ETV Bharat / state

ತಮ್ಮ ನಿವಾಸಕ್ಕೆ ರಾಜಕೀಯ ಗುರುಗಳ ಹೆಸರಿಟ್ಟ ಜಿಗಜಿಣಗಿ - ಮನೆ ನಾಮಫಲಕ

ಹೊಸ ಮನೆ ನಿರ್ಮಿಸಿ ಆರೇಳು ತಿಂಗಳಾಗಿತ್ತು. ಇಂದು ರಾಮಕೃಷ್ಣ ಹೆಗಡೆ ಅವರ ಜನುಮ ದಿನವಾದ ಕಾರಣ ಒಳ್ಳೆಯ ದಿನವೆಂದು ಪೂಜೆ ಮಾಡಿ, ನಾಮಫಲಕ ಅಳವಡಿಸಿದ್ದೇನೆ. ಮುಂದಿನ ದಿನಗಳಲ್ಲಿ ಶಿಲೆಯಲ್ಲಿ ಇಬ್ಬರ ಹೆಸರನ್ನೂ ಕೆತ್ತಿಸಲಾಗುವುದು..

Jigajinagi
Jigajinagi
author img

By

Published : Aug 29, 2020, 5:31 PM IST

ವಿಜಯಪುರ : ಕೇಂದ್ರದ ಮಾಜಿ ಸಚಿವ, ವಿಜಯಪುರ ಸಂಸದ ರಮೇಶ ಜಿಗಜಿಣಗಿ ತಾವು ಕಟ್ಟಿಸಿರುವ ಹೊಸ ನಿವಾಸಕ್ಕೆ ಮಾಜಿ ಮುಖ್ಯಮಂತ್ರಿಗಳಾದ ರಾಮಕೃಷ್ಣ ಹೆಗಡೆ ಹಾಗೂ ಜೆ ಹೆಚ್ ಪಟೇಲ್ ಅವರ ಹೆಸರಿಟ್ಟಿದ್ದಾರೆ. ಈ ಮೂಲಕ ತಮ್ಮ ರಾಜಕೀಯ ನೆಲೆ ಗಟ್ಟಿಗೊಳಿಸಿದವರಿಗೆ ಗುರುವಂದನೆ ಸಲ್ಲಿಸಿದ್ದಾರೆ.

ಹೆಗಡೆ-ಪಟೇಲ್ ಸಂಸದ ಜಿಗಜಿಣಗಿ ಪಾಲಿಗೆ ಮಹಾನಾಯಕರು. ಅವರ ಸ್ಮರಣೆಗಾಗಿ, ತಾವು ಕಟ್ಟಿಸಿರುವ ಮನೆಗೆ ಮಹಾನಾಯಕರ ಹೆಸರನ್ನು ಇಟ್ಟಿದ್ದಾರೆ. ಈ ಇಬ್ಬರೂ ನಾಯಕರು ತಮ್ಮ ಮಕ್ಕಳಿಗೆ ರಾಜಕಾರಣದಲ್ಲಿ ಪ್ರೀತಿ ಕೊಟ್ಟರೋ ಇಲ್ಲವೋ ಗೊತ್ತಿಲ್ಲ. ಆದರೆ, ತಮಗೆ ರಾಜಕಾರಣದಲ್ಲಿ ಪ್ರೀತಿ ಕೊಟ್ಟಿದ್ದಾರೆ. ಹೀಗಾಗಿ ಇಬ್ಬರು ಮಹಾನಾಯಕರ ನಾಮಫಲಕವನ್ನು ಮನೆಗೆ ಅಳವಡಿಸಿರುವುದಾಗಿ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ.

ಹೊಸ ಮನೆ ನಿರ್ಮಿಸಿ ಆರೇಳು ತಿಂಗಳಾಗಿತ್ತು. ಇಂದು ರಾಮಕೃಷ್ಣ ಹೆಗಡೆ ಅವರ ಜನುಮ ದಿನವಾದ ಕಾರಣ ಒಳ್ಳೆಯ ದಿನವೆಂದು ಪೂಜೆ ಮಾಡಿ, ನಾಮಫಲಕ ಅಳವಡಿಸಿದ್ದೇನೆ. ಮುಂದಿನ ದಿನಗಳಲ್ಲಿ ಶಿಲೆಯಲ್ಲಿ ಇಬ್ಬರ ಹೆಸರನ್ನು ಕೆತ್ತಿಸಲಾಗುವುದು ಎಂದು ಹೇಳಿಕೊಂಡಿದ್ದಾರೆ. ಸಂಸದ ಜಿಗಜಿಣಗಿ ಸಹ ಜನತಾ ಪರಿವಾರದಿಂದಲೇ ರಾಜಕೀಯಕ್ಕೆ ಬಂದವರು. ಮುಂದೆ ಜೆ ಹೆಚ್ ಪಟೇಲ್‌, ರಾಮಕೃಷ್ಣ ಹೆಗಡೆ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.