ETV Bharat / state

ಪದವಿ ಪರೀಕ್ಷೆಗಳಲ್ಲಿ ಬಿಎಲ್​ಡಿಇ ಸಂಸ್ಥೆಯ ವಿದ್ಯಾರ್ಥಿನಿಯರಿಂದ ಉತ್ತಮ ಸಾಧನೆ - BLDE institute

ವಿದ್ಯಾರ್ಥಿನಿಯರು ಬಿಸಿಎ, ಬಿಎ ಮತ್ತು ಎಂಕಾಂ ಪರೀಕ್ಷೆಗಳಲ್ಲಿ ವಿಶ್ವವಿದ್ಯಾಲಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.

Good performance of female students of BLDE institute in various degree examinations
ವಿಜಯಪುರದ ಬಿಎಲ್​ಡಿಇ ಸಂಸ್ಥೆಯ ವಿದ್ಯಾರ್ಥಿನಿಯರು ವಿವಿಧ ಪದವಿ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ
author img

By

Published : Dec 16, 2022, 9:29 PM IST

Updated : Dec 16, 2022, 10:37 PM IST

ವಿಜಯಪುರ: ನಗರದ ಬಿಎಲ್​ಡಿಇ ಸಂಸ್ಥೆಯ ಶ್ರೀಮತಿ ಬಂಗಾರಮ್ಮ ಸಜ್ಜನ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಿಳಾ ಮಹಾವಿದ್ಯಾಲಯದ ಏಳು ವಿದ್ಯಾರ್ಥಿನಿಯರು ಕ್ರಮವಾಗಿ ಬಿಸಿಎ, ಬಿಎ ಮತ್ತು ಎಂಕಾಂ ಪರೀಕ್ಷೆಗಳಲ್ಲಿ ವಿಶ್ವವಿದ್ಯಾಲಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಆಗಸ್ಟ್‌ನಲ್ಲಿ ನಡೆಸಿದ ಪರೀಕ್ಷೆಯ ಪದವಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ ಈ ವಿದ್ಯಾರ್ಥಿನಿಯರು ಪ್ರಥಮ, ದ್ವಿತೀಯ ಸ್ಥಾನ ಹಾಗೂ ಚಿನ್ನದ ಪದಕ ಪಡೆದಿದ್ದಾರೆ.

ಬಿಸಿಎ ವಿಭಾಗ: ಬಿಸಿಎ ವಿಭಾಗದಲ್ಲಿ ವಿದ್ಯಾರ್ಥಿನಿ ತೈಜಿನ್ ಎಂ. ಬೇಪಾರಿ ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನದ ಪಡೆಯುವುದರ ಜೊತೆಗೆ ಚಿನ್ನದ ಪದಕ ಗಳಿಸಿದ್ದಾರೆ. ಇದೇ ವಿಭಾಗದಲ್ಲಿ ಗೀತಾ ಬಿ. ಹರನಟ್ಟಿ ದ್ವಿತೀಯ ಮತ್ತು ಸವಿತಾ ಬಿ.ಯಾಳವಾರ ತೃತಿಯ ಸ್ಥಾನ ಪಡೆದಿದ್ದಾರೆ.

ಬಿಎ ವಿಭಾಗ: ಬಿಎ ಪದವಿ ಪರೀಕ್ಷೆಯಲ್ಲಿ ಪಲ್ಲವಿ ಯರನಾಳ ಮೊದಲನೇ ಸ್ಥಾನ ಪಡೆದಿದ್ದಾರೆ. ಅತೀ ಹೆಚ್ಚು ಅಂಕ ಮತ್ತು ಅರ್ಥಶಾಸ್ತ್ರದಲ್ಲಿ ಅತೀ ಹೆಚ್ಚು ಅಂಕ ಗಳಿಸಿ ಎರಡು ಚಿನ್ನದ ಪಕದ ಗಳಿಸಿದ್ದಾರೆ. ಸುಹಾಸಿನಿ ಎಸ್. ಚೌಗುಲೆ 7ನೇ ಮತ್ತು ಪಲ್ಲವಿ ಡಿ. ತರಸೆ 10ನೇ ಸ್ಥಾನ ಸ್ಥಾನ ಪಡೆದಿದ್ದಾರೆ.

ಎಂಕಾಂ ವಿಭಾಗ: ಸ್ನಾತಕೋತ್ತರ ವಿಭಾಗದಲ್ಲಿ ಸಾವಿತ್ರಿ ಬಿ. ಹಾದಿಮನಿ ಎಂಕಾಂ ನಲ್ಲಿ ಪ್ರಥಮ ಸ್ಥಾನ ಮತ್ತು ಚಿನ್ನದ ಪಡೆಯುವ ಮೂಲಕ ಕಾಲೇಜುಗೆ ಕೀರ್ತಿ ತಂದಿದ್ದಾರೆ.

ಇದನ್ನೂ ಓದಿ:ಮುದ್ದೇಬಿಹಾಳ: ನೀರಿನ ಟ್ಯಾಂಕ್​ಗೆ ಬಿದ್ದು ಬಾಲಕ ಸಾವು

Last Updated : Dec 16, 2022, 10:37 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.