ETV Bharat / state

ರಕ್ತದಾನ ಮಾಡುವವರ ಮೇಲೆಯೂ 'ಕೊರೊನಾ' ನಿಗಾ

ಲಾಕ್ ಡೌನ್​ನಿಂದ ರಕ್ತ ಸಂಗ್ರಹಣೆ ಮಾಡುವ ರಕ್ತ ಭಂಡಾರ ಕೇಂದ್ರ ಸ್ಥಗಿತವಾಗಿತ್ತು. ಈಗ ಅನ್ ಲಾಕ್ ಆದ ಮೇಲೆ ರಕ್ತ ಅವಶ್ಯವಿರುವ ರೋಗಗಳಿಗೆ, ಅಪಘಾತ ಸಂದರ್ಭದಲ್ಲಿ ಅಗತ್ಯವಾಗಿ ಬೇಕಾಗಿದ್ದ ರಕ್ತ ಸಂಗ್ರಹಣೆ ಮತ್ತೆ ಆರಂಭಿಸಲಾಗಿದೆ.

Health Officers are checking Blood Donor
ರಕ್ತದಾನ ಮಾಡುವವರ ಮೇಲೆಯೋ ಆರೋಗ್ಯಾಧಿಕಾರಿಗಳ ನಿಗಾ
author img

By

Published : Sep 25, 2020, 8:45 PM IST

ವಿಜಯಪುರ: ಕೊರೊನಾ ವೈರಸ್ ಸಾಂಕ್ರಾಮಿಕ ರೋಗವಿರುವ ಕಾರಣ ದೇಶ್ಯಾದಂತ ರೋಗ ಹರಡದಂತೆ ಲಾಕ್ ಡೌನ್ ಮಾಡಲಾಯಿತು. ಮುಖಕ್ಕೆ ಮಾಸ್ಕ್, ಸ್ಯಾನಿಟೈಸರ್​ನಿಂದ ಕೈ ತೊಳೆಯುವುದನ್ನು ಕಡ್ಡಾಯ ಮಾಡಲಾಯಿತು. ಇದರಿಂದ ಸಾಮಾನ್ಯ ರೋಗಿಗಳ ಚಿಕಿತ್ಸೆಗೆ ಸಾಕಷ್ಟು ಹೊಡೆತ ಬಿದ್ದಿದೆ. ಲಾಕ್ ಡೌನ್​ನಿಂದ ರಕ್ತ ಸಂಗ್ರಹಣೆ ಮಾಡುವ ರಕ್ತ ಭಂಡಾರ ಕೇಂದ್ರ ಸ್ಥಗಿತವಾಗಿತ್ತು. ಈಗ ಅನ್ ಲಾಕ್ ಆದ ಮೇಲೆ ರಕ್ತ ಅವಶ್ಯವಿರುವ ರೋಗಗಳಿಗೆ, ಅಪಘಾತ ಸಂದರ್ಭದಲ್ಲಿ ಅಗತ್ಯವಾಗಿ ಬೇಕಾಗಿದ್ದ ರಕ್ತ ಸಂಗ್ರಹಣೆ ಮತ್ತೆ ಆರಂಭಿಸಲಾಗಿದೆ. ಇದರ ಜೊತೆ ರಕ್ತದಾನ ಮಾಡುವವರು ಕೊರೊನಾ ಬಾಧಿತರಾಗಿದ್ದಾರೆ, ಅಥವಾ ಇಲ್ಲ ಎನ್ನುವುದನ್ನು ಗುರುತಿಸಲು ಜಿಲ್ಲಾ ಆರೋಗ್ಯ ಇಲಾಖೆ ಮುಂದಾಗಿದೆ.

ರಕ್ತದಾನ ಮಾಡುವವರ ಮೇಲೆಯೂ ಆರೋಗ್ಯಾಧಿಕಾರಿಗಳ ನಿಗಾ

ರಕ್ತದಾನ ಅಥವಾ ಯಾವುದೇ ರಕ್ತದ ಕಾಯಿಲೆಯಿಂದ ಕೊರೊನಾ ಹರಡುವದಿಲ್ಲವೆಂದು ವಿಶ್ವ ಆರೋಗ್ಯ ಸಂಸ್ಥೆಯೇ ದೃಢಪಡಿಸಿದೆ. ಆದರೂ ರಕ್ತದಾನಿಗಳ ಆರೋಗ್ಯದ ಮೇಲೆ ಏಕೆ ನಿಗಾವಹಿಸಲಾಗುತ್ತಿದೆ ಎನ್ನುವ ಪ್ರಶ್ನೆ ಮೂಡುವುದು ಸಹಜ, ಒಬ್ಬ ವ್ಯಕ್ತಿಯಿಂದ ರಕ್ತ ಪಡೆಯಬೇಕಾದರೆ ಅವರಲ್ಲಿ ಯಾವುದೇ ರೋಗವಿದೆಯಾ? ಎನ್ನುವದನ್ನು ಖಚಿತ ಪಡಿಸಿಕೊಳ್ಳುತ್ತಾರೆ. ರಕ್ತದಾನ ಮಾಡುವವನಿಗೆ ಕೊರೊನಾ ಇದೆಯಾ? ಅಥವಾ ಇಲ್ಲವೋ ಎನ್ನುವ ಯಾವುದೇ ಟೆಸ್ಟ್ ಮಾಡುವುದಿಲ್ಲ. ಅಂಥ ಕೊರೊನಾ ಪಾಸಿಟಿವ್ ರೋಗಿಗಳನ್ನು ಗುರುತಿಸಲು ಇದು ಒಂದು ಮಾರ್ಗವಷ್ಟೇ, ರಕ್ತದಾನ ಮಾಡಿದ ಮೇಲೆ ಅವರಿಗೆ ಯಾವುದೇ ಅನಾರೋಗ್ಯ ಲಕ್ಷಣ ಕಂಡು ಬಂದರೆ ಅಂಥವರ ರಕ್ತವನ್ನು ನಿಷ್ಕ್ರಿಯಗೊಳಿಸಿ ಬೇರೆ ಯಾರಿಗೂ ನೀಡದೆ ರಕ್ತದಾನಿಗೆ ಕೊರೊನಾ ಚಿಕಿತ್ಸೆ ನೀಡಲು ಈ ಕ್ರಮ ಕೈಗೊಳ್ಳಲಾಗಿದೆ.

ಕೊರೊನಾ ವೈರಸ್ ಹರಡಿದ ಮೇಲೆ ಪಾಸಿಟಿವ್ ರೋಗಿಗಳನ್ನು ಅವರ ಕುಟುಂಬದವರನ್ನು ಸಮಾಜ ನೋಡುವ ದೃಷ್ಟಿ ಬದಲಾಗಿತ್ತು. ಈಗ ಅಂಥ ಪರಿಸ್ಥಿತಿಗಳು ಇಲ್ಲ. ಆದರೂ ಜನರಲ್ಲಿ ರೋಗದ ಭಯ ಕಾಡುತ್ತಲೇ ಇದೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಕೊರೊನಾ ಬೇಗ ಹರಡುತ್ತದೆ ಎನ್ನುವ ನಂಬಿಕೆ ಇರುವ ಕಾರಣ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳುವವರು ಹಿಂಜರಿಯುತ್ತಿದ್ದಾರೆ. ಕನಿಷ್ಟ ಪಕ್ಷ ರಕ್ತ ‌ನೀಡಲು ಬರುವ ದಾನಿಗಳ ಮೇಲೆ ನಿಗಾ ವಹಿಸಿ ಅವರಿಂದ ಮತ್ತಷ್ಟು ಕೊರೊನಾ ಹರಡದಂತೆ ನೋಡಿಕೊಳ್ಳುವ ಉದ್ದೇಶ ಆರೋಗ್ಯ ಇಲಾಖೆಯದ್ದಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.