ವಿಜಯಪುರ : ಪೂರ್ವ ಲಡಾಖ್‌ನ ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ಭಾರತೀಯ ಯೋಧರ ಮೇಲಿನ ಚೀನಾ ದಾಳಿಯನ್ನ ಖಂಡಿಸಿ ಕರ್ನಾಟಕ ಕ್ಷತ್ರಿಯ ಒಕ್ಕೂಟ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಸಿದ್ದೇಶ್ವರ ಮಂದಿರದ ಮುಂಭಾಗದಲ್ಲಿ ಪ್ರತಿಭಟಿಸಿದ ಕಾರ್ಯಕರ್ತರು, ವಿಶ್ವಕ್ಕೆ ಕೊರೊನಾ ಆತಂಕ ಹುಟ್ಟಿಸಿದ ಚೀನಾವನ್ನ ಎಲ್ಲಾ ರಾಷ್ಟ್ರಗಳು ತಿರಸ್ಕರಿಸುತ್ತಿವೆ. ಆದರೂ ಸಹ ಚೀನಾ, ಕಾಲು ಕೆರೆದು ಭಾರತದೊಂದಿಗೆ ಸಂಘರ್ಷಕ್ಕೆ ಮುಂದಾಗಿದೆ. ಹೀಗಾಗಿ ಚೀನಾಗೆ ತಕ್ಕ ಪಾಠ ಕಲಿಸಬೇಕು. ಆಗ ಮಾತ್ರ ನಮ್ಮ ಸೈನಿಕರ ಆತ್ಮಕ್ಕೆ ಶಾಂತಿ ಸಿಗಲು ಸಾಧ್ಯ ಎಂದರು.
ಚೀನಾದಿಂದ ಆಮದು ಮಾಡಿಕೊಳ್ಳುವ ಎಲ್ಲ ವಸ್ತುಗಳನ್ನ ದೇಶದಲ್ಲಿ ನಿಷೇಧ ಹೇರಬೇಕು ಹಾಗೂ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ ಸಿಬಿಐಗೆ ವಹಿಸಬೇಕು ಎಂದು ಆಗ್ರಿಸಿದರು.