ವಿಜಯಪುರ: ಆಸ್ತಿ ಕಲಹ ಹಿನ್ನೆಲೆಯಲ್ಲಿ ಇಬ್ಬರು ಬರ್ಬರವಾಗಿ ಕೊಲೆಯಾಗಿರುವ ಘಟನೆ ಸಿಂದಗಿ ತಾಲೂಕಿನ ಚಾಂದಕವಟೆ ಗ್ರಾಮದ ತೋಟದ ಮನೆಯಲ್ಲಿ ಕಳೆದ ರಾತ್ರಿ ನಡೆದಿದೆ.
ಪರಮಾನಂದ ಬೊಜಪ್ಪ ದರಿಕಾರ ಹಾಗೂ ಆತನ ಸ್ನೇಹಿತ ಅಶೊಕ ಗುರಪ್ಪ ಬಿರಾದಾರ ಹತ್ಯೆಗೀಡಾದವರು. ಆಸ್ತಿ ಕಲಹಕ್ಕಾಗಿ ಕೊಲೆ ನಡೆದಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ತೋಟದ ಮನೆಯಲ್ಲಿ ಇದ್ದಾಗ ಅಣ್ಣ ತಮ್ಮಂದಿರೆಂದು ತಿಳಿದು ಪರಮಾನಂದ ಹಾಗೂ ಆತನ ಸ್ನಹಿತ ಅಶೋಕನ್ನು ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿದ್ದಾರೆ.
ಅಶೊಕ ಹಾಗೂ ಪರಮಾನಂದ ಇಬ್ಬರು ಸ್ನೆಹಿತರಾಗಿದ್ದರು. ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.