ETV Bharat / state

ತಾಳಿಕೋಟಿ ಖಾಸ್ಗತೇಶ್ವರ ಮಠದಿಂದ ಹಳ್ಳಿ ಜನರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣೆ - ತಾಳಿಕೋಟಿ ಖಾಸ್ಗತೇಶ್ವರ ಮಠ

ವಿಜಯಪುರ ಜಿಲ್ಲೆ ತಾಳಿಕೋಟಿ ಖಾಸ್ಗತೇಶ್ವರ ಮಠದಿಂದ ಬಡ ಜನರಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಿಸಲಾಗ್ತಿದೆ.

Food kit distribution
ಆಹಾರ ಸಾಮಗ್ರಿಗಳ ಕಿಟ್ ವಿತರಣೆ
author img

By

Published : Jun 5, 2021, 1:20 PM IST

ಮುದ್ದೇಬಿಹಾಳ: ತಾಳಿಕೋಟಿ ಖಾಸ್ಗತೇಶ್ವರ ಮಠದ ಬಾಲ ಶಿವಯೋಗಿ ಸಿದ್ಧಲಿಂಗ ಸ್ವಾಮೀಜಿಗಳ ನೇತೃತ್ವದಲ್ಲಿ ಹಳ್ಳಿ ಜನರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಿಸಲಾಗ್ತಿದೆ.

ತಾಳಿಕೋಟಿ ಹಾಗೂ ಮುದ್ದೇಬಿಹಾಳ ತಾಲೂಕುಗಳ ಜನರು ಖಾಸ್ಗತೇಶ್ವರ ಮಠದ ಜೊತೆಗೆ ಒಳ್ಳೆಯ ಒಡನಾಟ ಇಟ್ಟುಕೊಂಡಿದ್ದಾರೆ. ಸದ್ಯ, ಲಾಕ್​​ಡೌನ್​ನಿಂದಾಗಿ ಕೆಲಸವಿಲ್ಲದೆ ಗ್ರಾಮೀಣ ಭಾಗದ ಜನರಿಗೆ ಊಟಕ್ಕೂ ಪರದಾಡಬೇಕಾದ ಪರಿಸ್ಥಿತಿ ಉಂಟಾಗಿದೆ. ಹಾಗಾಗಿ, ಮಠದ ವತಿಯಿಂದ ಆಹಾರ ಸಾಮಗ್ರಿಗಳ ಕಿಟ್ ವಿತರಿಸಲಾಗ್ತಿದೆ. ಸ್ವತಃ ಸ್ವಾಮೀಜಿಗಳೇ ಹಳ್ಳಿ ಹಳ್ಳಿಗೆ ತೆರಳಿ ಕಿಟ್ ವಿತರಿಸುವ ಕಾರ್ಯ ಮಾಡುತ್ತಿದ್ದಾರೆ.

ಖಾಸ್ಗತೇಶ್ವರ ಮಠದಿಂದ ಆಹಾರ ಸಾಮಗ್ರಿಗಳ ಕಿಟ್ ವಿತರಣೆ

18 ಹಳ್ಳಿಗಳ ಜನರಿಗೆ ಕಿಟ್ ವಿತರಣೆ: ಖಾಸ್ಗತೇಶ್ವರ ಮಠದಿಂದ ಈಗಾಗಲೇ ತಾಳಿಕೋಟಿ ತಾಲೂಕಿನ ಹರನಾಳ, ಹಡಗಿನಾಳ, ಕಲ್ಲದೇವನಹಳ್ಳಿ, ಗಡಿಸೋಮನಾಳ, ಕ್ಯಾತನಾಳ, ಮಸ್ಕಾನಾಳ, ನಾಗೂರ, ಹೊಸನಾಗೂರ, ಕ್ಯಾತನಡೋಣಿ, ಕ್ಯಾತನಡೋಣಿ ತಾಂಡಾ, ಜಲಪೂರ, ಜಲಪೂರ ತಾಂಡಾ, ಗಡಿಸೋಮನಾಳ ಎಲ್‌ಟಿ 1, ಗಡಿಸೋಮನಾಳ ಎಲ್‌ಟಿ 2, ತಿಳಗೂಳ, ಅಂಬಳೂರ, ಬೋಳವಾಡ, ಗೂಡಿಹಾಳ ಸೇರಿ 18 ಗ್ರಾಮಗಳ ಬಡಜನರಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಿಸಲಾಗ್ತಿದೆ. ಇನ್ನೂ 50 ಹಳ್ಳಿಗಳಿಗೆ ಕಿಟ್ ವಿತರಣೆ ಮಾಡುವ ಯೋಜನೆ ರೂಪಿಸಲಾಗಿದೆ.

ಶ್ರೀಗಳ ಮುಂದಾಳತ್ವ: ಖಾಸ್ಗತೇಶ್ವರ ಮಠದ ಹಿಂದಿನ ಪೀಠಾಧಿಪತಿಯಾಗಿದ್ದ ವಿರಕ್ತ ಶ್ರೀಗಳು ಲಿಂಗೈಕ್ಯರಾದ ನಂತರ ನೇಮಕಗೊಂಡಿರುವ ಬಾಲಶಿವಯೋಗಿ ಸಿದ್ಧಲಿಂಗ ಸ್ವಾಮೀಜಿ ಕಿಟ್ ವಿತರಣೆಯ ಮುಂದಾಳತ್ವ ವಹಿಸಿಕೊಂಡಿದ್ದಾರೆ. ಕಿಟ್ ಸಿದ್ಧಪಡಿಸುವ ಕಾರ್ಯದಲ್ಲಿ ಸ್ವತಃ ಸ್ವಾಮೀಜಿ ಕೂಡ ಕೈಜೋಡಿಸಿ ಇತರರನ್ನು ಪ್ರೋತ್ಸಾಹಿಸುವ ಕಾರ್ಯ ಮಾಡುತ್ತಿದ್ದಾರೆ. ತೊಗರಿ ಬೇಳೆ, ರವೆ, ಬೆಲ್ಲ, ಸಕ್ಕರೆ, ಅಕ್ಕಿ, ಮಸಾಲೆ ಪದಾರ್ಥಗಳನ್ನು ಒಳಗೊಂಡ ಕಿಟ್ ವಿತರಣೆ ಮಾಡಲಾಗ್ತಿದೆ.

ಲಾಕ್​​​ಡೌನ್​ ಜಾರಿಯಾದ ಬಳಿಕ ನಗರ ಪ್ರದೇಶ, ಸಣ್ಣ ಪಟ್ಟಣಗಳ ಜನರಿಗೆ ಸಾಕಷ್ಟು ಮಂದಿ ಆಹಾರ ಸಾಮಗ್ರಿಗಳನ್ನು ವಿತರಿಸುತ್ತಿದ್ದಾರೆ. ಆದರೆ, ಗ್ರಾಮೀಣ ಭಾಗದವರಿಗೆ ಯಾರೂ ಕಿಟ್ ಕೊಡಲು ಮುಂದೆ ಬರುತ್ತಿಲ್ಲ. ಹಳ್ಳಿ ಜನರು ಏನು ಪಾಪ ಮಾಡಿದ್ದಾರೆ?. ನಮ್ಮ ಮಠ ಕಷ್ಟದಲ್ಲಿದ್ದಾಗ ಭಕ್ತರು ಸಹಾಯ ಮಾಡಿದ್ದಾರೆ. ಈಗ ಅವರು ಕಷ್ಟದಲ್ಲಿರುವಾಗ ಸಹಾಯ ಮಾಡುವುದು ನಮ್ಮ ಕರ್ತವ್ಯ ಎಂದು ಸಿದ್ಧಲಿಂಗ ಸ್ವಾಮೀಜಿ ಹೇಳುತ್ತಾರೆ.

ಓದಿ : ಬಿಮ್ಸ್​​​ನಲ್ಲಿನ ಸೋಂಕಿತರ ಸಂಬಂಧಿಗಳ ಹಸಿವು ನೀಗಿಸುತ್ತಿವೆ ಬೆಳಗಾವಿಯ ಎನ್​ಜಿಒಗಳು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.