ETV Bharat / state

ಜುವೆಲ್ಲರಿ ಅಂಗಡಿ ದೋಚಲು ಬಂದವರಿಂದ ಗುಂಡಿನ ದಾಳಿ: ಸಾರ್ವಜನಿಕ ಕೈಗೆ ಸಿಕ್ಕಿ ಬಿದ್ದ ಖದೀಮರು - ETV Bharath Kannada news

ಚಿನ್ನ ಕದಿಯಲು ಬಂದ ಖದೀಮರು ಗಾಳಿಯಲ್ಲಿ ಗುಂಡು ಹಾರಿಸಿ ಸಾರ್ವಜನಿಕರನ್ನು ಹೆದರಿಸಿದ ಘಟನೆ - ಕಳ್ಳರನ್ನು ಪೊಲೀಸರಿಗೊಪ್ಪಿಸಿದ ಸಾರ್ವಜನಿಕರು - ಪುಣೆ ಮೂಲದ ಕಳ್ಳರೆಂದು ತನಿಖೆಯಲ್ಲಿ ಬಹಿರಂಗ

Firing by those who came to steal gold in Vijayapura
ಜುವೆಲರ್ಸ್ ಅಂಗಡಿ ದೋಚಲು ಬಂದವರಿಂದ ಗುಂಡಿನ ದಾಳಿ
author img

By

Published : Feb 13, 2023, 9:08 PM IST

ವಿಜಯಪುರ: ಜುವೆಲ್ಸರ್ ಶಾಪ್​ನಲ್ಲಿ ಚಿನ್ನ ಕದಿಯಲು ಬಂದಿದ್ದ ದುರ್ಷ್ಕಮಿಗಳು ಗಾಳಿಯಲ್ಲಿ ಗುಂಡು ಹಾರಿಸಿ ಸಾರ್ವಜನಿಕರನ್ನು ಹೆದರಿಸಿರುವ ಘಟನೆ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ನಡೆದಿದೆ. ಘಟನೆ ಸಿಂದಗಿ ಪಟ್ಟಣದ ಶಾಂತವೀರ ಮಠದ ಬೀದಿ ಪಕ್ಕದಲ್ಲಿ ಇರುವ ನ್ಯೂ ಚಾಮುಂಡೇಶ್ವರಿ ಜ್ಯುವೆಲರ್ಸ್ ಮಾಲೀಕ ಕಾಳು ಪತ್ತಾರ ಎಂಬುವವರಿಗೆ ಸೇರಿದ್ದಾಗಿದೆ. ಈ ಜುವೆಲರ್ಸ್​ಗೆ ಸಂಜೆ ನುಗ್ಗಿದ ದುಷ್ಕರ್ಮಿಗಳು ಗಾಳಿಯಲ್ಲಿ ಒಂದು‌ ಸುತ್ತು ಗುಂಡು ಹಾರಿಸಿದ್ದಾರೆ.

ಪಲ್ಸರ್ ಮೇಲೆ ಬಂದ ಐವರ ಖದೀಮರಲ್ಲಿ ಓರ್ವ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಗುಂಡಿನ ಶಬ್ದ ಕೇಳಿ ಬಂದ ಕೂಡಲೇ ಸ್ಥಳೀಯರು ಸುತ್ತ ಸೇರಿಕೊಂಡಿದ್ದಾರೆ. ಈ ವೇಳೆ ನಂಬರ್ ಇಲ್ಲದ ಪಲ್ಸರ್ ಬೈಕ್​ನಲ್ಲಿ ಕಿರಾತಕರು ಪರಾರಿಯಾಗಲು ಯತ್ನಿಸಿದ್ದಾರೆ. ಆಗ ಅಲ್ಲಿದ್ದ ಜನ ಇಬ್ಬರನ್ನು ಹಿಡಿದುಕೊಂಡು ಪೊಲೀಸರಿಗೆ ಒಪ್ಪಿಸಿದ್ದಾರೆ. ಪಲ್ಸರ್ ಬೈಕ್ ಸದ್ಯ ಪೊಲೀಸರ ವಶದಲ್ಲಿದೆ. ಮೂವರು ಸ್ಥಳದಿಂದ ಪರಾರಿಯಾಗಿದ್ದಾರೆ.

ವಶಕ್ಕೆ ಸಿಕ್ಕ ಇಬ್ಬರ ಬಳಿ ಒಂದು ಕಂಟ್ರೀ ಪಿಸ್ತೂಲ್ ಮತ್ತು ಮೂರು ಜೀವಂತ ಗುಂಡುಗಳು ಹಾಗೂ ಮಾರಕ ಶಸ್ತ್ರಗಳು ಪತ್ತೆಯಾಗಿವೆ. ತಾವು ಪುಣೆಯವರೆಂದು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪೊಲೀಸರ ಮುಂದೆ ತಾವು ಪುಣೆಯವರೆಂದು ಹೇಳುತ್ತಿರುವ ಖದೀಮರು ಸಿಂದಗಿ ಪಟ್ಟಣದಲ್ಲಿ ಮನೆ ಮಾಡಿರುವ ವಿಚಾರ ಜನರನ್ನು ಆತಂಕ ಮೂಡಿಸಿದೆ. ಸದ್ಯ ಪೊಲೀಸರ ವಶದಲ್ಲಿರುವ ಆಗುಂತಕರನ್ನು ಸಿಂದಗಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ಮಾಡಿ ಪರಿಶೀಲನೆ ನಡೆಸಿದರು.

ಇದನ್ನೂ ಓದಿ: ಗ್ಯಾಸ್​ ಬಲೂನ್​ ಸಿಲಿಂಡರ್​ ಸ್ಫೋಟ: ನಾಲ್ಕು ಸಾವು, ಹತ್ತು ಮಂದಿಗೆ ಗಾಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.