ETV Bharat / state

ದಿಂಗಾಲೇಶ್ವರ ಶ್ರೀಗಳಿಗೆ ಬಿಎಸ್​​ವೈ ಪರ ಮಾತನಾಡಿದ್ದಕ್ಕೆ ವಿಜಯೇಂದ್ರ ಎಷ್ಟು ಕಮೀಷನ್​​ ನೀಡಿದ್ದಾರೆ?: ಯತ್ನಾಳ್ - ವಿಜಯಪುರದಲ್ಲಿ ಮಾತನಾಡಿದ ಬಸನಗೌಡ ಪಾಟೀಲ ಯತ್ನಾಳ

ಸುಮ್ಮನೆ ಕಾವಿ ಹಾಕಿಕೊಂಡ್ರೆ, ನಾವು ಗೌರವ ಕೊಡುತ್ತೇವೆ ಎಂದು ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ. ಡಿಕೆಶಿ ಮನೆಗೆ ಹೋಗಿ ಮುಂದಿನ ಸಿಎಂ ನೀವೇ ಎಂದು ಆಶೀರ್ವಾದ ಮಾಡುತ್ತೀರಿ? ಅವರಿಗೆ ಸೂರ್ಯ, ಚಂದ್ರ ಎಂದಲ್ಲ ಹೇಳುತ್ತೀರಿ? ಅದರ ಬದಲು ಮಠದಲ್ಲಿ ಕುಳಿತು ಒಳ್ಳೆಯ ಕೆಲಸ ಮಾಡಲಿ ಎಂದರು..

MLA Basanagowda Patiala Yatnala, speaking against Dingaleswara Sri
ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ
author img

By

Published : Apr 19, 2022, 3:18 PM IST

ವಿಜಯಪುರ : ಮಠಗಳಿಗೆ ಅನುದಾನ ನೀಡಲು ಶೇ.30ರಷ್ಟು ಕಮೀಷನ್‌ ಪಡೆಯಲಾಗುತ್ತಿದೆ ಎಂದು ದಿಂಗಾಲೇಶ್ವರ ಶ್ರೀಗಳು ಗಂಭೀರ ಆರೋಪ ಮಾಡಿದ್ದರು. ಇದಕ್ಕೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಅವರು ಶ್ರೀಗಳು ಯಾರಿಗೆ ಕೊಟ್ಟರು? ಎಲ್ಲಿ ಕೊಟ್ಟರು? ಇದಕ್ಕೆ ಸಾಕ್ಷಿ ಏನು ಎಂದು ಪ್ರಶ್ನಿಸಿದರು.

ವಿಜಯಪುರದಲ್ಲಿ ಮಾತನಾಡಿದ ಅವರು, ಒಬ್ಬ ಸ್ವಾಮೀಜಿ ಇದ್ದವರು ಸಾಕ್ಷಿ ಸಮೇತ ಮಾತನಾಡಬೇಕು. ಸತ್ಯ, ಧರ್ಮ, ನ್ಯಾಯ-ನೀತಿ ಬಗ್ಗೆ ಪ್ರವಚನ ಮಾಡುತ್ತಾರೆ. ಮೊದಲು ಶೇ. 30ರಷ್ಟು ಯಾರಿಗೆ ಕೊಟ್ಟಿದ್ದಾರೆ, ಅದನ್ನು ನೀವ್ಯಾಕೆ ನೀಡಿದ್ರಿ ಎಂದು ಪ್ರಶ್ನಿಸಿದರು. ಮಠದಲ್ಲಿ ಕುಳಿತು ಒಳ್ಳೆಯ ವಿಚಾರ ಹೇಳುವುದು ಬಿಟ್ಟು ವಿಜಯೇಂದ್ರನಿಂದ ಹಣ ತೆಗೆದುಕೊಂಡು, ಯಡಿಯೂರಪ್ಪನವರನ್ನು ಸಿಎಂ ಸ್ಥಾನದಿಂದ ಇಳಿಸಿದರೆ ಬಿಜೆಪಿ ಸರ್ವನಾಶವಾಗುತ್ತದೆ ಎಂದು ಹೇಳಿದ್ದೀರಿ. ಆಗ ವಿಜಯೇಂದ್ರ ಎಷ್ಟು ಪರ್ಸೆಂಟೇಜ್ ಕೊಟ್ಟಿದ್ದರು ಎಂದು ಪ್ರಶ್ನಿಸಿದರು.

ದಿಂಗಾಲೇಶ್ವರ ಸ್ವಾಮೀಜಿ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಆಕ್ರೋಶ ವ್ಯಕ್ತಪಡಿಸಿರುವುದು..

ಇದಕ್ಜೆ ಸ್ವಾಮೀಜಿ ಉತ್ತರ ನೀಡಬೇಕು. ಸುಮ್ಮನೆ ಕಾವಿ ಹಾಕಿಕೊಂಡ್ರೆ, ನಾವು ಗೌರವ ಕೊಡುತ್ತೇವೆ ಎಂದು ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ. ಡಿಕೆಶಿ ಮನೆಗೆ ಹೋಗಿ ಮುಂದಿನ ಸಿಎಂ ನೀವೇ ಎಂದು ಆಶೀರ್ವಾದ ಮಾಡುತ್ತೀರಿ? ಅವರಿಗೆ ಸೂರ್ಯ, ಚಂದ್ರ ಎಂದಲ್ಲ ಹೇಳುತ್ತೀರಿ? ಅದರ ಬದಲು ಮಠದಲ್ಲಿ ಕುಳಿತು ಒಳ್ಳೆಯ ಕೆಲಸ ಮಾಡಲಿ ಎಂದರು.

ಇದನ್ನೂ ಓದಿ: ಹುಬ್ಬಳ್ಳಿ ಗಲಭೆ ಪ್ರಕರಣ..104 ಮಂದಿ ಆರೋಪಿಗಳ ಬಂಧನ ಕುರಿತು ಪೊಲೀಸ್​ ಕಮಿಷನರ್​ ಮಾಹಿತಿ

ಪಿಎಸ್​​ಐ ಹುದ್ದೆ ಅಕ್ರಮ : 545 ಪಿಎಸ್​​ಐ ಹುದ್ದೆಗಳ ನೇಮಕಾತಿಯಲ್ಲಿ ನಡೆದಿರುವ ಅಕ್ರಮ ಬಗ್ಗೆ ಸರ್ಕಾರ ಸಿಐಡಿ ತನಿಖೆ ನಡೆಸುತ್ತಿದೆ. ಪ್ರಧಾನಿ ಹೇಳಿದಂತೆ ಯಾರೇ ತಪ್ಪು ಮಾಡಿದರೂ ಅವರ ಮೇಲೆ ಕ್ರಮಕೈಗೊಳ್ಳಲಾಗುತ್ತದೆ. ಇದರಲ್ಲಿ ಪಕ್ಷಬೇಧವಿಲ್ಲ ಎಂದು ಶಾಸಕ ಯತ್ನಾಳ್‌ ಹೇಳಿದರು. ಇದರಲ್ಲಿ ಬಿಜೆಪಿಯವರು ಇದ್ದರೂ ಅವರ ಮೇಲೆ ತನಿಖೆ ನಡೆಯಲಿದೆ ಎಂದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.