ಪ್ರತಿಕ್ರಿಯೆ

ಮುದ್ದೇಬಿಹಾಳ ಪಟ್ಟಣವನ್ನು 10 ದಿನಗಳ ಲಾಕ್​ಡೌನ್ ಮಾಡುತ್ತಾರೆ ಎಂಬ ಸುದ್ದಿ ಅರಿತ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಕೆಲ ಕಾಲ ವಾಹನ ದಟ್ಟಣೆ ಉಂಟಾಯಿತು.

Muddebihal
ಸ್ವಯಂ ಲಾಕ್‌ಡೌನ್‌ಗೆ ಅಂಗಡಿ ಮಾಲೀಕರಿಂದ ಉತ್ತಮ ಪ್ರತಿಕ್ರಿಯೆ
author img

By

Published : Jul 28, 2020, 8:44 AM IST

ಮುದ್ದೇಬಿಹಾಳ: ಕೊರೊನಾ ನಿಯಂತ್ರಣಕ್ಕೆ ಪಟ್ಟಣದ ವಿವಿಧ ವ್ಯಾಪಾರಸ್ಥರು ನಿನ್ನೆಯಿಂದ ಸ್ವಯಂ ಲಾಕ್‌ಡೌನ್ ಹೇರಿಕೊಂಡಿದ್ದಾರೆ. ವ್ಯಾಪಾರಸ್ಥರಿಂದ ಈ ನಿರ್ಣಯಕ್ಕೆ ಅಭೂತಪೂರ್ವ ಬೆಂಬಲವೂ ವ್ಯಕ್ತವಾಗಿದೆ.

ಲಾಕ್ ಡೌನ್ ಹಿನ್ನೆಲೆ: ಮುದ್ದೇಬಿಹಾಳ ಪಟ್ಟಣದಲ್ಲಿ ವಾಹನ ದಟ್ಟಣೆ

ಲಾಠಿ ಹಿಡಿದ ಪಿಎಸ್​ಐ: ಮುದ್ದೇಬಿಹಾಳ ಪಟ್ಟಣವನ್ನು 10 ದಿನಗಳ ಲಾಕ್​​ಡೌನ್ ಮಾಡುತ್ತಾರೆ ಎಂಬ ಸುದ್ದಿ ಅರಿತ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಟ್ಟಣಕ್ಕೆ ಆಗಮಿಸಿದ್ದರಿಂದ ವಾಹನ ದಟ್ಟಣೆ ಉಂಟಾಯಿತು. ಈ ವೇಳೆ, ಮುಖ್ಯರಸ್ತೆಯಲ್ಲಿ ಉಂಟಾದ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಸ್ವತಃ ಪಿಎಸ್​ಐ ಮಲ್ಲಪ್ಪ ಮಡ್ಡಿ ಲಾಠಿ ಹಿಡಿದು ನಿಂತು ಸಂಚಾರ ದಟ್ಟಣೆ ನಿಯಂತ್ರಿಸಿದರು.

Muddebihal
ಲಾಕ್ ಡೌನ್ ಹಿನ್ನೆಲೆ: ಮುದ್ದೇಬಿಹಾಳ ಪಟ್ಟಣದಲ್ಲಿ ವಾಹನ ದಟ್ಟಣೆ

ಪಟ್ಟಣದಲ್ಲಿ ಬೆಳಗ್ಗೆ 8 ರಿಂದ ಮದ್ಯಾಹ್ನ 2ಗಂಟೆಯವರೆಗೆ ಅರ್ಧ ದಿನ ಲಾಕ್‌ಡೌನ್ ವಿಧಿಸುವಂತೆ ನಿರ್ಧಾರ ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ವ್ಯಾಪಾರಸ್ಥರು ಬಹುತೇಕವಾಗಿ 2:30 ರವರೆಗೆ ವ್ಯಾಪಾರ ಮಾಡಿ ತಮ್ಮ ಅಂಗಡಿಗಳನ್ನು ಸ್ವಯಂ ಪ್ರೇರಿತರಾಗಿ ಬಂದ್ ಮಾಡಿದರು. ಬಟ್ಟೆ, ಕಿರಾಣಿ, ರೆಡಿಮೇಡ್, ಎಲೆಕ್ಟ್ರಾನಿಕ್ಸ್, ಚಿನ್ನಾಭರಣ, ಸ್ಟೇಷನರಿ, ಫೋಟೊ ಸ್ಟುಡಿಯೋ, ಪುಸ್ತಕದಂಗಡಿಗಳು, ಸೂಪರ್ ಮಾರ್ಕೆಟ್‌ಗಳು, ಹಾರ್ಡ್​​ವೇರ್ ಅಂಗಡಿಗಳು ಬಂದ್ ಆಗಿದ್ದವು. ಮೆಡಿಕಲ್ ಶಾಪ್​, ಗೊಬ್ಬರದ ಅಂಗಡಿಗಳು, ಹೋಟೆಲ್​, ತರಕಾರಿ, ಹಾಲು, ಬೇಕರಿ ಪದಾರ್ಥ, ಗ್ಯಾರೇಜ್, ಪಾನ್‌ಶಾಪ್ ,ಮದ್ಯದಂಗಡಿಗಳು, ಬೀದಿ ಬದಿಯ ಹಣ್ಣು, ತರಕಾರಿ ವ್ಯಾಪಾರ ಎಂದಿನಂತೆ ಚಾಲನೆಯಲ್ಲಿದ್ದವು.

ಅಂಗಡಿ ಬಂದ್ ಮಾಡಿಸಿದ ಮುಖಂಡರು: ಪಟ್ಟಣದ ಮುಖ್ಯರಸ್ತೆಯಲ್ಲಿ ಸಮಯ ಮಧ್ಯಾಹ್ನ 2:30 ಮೀರಿದ್ದರೂ ಇನ್ನೂ ಅಂಗಡಿ ಬಂದ್ ಮಾಡುವ ಸೂಚನೆ ಕಂಡು ಬರಲಿಲ್ಲ. ಇದನ್ನು ಅರಿತ ವಿವಿಧ ವ್ಯಾಪಾರಿ ಸಂಘಟನೆಯ ಮುಖಂಡರು, ನಿನ್ನೆ ಕೈಗೊಂಡ ನಿರ್ಣಯದಂತೆ ಸ್ವಯಂಪ್ರೇರಿತ ಬಂದ್ ಮಾಡುವಂತೆ ಅಂಗಡಿ ಮಾಲೀಕರಿಗೆ ತಿಳಿ ಹೇಳಿದರು. ಈ ವೇಳೆ ಅಂಗಡಿಯಲ್ಲಿ ಅಂದಾಜು 30ಕ್ಕೂ ಹೆಚ್ಚು ಜನ ಗುಂಪು ಗೂಡಿದವರು ದಿಢೀರ್ ಹೊರಗಡೆ ಓಡೋಡಿ ಬಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.