ETV Bharat / state

ಬಿಜೆಪಿ ನಾಯಕರ ಗುದ್ದಾಟಕ್ಕೆ ಕೇಂದ್ರ ನಾಯಕರು ಕ್ರಮ ಕೈಗೊಳ್ಳಲಿದ್ದಾರೆ: ಶಾಸಕ ಪಿ ರಾಜೀವ್​ - ಬಿಜೆಪಿ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ

ಯತ್ನಾಳ್​ ಮತ್ತು ನಿರಾಣಿ ಗುದ್ದಾಟಕ್ಕೆ ಕೇಂದ್ರ ನಾಯಕರ ಕ್ರಮ - ಬಿಜೆಪಿ ಶಿಸ್ತಿನ ಪಕ್ಷ - ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತನೆ - ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ

mla-p-rajiv-reaction-on-yatnal-and-nirani-talk-war
ಬಿಜೆಪಿ ನಾಯಕರ ಗುದ್ದಾಟಕ್ಕೆ ಕೇಂದ್ರ ನಾಯಕರು ಕ್ರಮ ಕೈಗೊಳ್ಳಲಿದ್ದಾರೆ : ಶಾಸಕ ಪಿ ರಾಜೀವ
author img

By

Published : Jan 16, 2023, 5:14 PM IST

ಬಿಜೆಪಿ ನಾಯಕರ ಗುದ್ದಾಟಕ್ಕೆ ಕೇಂದ್ರ ನಾಯಕರು ಕ್ರಮ ಕೈಗೊಳ್ಳಲಿದ್ದಾರೆ : ಶಾಸಕ ಪಿ ರಾಜೀವ

ವಿಜಯಪುರ : ಕೇಂದ್ರ ಮಾಜಿ ಸಚಿವ ಹಾಗೂ ಹಾಲಿ ರಾಜ್ಯ ಸಚಿವರ ಮಧ್ಯೆ ನಡೆಯುತ್ತಿರುವ ವಾಗ್ವಾದವನ್ನು ಬಿಜೆಪಿ ಹೈಕಮಾಂಡ್​ ಗಮನಿಸುತ್ತಿದೆ. ಈ ಸಂಬಂಧ ಹೈಕಮಾಂಡ್​ ಶಿಸ್ತಿನ ಕ್ರಮ ಕೈಗೊಳ್ಳಲಿದೆ ಎಂದು ಕುಡಚಿ ಬಿಜೆಪಿ ಶಾಸಕ ಪಿ.ರಾಜೀವ್​ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಹಾಗೂ ಸಚಿವ ಮುರುಗೇಶ ನಿರಾಣಿ ನಡುವೆ ನಡೆಯುತ್ತಿರುವ ಆರೋಪ ಹಾಗೂ ಪ್ರತ್ಯಾರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಶಿಸ್ತಿನ ಪಕ್ಷವಾಗಿದೆ. ನಾಯಕರ ಮುಸುಕಿನ ಗುದ್ದಾಟವನ್ನು ಕೇಂದ್ರದ ನಾಯಕರು ಗಮನಿಸುತ್ತಿದ್ದಾರೆ.‌ ಅವರ ಮೇಲೆ ಯಾವ ರೀತಿ‌ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ನಮ್ಮ ರಾಷ್ಟ್ರೀಯ ನಾಯಕರು ನಿರ್ಧಾರ ಮಾಡುತ್ತಾರೆ ಎಂದು ಹೇಳಿದರು.

ಇವರ ಗುದ್ದಾಟವನ್ನು ಕೇಂದ್ರ ನಾಯಕರು ಗಂಭೀರವಾಗಿ ಪರಿಗಣಿಸಿದ್ದಾರೆ. ನಮ್ಮ ಪಕ್ಷದಲ್ಲಿ ನಡೆಯುವ ಆಂತರಿಕ‌ ಚಟುವಟಿಕೆಗಳನ್ನು ಬಹಿರಂಗ ಪಡಿಸಲು ಆಗುವುದಿಲ್ಲ. ಬಾಹ್ಯವಾಗಿ ಅವರು ಏನೇ ಮಾತನಾಡಿದರೂ ಅದು‌ ಕೇಂದ್ರ ನಾಯಕರಿಗೆ ತಲುಪುತ್ತದೆ. ಶೀಘ್ರ ಅವರಿಬ್ಬರ ನಡುವಿನ ವೈಮನಸ್ಸು ಶಮನಗೊಳಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಂದಾಯ ಗ್ರಾಮಗಳಾಗಿ ಪರಿವರ್ತನೆ : ರಾಜ್ಯದ 1 ಸಾವಿರಕ್ಕೂ ಹೆಚ್ಚು ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತನೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಇದರ ಮೊದಲು ಹಂತವಾಗಿ ನಾಳೆ ಗುಲ್ಬರ್ಗಾ ಜಿಲ್ಲೆಯ ಸೇಡಂನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಲಂಬಾಣಿ‌ ಕುಟುಂಬಗಳಿಗೆ ಪ್ರಧಾನಿ ನರೇಂದ್ರ ಮೋದಿ ಹಕ್ಕು‌ಪತ್ರ ವಿತರಣೆ ಮಾಡಲಿದ್ದಾರೆ ಎಂದು ಲಂಬಾಣಿ ತಾಂಡಾ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪಿ.ರಾಜೀವ ಹೇಳಿದರು.

ಕೇಂದ್ರ ಸರ್ಕಾರವು ಸ್ವಾಮಿತ್ವ ಯೋಜನೆ ಜಾರಿಗೆ ತಂದಿದ್ದರಿಂದ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಕಂದಾಯ ಗ್ರಾಮಗಳನ್ನು ಘೋಷಣೆ ಮಾಡಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗಿದೆ. ಈ ಸಂಬಂಧ ಕಂದಾಯ ಸಚಿವರು ಅಧಿಕಾರಿಗಳೊಂದಿಗೆ ಮೇಲಿಂದ ಮೇಲೆ ಸಭೆ ನಡೆಸಿ ಪರಿಶೀಲನೆ ನಡೆಸಿರುವುದರಿಂದ ಇವತ್ತು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಹಕ್ಕು ಪತ್ರಗಳನ್ನು ಕೊಡಲು ಸಾಧ್ಯವಾಗಿದೆ ಎಂದು ಹೇಳಿದರು.

ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ : ಮೊದಲು ಹಂತದಲ್ಲಿ 50 ಸಾವಿರ‌ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ ಮಾಡಲಾಗುವುದು. ಇದರಲ್ಲಿ ಗುಲಬುರ್ಗಾ, ರಾಯಚೂರು, ಯಾದಗಿರಿ, ಬೀದರ್​ ಹಾಗೂ ವಿಜಯಪುರ ಜಿಲ್ಲೆಯ ಗಡಿಭಾಗದ ಕೆಲ ಗ್ರಾಮಗಳ ಕುಟುಂಬದ ಪತಿ ಹಾಗೂ ಪತ್ನಿಗೆ ಹಕ್ಕು ಪತ್ರ ವಿತರಿಸಲಾಗುವುದು ಎಂದು ಹೇಳಿದರು. ಒಟ್ಟು ಮೊದಲು ಹಂತದಲ್ಲಿ 1ಲಕ್ಷ ಜನರಿಗೆ ಹಕ್ಕು ಪತ್ರ ವಿತರಿಸುತ್ತಿರುವುದು ಐತಿಹಾಸಿಕ ಘಳಿಗೆಯಾಗಲಿದೆ. ಅಲ್ಲದೇ ಇದು ಸದ್ಯ ಗಿನ್ನಿಸ್ ರಿಕಾರ್ಡ್ ಗೆ ಸೇರಲಿದೆ. ಹಿಂದೆಂದೂ ಇಷ್ಟು ದೊಡ್ಡ ಪ್ರಮಾಣದಲ್ಲಿ‌ ಒಂದೇ ವೇದಿಕೆಯಲ್ಲಿ ಹಕ್ಕುಪತ್ರವಾಗಲಿ, ಬೇರೆ‌ ಕಾರ್ಯದ ಚಟುವಟಿಕೆಯಾಗಲಿ ಆಗಿರಲಿಲ್ಲ. ಇದೇ ಮೊದಲು ಬಾರಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಹಕ್ಕು ಪತ್ರ ವಿತರಣೆ ಮಾಡಲಾಗುತ್ತಿದೆ. ಈ ವೇದಿಕೆ ಗಿನ್ನಿಸ್ ದಾಖಲೆಗೆ ಸೇರಿಕೊಳ್ಳಲಿದೆ ಎಂದರು.

ಮುಂದಿನ ಹಂತದಲ್ಲಿ ವಿಜಯಪುರ, ಬಾಗಲಕೋಟೆ, ಗದಗದ ಲಂಬಾಣಿ ತಾಂಡಾ ಸೇರಿ ರಾಜ್ಯದ ಎಲ್ಲ 1ಸಾವಿರ ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಲಾಗುವುದು ಎಂದು ಇದೇ ವೇಳೆ ಹೇಳಿದರು.

ಇದನ್ನೂ ಓದಿ : ಯತ್ನಾಳ್ ವಿರುದ್ಧ ಸೂಕ್ತ ಸಮಯದಲ್ಲಿ ಕ್ರಮ : ಸಚಿವ ಅಶ್ವತ್ಥನಾರಾಯಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.