ETV Bharat / state

ಈಶ್ವರಪ್ಪಗೆ ಅಭಿಮಾನಿಯ ಫೇಸ್​​ಬುಕ್​​ ಪೋಸ್ಟ್​ ಮೂಲಕ ಶಾಸಕ ಯತ್ನಾಳ್​ ತಿರುಗೇಟು​

ಸಚಿವ ಕೆ.ಎಸ್.ಈಶ್ವರಪ್ಪ ಯತ್ನಾಳ್​ ಅವರನ್ನು ಪಕ್ಷದಿಂದ ಉಚ್ಛಾಟಿಸಬೇಕು ಎಂದು ಆಗ್ರಹಿಸಿದ್ದರು. ಈ ಹೇಳಿಕೆಗೆ ಖಾರವಾಗಿ ಫೇಸ್​​ಬುಕ್ ಮೂಲಕ ಯತ್ನಾಳ್​ ಬೆಂಬಲಿಗ ಎನ್ನಲಾದ ಅಂಕುಶ ವಸಿಷ್ಟ, ಈಶ್ವರಪ್ಪನವರೇ ಹರಕು ಬಾಯಿ ಯಾರದ್ದು ಅಂತ ನಮಗೆ ಚೆನ್ನಾಗಿ ಗೊತ್ತಿದೆ ಎಂದು ಟೀಕಿಸಿದ್ದಾರೆ.

author img

By

Published : Oct 22, 2020, 9:14 AM IST

Vijaypur
ಶಾಸಕ ಬಸನಗೌಡ ಪಾಟೀಲ ಯತ್ನಾಳ್

ವಿಜಯಪುರ: ಸಿಎಂ ಯಡಿಯೂರಪ್ಪ ವಿರುದ್ಧ ಫೇಸ್​​ಬುಕ್, ಟ್ವಿಟರ್ ಮೂಲಕ ತೀವ್ರ ಕಿಡಿಕಾರುತ್ತಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್​ ಈಗ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ತಮ್ಮ ಬೆಂಬಲಿಗರು ಮಾಡಿರುವ ಕಟು ಟೀಕೆಯ ಪೋಸ್ಟ್ ಟ್ಯಾಗ್​ ಮಾಡುವ ಮೂಲಕ ತಿರುಗೇಟು ನೀಡಿದ್ದಾರೆ.

Vijaypur
ಈಶ್ವರಪ್ಪ ವಿರುದ್ಧ ಫೇಸ್​​ಬುಕ್​ನಲ್ಲಿ ಟೀಕೆ​

ಶಾಸಕ ಬಸನಗೌಡ ಪಾಟೀಲ ಯತ್ನಾಳ್​ ಸಿಎಂ ಹಾಗೂ ಅವರ ಪುತ್ರ ವಿಜಯೇಂದ್ರ ವಿರುದ್ಧ ಮಾಡಿರುವ ಆರೋಪಕ್ಕೆ ನಿನ್ನೆ ಸಚಿವ ಕೆ.ಎಸ್.ಈಶ್ವರಪ್ಪ, ಯತ್ನಾಳ್​ ಅವರನ್ನು ಪಕ್ಷದಿಂದ ಉಚ್ಛಾಟಿಸಬೇಕು ಎಂದು ಆಗ್ರಹಿಸಿದ್ದರು. ಈ ಹೇಳಿಕೆಗೆ ಖಾರವಾಗಿ ಫೇಸ್​​ಬುಕ್ ಮೂಲಕ ಯತ್ನಾಳ್​ ಬೆಂಬಲಿಗ ಎನ್ನಲಾದ ಅಂಕುಶ ವಸಿಷ್ಟ, ಈಶ್ವರಪ್ಪನವರೇ ಹರಕು ಬಾಯಿ ಯಾರದ್ದು ಅಂತ ನಮಗೆ ಚೆನ್ನಾಗಿ ಗೊತ್ತಿದೆ. ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಛಾಟಿಸುವದಾದರೆ ನಿಮ್ಮನ್ನು ಏನು ಮಾಡಬೇಕು ಎಂದು ಪ್ರಶ್ನಿಸಿದ್ದಾರೆ.

Vijaypur
ಈಶ್ವರಪ್ಪ ವಿರುದ್ಧ ವಾಗ್ದಾಳಿ ಟೀಕೆ​

ಈ ಪೋಸ್ಟ್​​ಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್​ ತಮ್ಮ ಫೇಸ್​ಬುಕ್ ಅಕೌಂಟ್ ಮೂಲಕ ಟ್ಯಾಗ್ ಮಾಡಿದ್ದಾರೆ. ಇದರ ಜೊತೆ ಸಾಕಷ್ಟು ಲೈಕ್​​ಗಳು ಈ ಪೋಸ್ಟ್​​ಗಳಿಗೆ ಬಂದಿದ್ದು, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ ರೀತಿ ಕರ್ನಾಟಕದಲ್ಲಿ ಬಸನಗೌಡ ಪಾಟೀಲ ಯತ್ನಾಳ್​ ಆಗಬೇಕು. ಬಸನಗೌಡ ಪಾಟೀಲ ಯತ್ನಾಳ್​ ಇಲ್ಲವೇ ಅನಂತಕುಮಾರ ಹೆಗಡೆ ಇಬ್ಬರು ರಾಜ್ಯದ ಸಿಎಂ, ಗೃಹ ಸಚಿವರಾಗಬೇಕು ಎಂದು ಪೋಸ್ಟ್ ಮೂಲಕ ಆಗ್ರಹಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.