ETV Bharat / state

ಬೀದಿ ನಾಯಿಗಳ ಕಷ್ಟಕ್ಕೆ ಮಿಡಿದ ಮಾಜಿ ಸಚಿವರ ಮಗ... ಆಹಾರ ನೀಡಿ ಮಾನವೀಯತೆ ಮರೆದ ದೃವ ಪಾಟೀಲ್​ - ವಿಜಯಪುರ ಲೇಟೆಸ್ಟ್​ ನ್ಯೂಸ್

ವಿಜಯಪುರಲ್ಲಿ ಮಾಜಿ ಸಚಿವ ಎಂ.ಬಿ. ಪಾಟೀಲ್​ ಅವರ ಪುತ್ರ ದೃವ ಪಾಟೀಲ್, ನಗರದಲ್ಲಿರುವ ಬೀದಿ ನಾಯಿಗಳಿಗೆ ಆಹಾರ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

MLA Son given food to street dog at Vijayapura
ಬೀದಿ ನಾಯಿಗಳಿಗೆ ಆಹಾರ ನೀಡಿ ಮಾನವೀಯತೆ ಮರೆದ ಮಾಜಿ ಸಚಿವರ ಪುತ್ರ
author img

By

Published : Apr 23, 2020, 10:09 AM IST

Updated : Apr 23, 2020, 10:27 AM IST

ವಿಜಯಪುರ: ಲಾಕ್​ಡೌನ್​ನಿಂದ ಆಹಾರ ಸಿಗದೆ ಬಳಲುತ್ತಿದ್ದ ಬೀದಿ ನಾಯಿಗಳಿಗೆ, ಆಹಾರ ನೀಡುವ ಮೂಲಕ ಮಾಜಿ ಸಚಿವ ಎಂ.ಬಿ. ಪಾಟೀಲ್​ ಅವರ ಪುತ್ರ ದೃವ ಪಾಟೀಲ್​ ಮಾನವೀಯತೆ ಮೆರೆದಿದ್ದಾರೆ.

ಬೀದಿ ನಾಯಿಗಳ ಕಷ್ಟಕ್ಕೆ ಮಿಡಿದ ಮಾಜಿ ಸಚಿವರ ಮಗ

ರಾಜ್ಯಾದ್ಯಂತ ಕೊರೊನಾ ನಿಯಂತ್ರಣ ಮಾಡುವ ಉದ್ದೇಶದಿಂದ ಎಲ್ಲೆಡೆ ಲಾಕ್​ಡೌನ್​ ವಿಸ್ತರಿಸಲಾಗಿದೆ. ಇದರಿಂದ ಮೂಕ ಪ್ರಾಣಿಗಳು ಆಹಾರ ಸಿಗದೆ ಪರದಾಡುತ್ತಿವೆ. ಇದನ್ನರಿತ ಎಸ್​ಪಿಪಿಎ (ಸೊಸೈಟಿ ಫಾರ್ ಪ್ರೊಟೆಕ್ಸನ್ ಪ್ಲಾಂಟ್ಸ್ ಆ್ಯಂಡ್ ಎನಿಮಲ್ಸ್ ಫೌಂಡೇಷನ್ ) ಅಧ್ಯಕ್ಷ ಹಾಗೂ ಮಾಜಿ ಸಚಿವ ಎಂ.ಬಿ. ಪಾಟೀಲ್​ ಅವರ ಪುತ್ರ ದೃವ ಪಾಟೀಲ್,​ ನಗರದಲ್ಲಿರುವ ಬೀದಿ ನಾಯಿಗಳಿಗೆ ಆಹಾರ ಮತ್ತು ಬೇಯಿಸಿದ ಮೊಟ್ಟೆ ನೀಡಿದ್ದಾರೆ.

ಕಳೆದ ಕೆಲ ದಿನಗಳಿಂದ ಈ ಕಾರ್ಯವನ್ನು ನಡೆಸಿಕೊಂಡು ಬಂದಿದ್ದು, ಲಾಕ್​ಡೌನ್​ ಮುಗಿಯುವವರೆಗೂ ಇದನ್ನು ಮುಂದುವರೆಸಲು ನಿರ್ಧರಿಸಿದ್ದಾರೆ. ಇವರ ಎಸ್​ಪಿಪಿಎ ಸಂಸ್ಥೆ ಬೆಂಗಳೂರು, ಮೈಸೂರು, ಮಂಗಳೂರು, ದೆಹಲಿ, ಸಾಗರ, ಹುಬ್ಬಳ್ಳಿ, ಬೆಳಗಾವಿ, ಬಳ್ಳಾರಿ ಹಾಗೂ ಮುಂಬೈ ನಗರಗಳಲ್ಲಿ ಕಾರ್ಯ ನಿರ್ವಹಿಸಿದ್ದು, ಪ್ರತಿದಿನ ಬೀದಿ ನಾಯಿಗಳಿಗೆ ಆಹಾರ ನೀಡುವ ಕೆಲಸ ಮಾಡುತ್ತಿದೆ. ಇನ್ನು ಮಗನ ಕಾರ್ಯಕ್ಕೆ ಅವರ ತಂದೆ ಎಂ.ಬಿ. ಪಾಟೀಲ್​ ಕೂಡ ಸಾಥ್​​ ನೀಡಿದ್ದಾರೆ.

Last Updated : Apr 23, 2020, 10:27 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.