ವಿಜಯಪುರ: ಮಹಿಳೆ ಸಾವಿಗೆ ಕಾರಣವಾದ ತಾಲೂಕು ಕಲ್ಯಾಣಾಧಿಕಾರಿಯನ್ನು ಕರ್ತವ್ಯದಿಂದ ವಜಾಗೊಳಿಸುವಂತೆ ಕರ್ನಾಟಕ ರಾಜ್ಯ ಹಾಸ್ಟೆಲ್ ಹಾಗೂ ವಸತಿ ಶಾಲಾ ಹೊರಗುತ್ತಿಗೆ ನೌಕಕರ ಸಂಘಟನೆ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ನಗರ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಹಾಸ್ಟೆಲ್ ಹೊರ ಗುತ್ತಿಗೆ ನೌಕರರು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ, ತಾಲೂಕು ಕಲ್ಯಾಣಾಧಿಕಾರಿ ಕಿರುಕುಳ ನೀಡಿದ ಕಾರಣದಿಂದ ವಸತಿ ನಿಲಯದಲ್ಲಿ ಕೆಲಸ ಮಾಡುತ್ತಿದ್ದ ಬೋರಮ್ಮ ಕಳೆದ ಶನಿವಾರ ಆತ್ಮಹತ್ಯೆ ಶರಣಾಗಿದ್ದಾರೆ ಎಂದು ಆರೋಪಿಸಿದರು.
ಕಳೆದ 9 ವರ್ಷಗಳಿಂದ ಬೋರಮ್ಮ ವಿಜಯಪುರ ನಗರದ ಬಿಸಿಎಂ ವಸತಿ ನಿಲಯದಲ್ಲಿ ಅಡುಗೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಬಳಿಕ ಬಾಕಿ ವೇತನ ಹಾಗೂ ಕೆಲಸದ ವಿಚಾರವಾಗಿ ತಾಲೂಕು ಕಲ್ಯಾಣಾಧಿಕಾರಿ ಬಳಿ ಕೇಳಿದಾಗ, ಅಧಿಕಾರಿ ಮಹಿಳೆಗೆ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಕೂಡಲೇ ಮಹಿಳೆ ಸಾವಿಗೆ ಕಾರಣವಾದ ಅಧಿಕಾರಿಯನ್ನು ಕರ್ತವ್ಯದಿಂದ ಅಮಾನತು ಮಾಡಬೇಕು. ಮೃತ ಬೋರಮ್ಮ ಕುಟುಂಬಸ್ಥರಿಗೆ ಸರ್ಕಾರ ಉದ್ಯೋಗ ನೀಡಿ ನ್ಯಾಯ ಒದಗಿಸುವಂತೆ ಆಗ್ರಹಿಸಿದ್ದಾರೆ.