ವಿಜಯಪುರ: ಡಿಸೆಂಬರ್ 29ರಂದು ಕಿತ್ತೂರು ರಾಣಿ ಚೆನ್ನಮ್ಮ ಅವರ 196ನೇ ಜಯಂತ್ಯುತ್ಸವ ಹಾಗೂ ಜಿಲ್ಲಾ ಮಹಿಳಾ ಯುವ ಘಟಕ ಪದಗ್ರಹಣ ಸಮಾರಂಭ ನಡೆಯಲಿದೆ.
ಕೂಡಲ ಸಂಗಮದ ಪಂಚಮಸಾಲಿ ಪೀಠಾಧ್ಯಕ್ಷ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಅವರು ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ನಗರದ ಸಿದ್ಧೇಶ್ವರ ಮಂದಿರದಿಂದ ಅಂದು ಬೆಳಗ್ಗೆ 9ಗಂಟೆಗೆ ಚೆನ್ನಮ್ಮನ ಭಾವಚಿತ್ರ ಮೆರವಣಿಗೆ ಹಾಗೂ ವಿಶೇಷ ಮಹಿಳೆಯಿಂದ ಬುತ್ತಿ ಮೇಳ ಮೆರವಣಿಗೆ ಮಾಡಲಾಗುವುದು ಎಂದರು.
ಮೆರವಣಿಗೆ ಬಳಿಕ ನಗರದ ವೀರರಾಣಿ ಕಿತ್ತೂರು ಚೆನ್ನಮ್ಮ ಸಮುದಾಯ ಭವನದಲ್ಲಿ ಲಿಂ. ಬಿ ಎಸ್ ಪಾಟೀಲ ಮನಗೂಳಿ ಹಾಗೂ ಲಿಂ. ಜೆ ಎಸ್ ದೇಶಮುಖ ನಾಲತವಾಡ ಅವರ ಸ್ಮರಣಾರ್ಥ ಪಂಚಮಸಾಲಿ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜರುಗಲಿದೆ. ಈ ಸಮಾರಂಭದಲ್ಲಿ ಮಠಾಧೀಶರು ಸೇರಿ ಜನಪ್ರತಿನಿಧಿಗಳು ಭಾಗಿವಹಿಸಲಿದ್ದಾರೆ ಎಂದರು.