ಮುದ್ದೇಬಿಹಾಳ (ವಿಜಯಪುರ) : ಮುದ್ದೇಬಿಹಾಳ ಹಾಗೂ ತಾಳಿಕೋಟೆ ಪಟ್ಟಣದ ಕೆಲವು ಪ್ರದೇಶಗಳಲ್ಲಿ ಕೊರೊನಾ ವೈರಸ್ ಕಂಡು ಬಂದಿದೆ. ಈ ಹಿನ್ನೆಲೆ ತುರ್ತು ಪರಿಸ್ಥಿತಿ ಹೊರತುಪಡಿಸಿ ಎರಡೂ ಪಟ್ಟಣಗಳ ಜನತೆ ದೊಡ್ಡ ನಗರಗಳಿಗೆ ಪ್ರವಾಸ ಕೈಗೊಳ್ಳುವುದನ್ನು ಮುಂದೂಡಿ ಎಂದು ಶಾಸಕ ಎ ಎಸ್ ಪಾಟೀಲ್ ನಡಹಳ್ಳಿ ಸಲಹೆ ನೀಡಿದರು.
ನಗರದಲ್ಲಿ ಮಾತನಾಡಿದ ಅವರು, ಕಳೆದ ಒಂದು ವಾರದಲ್ಲಿ ತೀವ್ರಗತಿಯಲ್ಲಿ ರಾಜ್ಯದಲ್ಲಿ ಹಬ್ಬುತ್ತಿದೆ. ತಾಳಿಕೋಟೆ ಮತ್ತು ಮುದ್ದೇಬಿಹಾಳ ಪಟ್ಟಣದಲ್ಲಿಯೂ ಹೆಚ್ಚಿಗೆ ಕಾಣಿಸಿಕೊಳ್ಳುತ್ತಿದೆ. ಈ ವೈರಸ್ ತಡೆಗೆ ಸಾರ್ವಜನಿಕರು ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವುದು ಅಗತ್ಯ ಎಂದರು.
ಹೈದರಾಬಾದ್, ಮುಂಬೈ, ಬೆಂಗಳೂರು ಮತ್ತು ಜಿಲ್ಲಾ ನಗರ ಕೇಂದ್ರಗಳಿಗೆ ಪ್ರಯಾಣ ರದ್ದುಪಡಿಸಿರಿ. ದೊಡ್ಡ ನಗರಗಳಿಗೆ ಪ್ರಯಾಣ ಬೆಳೆಸುವುದರಿಂದ ಸೋಂಕು ತಗುಲಿ, ಹಳ್ಳಿಗಳಿಗೂ ಹಬ್ಬುವ ಪರಿಸ್ಥಿತಿ ನಿರ್ಮಾಣವಾಗಬಹುದು. ವ್ಯಾಪಾರಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಹಾಗೆಯೇ ಗ್ರಾಹಕರಿಗೂ ಇದು ಅನ್ವಯವಾಗುತ್ತದೆ. ಗ್ರಾಹಕರು ಬಂದಾಗ ಸ್ಯಾನಿಟೈಸರ್ ನೀಡಬೇಕು ಎಂದು ಹೇಳಿದರು.
ತಾಳಿಕೋಟೆ ಪಟ್ಟಣದ ರಾಜವಾಡೆಯ 22ನೇ ವಾರ್ಡ್ನಲ್ಲಿ ಎಸ್ಎಫ್ಸಿ ಯೋಜನೆಯಡಿ ₹11 ಲಕ್ಷ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿರುವ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಶಾಸಕರು ಇಂದು (ಜುಲೈ 11ರಂದು) ಭೂಮಿಪೂಜೆ ನೆರವೇರಿಸಿದರು.